ಇಂದು ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ, ಕೊಮ್ಮನಾಳು, ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಹಾರನಹಳ್ಳಿ, ಬಾಳೆಕೊಪ್ಪ, ಕುಂಸಿ, ಚೋರಡಿ, ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಜನರು ಜನರು ಕೋವಿಡ್ ಬಾಧಿತರಾಗಿದ್ದಾರೆ ಇದು ತುಂಬಾ ಕಳವಳಕಾರಿ ವಿಷಯವಾಗಿದೆ ಜನರು ಸರಕಾರದ ಕಾರ್ಯಸೂಚಿಗಳನ್ನು ಪಾಲಿಸುವ ಜೊತೆಗೆ ಸ್ವಯಂ ಜಾಗೃತರಾಗಬೇಕು. ಆಗ ಮಾತ್ರ ಈ ಮಹಾಮಾರಿಯನ್ನು ಬುಡ ಮಟ್ಟದಿಂದ ಕಿತ್ತೊಗೆಯಲು ಸಾಧ್ಯವೆಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಪ್ರತಿಯೊಂದೂ ಮನೆಗೆ ಭೇಟಿ ನೀಡಿ ಕರೋನ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಕಾಯಿಲೆಯ ಬಗ್ಗೆ
ರೋಗದ ಬಗ್ಗೆ ಭಯ ಭೀತಿ ಬೇಡ ರೋಗದ ರೋಗದ ಗುಣಲಕ್ಷಣಗಳು ಕಂಡ ಕೂಡಲೇ ಕೋವಿಂಡ್ ಸೆಂಟರಿಗೆ ಕೂಡಲೆ ಬಂದು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮೊದಲ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಕರೋನ
ಶೀಘ್ರವಾಗಿ ಗುಣಪಡಿಸಬಹುದು. ಕೋವಿಡ್ ಸೆಂಟರ್ ನಲ್ಲಿ ಗುಣಮಟ್ಟದ ಆಹಾರವನ್ನು ಪ್ರತಿಯೊಬ್ಬರಿಗೆ ನೀಡುತ್ತಾರೆ ಹಾಗೂ ಸಮಯ ಸಮಯಕ್ಕೆ ವೈದ್ಯರುಗಳು ರೋಗಿಗಳಗಳಿಗೆ ಚಿಕಿತ್ಸೆಯನ್ನು ನೀಡುತ್ತಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಾಸಕರು ಕೋವಿಡ್ ನಿಂದ ಮೃತಪಟ್ಟ ಬಂಧುಗಳಿಗೆ ವಯಕ್ತಿಕ ಧನ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ದಂಢಾದಿಕಾರಿ ನಾಗರಾಜ್, ಇ.ಒ. ಕಲ್ಲಪ್ಪ, ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಂಜೀವ್ ಕುಮಾರ್, ನಿಕಟ ಪೂರ್ವ ಜಿ.ಪಂ. ಸದಸ್ಯೆ ಸೌಮ್ಯ ಬೋಜನಾಯ್ಕ್, ಮಹಾಶಕ್ತಿ ಕೇಂದ್ರದ ಅಧಕ್ಷರು ರಮೇಶ್ , ಪ್ರಧಾನ ಕಾರ್ಯದರ್ಶಿ ಕಿರಣ್ , ಆರೋಗ್ಯ ಇಲಾಖೆ ಅಧಿಕಾರಿಗಳು, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಗ್ರಾ.ಪಂ ಅಧಕ್ಷರು ಮತ್ತು ಉಪಾಧಕ್ಷರು, ಕಂದಾಯ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು.