ಶಿವಮೊಗ್ಗ. ಮೇ 24 : ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸುಗಳ ವ್ಯಾಸಂಗಕ್ಕಾಗಿ 2019-20ನೇ ಸಾಲಿಗೆ ಪ್ರವೇಶಾತಿಗಳು ಆರಂಭವಾಗಿದ್ದು, ಪಿ.ಯು.ಸಿ., ಐ.ಟಿ.ಐ., ಜೆ.ಒ.ಡಿ.ಸಿ ಹಾಗೂ ತತ್ಸಮಾನ(10+2) ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ 4ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಎಸ್.ಡಬ್ಲ್ಯೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳು, ಬ್ಯಾಂಕಿಂಗ್, ಕೆ.ಎ.ಎಸ್., ಐ.ಎ.ಎಸ್., ರೈಲ್ವೇ ಇಲಾಖೆ, ಎಫ್.ಡಿ.ಎ., ಮುಂತಾದವುಗಳಿಗೆ ಅವಕಾಶವಿದೆ. ಅಲ್ಲದೆ ಉನ್ನತ ವ್ಯಾಸಂಗ ಮಾಡಬಯಸುವವರಿಗೆ ಎಂ.ವಿ.ಎ., ಎಂ.ಎಫ್.ಎ., ಎಂ.ಫಿಲ್., ಪಿ.ಹೆಚ್.ಡಿ., ಮತ್ತು ಬೇರೇ ಕ್ಷೇತ್ರಗಳಾದ ಪತ್ರಿಕೋದ್ಯಮ, ಬಿ.ಪಿ.ಎಡ್., ಮುಂತಾದ ಕೋರ್ಸುಗಳನ್ನು ಕಲಿಯಲು ಅವಕಾಶವಿದೆ.
ದೃಶ್ಯಕಲೆಯ ಪದವಿಗಳನ್ನು ಸ್ವ-ಉದ್ಯೊಗ ಪ್ರಧಾನವಾಗಿ ರೂಪಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪಕಲೆಯ ಪದವೀಧರರು ಸ್ವಂತ ಸ್ಟುಡಿಯೋ ಆರಂಭಿಸಿ ಮೂರ್ನಾಲ್ಕು ಜನರಿಗೆ ಉದ್ಯೋಗ ನೀಡುತ್ತಿದ್ದಾರೆ. ಚಿತ್ರಕಲಾ ಪದವೀಧರರು ಚಲನಚಿತ್ರ ಧಾರಾವಾಹಿ, ದೂರದರ್ಶನಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದಲ್ಲದೇ ಎನಿಮೇಶನ್, ಪೋಸ್ಟರ್ ಡಿಸೈನ್, ಸ್ಕೆಚಿಂಗ್ನಲ್ಲಿ ಪಳಗಿದವರು ಬೇರೆ-ಬೇರೆ ವಾಣಿಜ್ಯ ಕಂಪನಿಗಳು, ಜಾಹಿರಾತು ಸಂಸ್ಥೆಗಳು, ಟೆಕ್ಸ್ಟೈಲ್ಸ್ ಡಿಸೈನ್, ಪತ್ರಿಕೋದ್ಯಮ ಫ್ಯಾಶನ್ ಡಿಸೈನ್ ಮುಂತಾದ ಕಡೆಗಳಲ್ಲಿ ಕೆಲಸ ಮಾಡಬಹುದಾಗಿದೆ.
ಬಾದಾಮಿ ಕೇಂದ್ರದಲ್ಲಿ ಶಿಲ್ಪಕಲೆಯಲ್ಲಿ ಪ್ರಾದೇಶಿಕವಾಗಿ ದೊರೆಯುವ ಚಾಲುಕ್ಯರ ವಾಸ್ತುಶಿಲ್ಪ ಮತ್ತು ಮೂರಿ ಶಿಲ್ಪಗಳನ್ನು ಪ್ರಧಾನವಾಗಿ ಅಭ್ಯಾಸ ಮಾಡಾಗುತ್ತಿದೆ. ಜೊತೆಗೆ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಸಂಪ್ರದಾಯ ಶೈಲಿಯ ಶಿಲ್ಪಗಳನ್ನು ಸಾಂದರ್ಭಿಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಶಿಲ್ಪಗಳನ್ನು ಕಲೆ, ಕಾಷ್ಠ, ಮಣ್ಣು, ಪಿ.ಒ.ಪಿ. ಮಾಧ್ಯಮಗಳಲ್ಲಿ ರಚಿಸಲು ಮಾಹಿತಿ ನೀಡಲಾಗುವುದು. ಶಿಲ್ಪಕಲೆ ಮಾತ್ರವಲ್ಲದೇ ಸಾಂಪ್ರದಾಯಿಕ, ಜನಪದ, ಆಧುನಿಕ ಹಾಗೂ ಸಮಕಾಲೀನ ಪದ್ಧತಿಯಲ್ಲಿಲ ಭಾವಚಿತ್ರ, ಸಂಶೋಧನಾ ಚಿತ್ರಣ, ನಿಸರ್ಗ ಚಿತ್ರಣ ಹಾಗೂ ಅಲಂಕಾರಿಕ ಚಿತ್ರಗಳನ್ನು ಅಭ್ಯಾಸ ಮಾಢಲಿಸಲಾಗುತ್ತಿದೆ ಬಾದಾಮಿ ಕೇಂದ್ರದಲ್ಲಿ ನಿರಂತರವವಾಗಿ ಪ್ರಖ್ಯಾತ ಕಲಾವಿದರು ಹಾಗೂ ಸೃಜನಶೀಲ ಯುವ ಕಲಾವಿದರಿಂದ ನಿಗಧಿತ ಅವಧಿಯಲ್ಲಿ ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸಗಳನ್ನು ನಡೆಸಲಾಗುವುದು.
ರಾಷ್ಟ್ರ ಹಾಗೂ ರಾಜ್ಯಮಟ್ಟದ ಕಲಾಶಿಬಿರ, ಕಾರ್ಯಾಗಾರ, ಕಲಾ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತವೆ. ಕೇಂದ್ರವು ನಾಡೋಜ ಡಾ.ಆರ್.ಎಂ.ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು ಹೊಂದಿದೆ. ಇಲ್ಲಿ ನಮ್ಮ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನಕ್ಕೆ ಹಾಗೂ ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಆಸಕ್ತರು ಮಾಹಿತಿಗಾಗಿ ಮೊ.9449256814, 9448580056ನ್ನು ಸಂಪರ್ಕಿಸುವಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಬಾದಾಮಿ ಕೇಂದ್ರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.