ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದ ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್ ಹೊಟೇಲ್‌ನಲ್ಲಿ ಜನವರಿ 20ರಿಂದ 29ರವರೆಗೆ ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್, ಚೋರ್ ಮಚಾಯೇ ಶೋರ್ ವಿಶೇಷ ಆಹಾರ ಮೇಳ ಆಯೋಜಿಸಲಾಗಿದೆ.
ಮಲೆನಾಡಿನಲ್ಲಿ ಡೆಲ್ಲಿಯ ವೈವಿಧ್ಯ ತಿಂಡಿ ತಿನಿಸುಗಳನ್ನು ಸವಿಯಲು ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್ ಅವಕಾಶ ಕಲ್ಪಿಸಿದ್ದು, ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್ ವಿಶೇಷತೆಯೊಂದಿಗೆ ಕೂಡಿರಲಿದೆ. 40ಕ್ಕೂ ಹೆಚ್ಚು ವಿವಿಧ ಆಹಾರ ಸವಿಯಲು ಲಭ್ಯವಿದೆ.
ಸುಪ್ರಸಿದ್ಧ ಚಾಟ್ಸ್, ಸ್ವೀಟ್ಸ್, ಲಸ್ಸಿ, ದೇಶಿ ಅಡುಗೆ, ಎಲ್ಲರಿಗೂ ಇಷ್ಟವಾಗಬಲ್ಲ ತಿಂತಿ ತಿನಿಸುಗಳ ರುಚಿಯನ್ನು ಸವಿಯಬಹುದಾಗಿದೆ. ಮಧ್ಯಾಹ್ನ 12.30ರಿಂದ 3.30ರವರೆಗೆ, ರಾತ್ರಿ 7 ರಿಂದ 11ರವರೆಗೂ ಡೆಲ್ಲಿ ಫುಡ್ ಫೆಸ್ಟಿವಲ್‌ನಲ್ಲಿ ಆಹಾರ ಸವಿಯಬಹುದಾಗಿದೆ.
ಎಲ್ಲ ಶುಭ ಸಮಾರಂಭಗಳಿಗೆ 150-200 ಆಸನಗಳ ವ್ಯವಸ್ಥೆ ಹೊಂದಿರುವ ಆಧುನಿಕ ಸಭಾಂಗಣ ಕೂಡ ಇದೆ. ಜೈಲ್ ಕಾನ್ಸೆಪ್ಟ್ ಥೀಮ್‌ನೊಂದಿಗೆ ಹೊಟೇಲ್ ಒಳಾಂಗಣ ಸಿದ್ಧಪಡಿಸಲಾಗಿದೆ.
ಡೆಲ್ಲಿ ಸ್ಟ್ರೀಟ್ ಫುಡ್ ಫೆಸ್ಟಿವಲ್ ಕುರಿತು ಗ್ರೀನ್ ವ್ಯೂವ್ ಕ್ಲಾರ್ಕ್ಸ್ ಇನ್
ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ಸೈಯದ್ ಅಯಾನ್ ಸಂಪೂರ್ಣ ವಿವರಣೆ ನೀಡಿದರು. ಜನರಲ್ ಮ್ಯಾನೇಜರ್ ಆಶಿಶ್ ಧವನ್, ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.