ವರದಿ: ಜಯಂತ್ ಮೈಸೂರು ೦೪.೦೮.೨೦೧೯
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಮೂವತ್ತು ಸಾವಿರ ಮತಗಳ ಅಂತರದಿಂದ ಸೋಲಿಸಿ ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿಟಿ ದೇವೇಗೌಡರು ಜೆಡಿಎಸ್ ಪಕ್ಷದ ವಿರುದ್ಧ ಮುನಿಸಿಕೊಂಡು ತಮ್ಮ ಹಾದಿಯನ್ನು ಮತ್ತೊಂದು ಮಗ್ಗಲಿಗೆ ಹಾಕಿಕೊಂಡಿದ್ದಾರೆ.
ಕುಮಾರಸ್ವಾಮಿ ಅವರ ಸಂಪುಟದಲ್ಲಿ ತಮಗೆ ಉತ್ತಮವಾದ ಸಚಿವ ಸ್ಥಾನ ನೀಡದೆ ಜನಪರ ಕಾರ್ಯಗಳನ್ನು ನಿರ್ವಹಿಸಲಾಗದೆ ಇರುವ ಸಚಿವ ಸ್ಥಾನ ನೀಡಿದ್ದಾರೆ ಅದರಲ್ಲೂ ಗೌಡರ ಬೀಗರು ಆಗಿರುವ ಮೈಸೂರು ವಿವಿಯ ಮಾಜಿ ಕುಲಪತಿ ರಂಗಪ್ಪ ಅವರ ಹಿಡಿತದಲ್ಲಿದ್ದ ಉನ್ನತ ಶಿಕ್ಷಣ ಖಾತೆಯನ್ನು ಅದರಿಂದ ಆಚೆ ತರುವಲ್ಲಿ ಕಷ್ಟಕರವಾಗಿದ್ದ ಜಿಟಿ ದೇವೇಗೌಡ ಅವರಿಗೆ ಮುಂಬರುವ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಹರೀಶ್ ಗೌಡ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿಯ ಉಪ ಚುನಾವಣೆಯಲ್ಲಿ ತಮ್ಮ ಹರೀಶ್ ಗೌಡರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ತಮ್ಮ ಪುತ್ರ ಹರೀಶ್ ಗೌಡನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು ಅವರ ಜಾಣ್ಮೆಯ ನಡೆಯಾಗಿದೆ ಇವೆಲ್ಲದಕ್ಕೂ ಹುಣಸೂರಿನ ಮತದಾರರು ಯಾರಿಗೆ ಆಶೀರ್ವದಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ