ಶಿವಮೊಗ್ಗ,ಜುಲೈ 31: ಮಲೆನಾಡು ಪ್ರದೇಶವಾದ ಶಿವಮೊಗ್ಗದಲ್ಲಿ ಗೊಣ್ಣೆಹುಳುಗಳ ಬಾಧೆ ಕಂಡುಬರುತ್ತಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳವಂತೆ ತೋಟಗಾರಿಕೆ ಇಲಾಖೆ ತಿಳಿಸಿದೆ. ಮಳೆಗಾಲದಲ್ಲಿ ಇದರ ತೊಂದರೆಯು ಹೆಚ್ಚಾಗಿರುವ ಕಾರಣ ಅಡಿಕೆ ಬೆಳೆಯ ಉತ್ಪಾದನೆಯು ಕುಂಠಿತವಾಗುವುದಕ್ಕೆ ಕಾರಣವಾಗಿದೆ.
ಹುಳುಗಳು ಎಳೆ ಬೇರನ್ನು ಕಡಿದು ತಿನ್ನುತ್ತವೆ. ಅಂತಹ ಮರದ ಎಲೆಗಳು ಹಳದಿಯಾಗುತ್ತವೆ, ಮರಗಳು ಬುಡದಿಂದ ಮೇಲಕ್ಕೆ ಚೂಪಾಗುತ್ತದೆ. ಸಣ್ಣ ಕಾಯಿಗಳು ಉದುರುತ್ತವೆ. ಕ್ರಮೇಣ ಈ ಹುಳುಗಳ ಕೊರತೆಗೆ ಒಳಗಾದ ಮರಗಳು ಒಣಗುತ್ತವೆ.
ರೈತರು ಈ ಹುಳುಗಳ ನಿರ್ವಹಣೆಗೆ ಮುಂಗಾರು ಹಂಗಾಮಿನ ಮೊದಲ ಮಳೆ ಬಿದ್ದ ಕೂಡಲೆ ಆ ದಿನ ರಾತ್ರಿ 7.30 ರಿಂದ 8.30 ರ ಒಳಗೆ ದುಂಬಿಗಳನ್ನು ದೀಪಾಕರ್ಷ ಮಾಡಿ ನಾಶಪಡಿಸಬೇಕು.
ಬೇವು, ಪೇರಲ ಮುಂತಾದ ಗಿಡಗಳ ಟೊಂಗÉಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ಬದುಗಳ ಮೇಲೆ ಇಡುವುದರಿಂದ ದುಂಬಿಗಳು ಆಕರ್ಷಿಸಲ್ಪಟ್ಟು ಸಾಯುತ್ತದೆ. 10.ಮಿಲೀ ಕ್ಲೋರೋಪೈರಿಫಾಸ್ 20 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಬುಡಕ್ಕೆ ಹಾಕಬೇಕು. ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದರಿಂದ ಗೊಣ್ಣೆಹುಳುಗಳ ಸಮಸ್ಯೆಯನ್ನು ನಿವಾರಿಸುವುದು ಅವಶ್ಯಕವಾಗಿದೆ.

error: Content is protected !!