ಶಿವಮೊಗ್ಗ: ನವೆಂಬರ್ 12 : ಶಿವಮೊಗ್ಗ ಜಿಲ್ಲೆಂiÀiಲ್ಲಿ ಮುಖ್ಯವಾಗಿ ಮಲೆನಾಡು ತಾಲ್ಲೂಕುಗಳಾದ ಹೊಸನಗರ, ಸಾಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಗೇರು ಬೆಳೆಯನ್ನು ಹೆಚ್ಚಿನದಾಗಿ ಬೆಳೆಯುತ್ತಿದ್ದು, ಈ ಬೆಳೆಯ ಉತ್ಪಾದನೆ ಕುಂಠಿತಕ್ಕೆ ಟೀ ಸೊಳ್ಳೆಯ ಹಾನಿಯು ಪ್ರಮುಖವಾಗಿರುತ್ತದೆ.
ಗೇರಿನಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲನ್ನು ಚೂಪಾದ ಕೊಂಬಿನಿಂದ ಚುಚ್ಚಿ ರಸ ಹೀರುವುದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಶೇ. 25 ರಿಂದ 75 ರಷ್ಟು ಫಸಲು ನಷ್ಟವಾಗುವ ಸಂಭವವಿರುತ್ತದೆ. ಆದ್ದರಿಂದ ರೈತರು ಚಿಗುರು ಪ್ರಾರಂಭವಾಗುವ ಹಂತದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮುಂದೆ ಆಗಬಹುದಾದ ಹಾನಿಗಳನ್ನು ತಡೆಗಟ್ಟಬಹುದಾಗಿದೆ.
ಗೇರು ಗಿಡಗಳಲ್ಲಿ ಕಂಡುಬರುವ ಒಣಗಿದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋರ್ಡೋ ಅಥವಾ ಕಾಪರ್ ಆಕ್ಸಿ ಕ್ಲೋರೈಡ್ ದ್ರಾವಣ ಹಚ್ಚಬೇಕು. ಬುಡದ ಸುತ್ತಲು ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು. ಗೋಡಂಬಿ ಬೆಳೆಯಲ್ಲಿ ಟೀ ಸೊಳ್ಳೆ ಕೀಟ ನಿಯಂತ್ರಣಕ್ಕೆ ಡೈಮಿಥೋಯೇಟ್ 1.75 ಮಿ.ಲೀ. ಅಥವಾ ಲ್ಯಾಂಬ್ಡಾ ಸೈಲೋಥ್ರಿನ್ 1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.