ಶಿವಮೊಗ್ಗ ಸೆಪ್ಟೆಂಬರ್ 12 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮವು 2022-23ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಸಮುದಾಯಗಳಾದ ಕ್ರೈಸ್ತ, ಮುಸಲ್ಮಾನ, ಜೈನ್ಸ್, ಆಂಗ್ಲೋಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದವರಿಗೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಹಾಗೂ ವ್ಯಾಪಾರ/ಉದ್ಯಮಿಗಳಿಗೆ ನೇರ ಸಾಲ ಯೋಜನೆಯಡಿ ಸೌಲಭ್ಯ ಒದಗಿಸಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿ 18 ರಿಂದ 55 ವರ್ಷದೊಳಗಿನ 01 ಎಕರೆಯಿಂದ 05 ಎಕರೆಯವರೆಗೆ ಖುಷ್ಕಿ ಜಮೀನು ಹೊಂದಿರುವವರು ಈ ಸೌಲಭ್ಯ ಪಡೆಯಬಹುದು. ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.96,000 ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,03 ಲಕ್ಷಗಳ ಒಳಗಿರಬೇಕು.

ವ್ಯಾಪಾರ/ಉದ್ಯಮಿಗಳಿಗೆ ನೇರಸಾಲ ಯೋಜನೆಯಡಿ ನಿಗಮಕ್ಕೆ ಆಸ್ತಿಯ ಅಡಮಾನದ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುವುದು. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ಒಂದು ಕುಟುಂಬದ ಒಬ್ಬರಿಗೆ ಮಾತ್ರ ನೀಡಲಾಗುವುದು. ಕುಟುಂಬದ ವಾರ್ಷಿಕ ಆದಾರ ರೂ. 08.00 ಲಕ್ಷಗಳಿಗಿಂತ ಕಡಿಮೆ ಇರುವ ಅರ್ಜಿದಾರರಿಗೆ ರೂ. 20.00 ಲಕ್ಷದವರೆಗೆ ಶೆ. 4%ರ ಬಡ್ಡಿದರಲ್ಲಿ ಹಾಗೂ ರೂ. 08 ಲಕ್ಷದಿಂದ ರೂ. 15.00 ಲಕ್ಷದವರೆಗೆ ಇರುವ ಅರ್ಜಿದಾರನಿಗೆ ರೂ. 20.00 ಲಕ್ಷದವರೆಗೆ ಶೆ. 6% ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ಆಸಕ್ತರು www.kmdconline.karnataka.gov.in ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಸಲ್ಲಿಸಿ, ಹಾರ್ಡ್ ಕಾಪಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ದಿ: 15/11/2022 ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ನಂಜಪ್ಪ ಆಸ್ಪತ್ರೆ ಮುಂಭಾಗದ ರಸ್ತೆ, ಅಚ್ಯುತರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ, ದೂ.ಸಂ.: 08182-228262ಗಳನ್ನು ಸಂಪರ್ಕಿಸುವುದು.

error: Content is protected !!