ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಶಿವಮೊಗ್ಗ 2022 23ರ ಸಾಲಿನಲ್ಲಿ ಯುವಜನರು ಸ್ವಾವಲಂಬಿಯಾಗಿ ಬದುಕಲು ಸಹಾಯವಾಗುವ ಉದ್ದೇಶದಿಂದ ಕೌಶಲ್ಯ ಆಧಾರಿತ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮವನ್ನು ಹಿಂದೂ ಯುವತಿ ರಕ್ಷತಿ ಮಂಡಳಿ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು
ಈ ಸಂಬಂಧವಾಗಿ ಯುವತಿಯರಿಗಾಗಿ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು 04.1. 2023 ರಂದು ಶಿವಮೊಗ್ಗ ಜಿಲ್ಲೆಯ ಸುತ್ತು ಕೋಟೆ ಗ್ರಾಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಅಶೋಕ್ ನಾಯಕರವರು ಹೊಲಿಗೆ ತರಬೇತಿ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಈ ತರಬೇತಿಗೆ ಚಾಲನೆ ನೀಡಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ್ ನಾಯಕರವರು ನೆಹರು ಯುವ ಕೇಂದ್ರವು ಗ್ರಾಮದ ಮಹಿಳೆಯರಿಗಾಗಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋವನ್ನು ಪಡೆದುಕೊಳ್ಳಬೇಕು ಮುಂದಿನ ದಿನಗಳಲ್ಲಿ ಸ್ವಉದ್ಯೋಗ ಮಾಡಿಕೊಂಡಿರುವವರು ಇತರರಿಗೆ ತರಬೇತಿ ನೀಡುವ ನೀಡುವುದರಿಂದ ಗ್ರಾಮದಲ್ಲಿ ಸ್ವಾವಲಂಬಿಯಾಗಿ ಬದುಕಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಯುವತಿಯರಿಗೆ ಹೊಲಿಗೆ ಕಲಿಯಲು ಬೇಕಾದ ಕಿಟ್ ಗಳನ್ನ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ತಾಲೂಕ ಪಂಚಾಯಿತಿ ಸದಸ್ಯರಾದ ಷಣ್ಮುಖಪ್ಪನವರು ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಉಲ್ಲಾಸ್ ಕೆ ಟಿ ಕೆ ಹರಮಘಟ್ಟ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಶಾರದಮ್ಮ ಹಿಂದು ಯುವತಿ ರಕ್ಷತಿ ಯುವತಿ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ ಶ್ರೀಮತಿ ಸುಮಾ ರವಿ ಮತ್ತು ಊರಿನ ಗ್ರಾಮಸ್ಥರು ತರಬೇತಿ ಪಡೆಯುವ ಶಿಬಿರಾರ್ಥಿಗಳು ಉಪಸ್ಥಿತರಿದ್ದರು