ಕೋಳಿ ಮರಿಗಳು ಸಾಕಾಣಿಕೆ ಕೇಂದ್ರಕ್ಕೆ ಬರುವ ಮುನ್ನ ಕೈಗೊಳ್ಳಬೇಕಾದ ಪೂರ್ವಭಾವಿ ಸಿದ್ಧತೆಗಳು:
- ಕೋಳಿಮನೆಯು ಧೂಳಿನಿಂದ ಮುಕ್ತವಾಗಿರಬೇಕು. ಪ್ರತೀ ಬಾರಿಯೂ ಹಿಂದಿನ ತಂಡದ ಕೋಳಿಗಳ ಹಿಕ್ಕೆ/ ಸತ್ತೆಯನ್ನು ಸ್ವಚ್ಛಗೊಳಿಸಬೇಕು.
- ಕೋಳಿಮನೆ, ತಂತಿ ಜಾಲರಿ ಹಾಗೂ ಛಾವಣಿಯ ಧೂಳನ್ನು ಚೆನ್ನಾಗಿ ಗುಡಿಸಿ, ನೆಲಕ್ಕೆ ಅಂಟಿರಬಹುದಾದ ಹಿಕ್ಕೆ/ಸತ್ತೆಯನ್ನು ಕೆರೆದು ತೆಗೆದು ಮನೆಯನ್ನು ಪೂರ್ಣ ಸ್ವಚ್ಛಗೊಳಿಸಬೇಕು. ಮನೆಯ ಸುತ್ತಲಿನ ಜಾಗವನ್ನು ಶುಚಿ ಮಾಡಿರಬೇಕು.
- ಎಲ್ಲಾ ಸಲಕರಣೆಗಳನ್ನು ಡಿಟರ್ಜೆಂಟ್ ದ್ರಾವಣದಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿ, ನೀರಿನಲ್ಲಿ ತೊಳೆದು, ಕ್ರಿಮಿನಾಶಕ ದ್ರಾವಣದಲ್ಲಿ ಅದ್ದಿ, ಬಿಸಿಲಿನಲ್ಲಿ ಒಣಗಿಸಿ ನಂತರ ಉಪಯೋಗಿಸಬೇಕು.
- ನೆಲಕ್ಕೆ ಬ್ಲೀಚಿಂಗ್ ಪುಡಿ ಅಥವಾ ವಾಶಿಂಗ್ ಸೋಡಾ ಪುಡಿಯನ್ನು ಸಿಂಪಡಿಸಿ, ಆಮೇಲೆ ಛಾವಣಿಯಿಂದ ಪ್ರಾರಂಭ sಮಾಡಿ ಇಡೀ ಕೋಳಿ ಮನೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಬೇಕು.
- ನಂತರ, ಮಾರುಕಟ್ಟೆಯಲ್ಲಿ ದೊರೆಯುವ ಕ್ರಿಮಿ (ಸೋಂಕು) ನಾಶಕ ಔಷಧಿಗಳಲ್ಲಿ ಯಾವುದಾದರೊಂದು ತಯಾರಕರ ಸೂಚನೆಯ ಪ್ರಕಾರ ನೀರಿನಲ್ಲಿ ಬೆರೆಸಿ ತೊಳೆಯಬೇಕು. ಉದಾಹರಣೆ: ಶೇ.10 ಫಾರ್ಮಲಿನ್, ಆಸಿಫರ್, ಆಲ್ಡಿಪಾಲ್, ಡಿಸ್‍ಪಾಲ್ ಮುಂತಾದವು. ಕೋಳಿ ಹಿಕ್ಕೆ ಅಥವಾ ಸತ್ತೆ ಅಂಟಿಕೊಂಡಿದ್ದರೆ ಸೊಂಕುನಾಶಕ ದ್ರಾವಣ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಾಲಾರದೆಂಬುದನ್ನು ಗಮನದಲ್ಲಿಡಬೇಕು.
- ಆನಂತರ ನೆಲ ಮತ್ತು ಗೋಡೆಗೆ ಸುಣ್ಣ ಬಳಿದ, ಸ್ವಚ್ಛ ಮತ್ತು ಹೊಸ ಭತ್ತದ ಹೊಟ್ಟನ್ನು 2 ರಿಂದ¸ 3 ಇಂಚು ದಪ್ಪ ನೆಲದ ಮೇಲೆ ಹರಡಿ, ಅದರ ಮೇಲೆ 5 ರಿಂದ 6 ಪದರು ಹಳೆ ವೃತ್ತ ಪತ್ರಿಕೆಗಳನ್ನು ಹಾಕಬೇಕು.
- ತದನಂತರ, ಬಿಸಿಬುಟ್ಟಿಗಳಿಗೆ ಬಲ್ಬ್ ಹಾಕಿ ಕಟ್ಟಬೇಕು ಮತ್ತು ಮರಿತಡೆಗಳನ್ನು ಬಿಸಿಬುಟ್ಟಿ ಅಂಚಿನಿಂದ 2.5 ಅಡಿ ದೂರ ಇರುವಂತೆ ಇಡಬೇಕು.
- ಕೊನೆಯದಾಗಿ ಮತ್ತೊಮ್ಮೆ ಸೊಂಕುನಾಶಕ ಔಷಧಿಯನ್ನು ಸಿಂಪಡಿಸಿ, ತಂತಿಜಾಲರಿ ಇರುವ (ಗೋಡೆ) ಭಾಗವನ್ನು ಪ್ಲಾಸ್ಟಿಕ್ ಪರದೆಯಿಂದ ಮುಚ್ಚಿ ಕೋಳಿ ಮನೆಯಲ್ಲಿ ಬಿಸಿ ವಾತಾವರಣವಿರುವಂತೆ ನೋಡಿಕೊಳ್ಳಬೇಕು.
- ಮನೆಯ ಪ್ರವೇಶದ್ವಾರದಲ್ಲಿ ಕ್ರಿಮಿನಾಶಕ ಕಾಲೊರಸು ಇಡಬೇಕು.
- ಕೋಳಿಮರಿಗಳು ಬರುವ 8 ಗಂಟೆಗಿಂತ ಮುಂಚೆ ಬಿಸಿಬುಟ್ಟಿಯಲ್ಲಿನ ವಿದ್ಯುತ್ ದೀಪಗಳನ್ನು ಬೆಳಗಿಸಿ, ನೀರುಣಿಕೆಯಲ್ಲಿ ನೀರನ್ನಿಟ್ಟು, ಮುಸುಕಿನ ಜೋಳದ ನುಚ್ಚನ್ನು ವೃತ್ತ ಪತ್ರಿಕೆ ಮೇಲೆ ಹರಡಿರಬೇಕು.
ಕೃತಕ ಕಾವು ಕೊಡುವುದು:
ಕೋಳಿ ಮರಿಗಳು ಮೊದಲ ಮೂರ್ನಾಲ್ಕು ವಾರಗಳವರೆಗೆ ತಮ್ಮ ದೇಹದ ಉಷ್ಣತೆಯನ್ನು ಸಮಸ್ಥಿತಿಯಲ್ಲಿಡಲು ಸಾಮರ್ಥ್ಯ ಹೊಂದಿಲ್ಲದಿರುವುದರಿಂದ ಆ ಅವಧಿಯಲ್ಲಿ ಅವುಗಳಿಗೆ ಕೃತಕವಾಗಿ ಸೂಕ್ತ ಶಾಖ ಒದಗಿಸುವುದು ಅತ್ಯವಶ್ಯಕ.
ಎರಡು ಬಗೆಯಲ್ಲಿ ಕಾವು ಕೊಡಬಹುದು.
- ವಿದ್ಯುತ್ ಬಲ್ಬ್ ಮತ್ತು ಬಿಸಿಬುಟ್ಟಿ ಬಳಸಿ
- ವರ್ಣಾತೀತ ಬಲ್ಬ್ ಉಪಯೋಗಿಸಿ.
ಪ್ರತಿ 250 ಮರಿಗಳಿಗೆ 3 ರಿಂದ 4 ವಿದ್ಯುತ್ ಬಲ್ಬ್‍ಗಳನ್ನು ಅಳವಡಿಸಿದ ವೃತ್ತಾಕಾರದ ಒಂದು ಬಿಸಿಬುಟ್ಟಿ ಸಾಕಾಗುತ್ತದೆ. ವರ್ಣಾತೀತ ಬಲ್ಬ್‍ಗಳಾದಲ್ಲಿ 250 ವ್ಯಾಟ್‍ನ 2 ಬಲ್ಬ್‍ಗಳು ಬೇಕಾಗುತ್ತದೆ ಮತ್ತು ಬಿಸಿಬುಟ್ಟಿಯ ಅವಶ್ಯಕತೆ ಇರುವುದಿಲ್ಲ.
ಕೋಳಿ ಮರಿಗಳು ಶಾಖದ ಮೂಲದಿಂದ ದೂರ ಹೋಗದಂತೆ ರಕ್ಷಿಸಲು 18 ಇಂಚು ಎತ್ತರದ ತಗಡು ಅಥವಾ ಗಟ್ಟಿರಟ್ಟಿನಿಂದ ಮಾಡಲಾದ ಮರಿತಡೆಗಳನ್ನು ಇಡಬೇಕು. ಬಿಸಿಲು ಹೆಚ್ಚಾಗಿರುವ ಪ್ರದೇಶದಲ್ಲಿ 18 ಅಂಗುಲ ಎತ್ತರದÀಂತೆ ಜಾಲರಿಯ ಮರಿತಡೆಗಳನ್ನು ಬಳಸಬಹುದು.
ಮರಿಗಳಿಗೆ ಈ ಕೆಳಗಿನಂತೆ ಶಾಖ ಒದಗಿಸಬೇಕು:
1ನೇ ವಾರ 950ಈ (33-350ಅ)
2ನೇ ವಾರ 900ಈ (31-32.50ಅ)
3ನೇ ವಾರ 850ಈ (28-300ಅ)
4ನೇ ವಾರ 800ಈ (26-280ಅ) ಅವಶ್ಯಕತೆಗಿಂತ ಹೆಚ್ಚಿನ ಶಾಖವನ್ನು ಒದಗಿಸಬಾರದು. ಒಂದು ಸಾಮಾನ್ಯ ಸೂತ್ರವೆಂದರೆ, ಎಲ್ಲಾ ಕೋಳಿಮರಿಗಳು ¯ವಲವಿಕೆಯಿಂದ ಓಡಾಡಿಕೊಂಡು, ಆಹಾರ ಮತ್ತು ನೀರು ಸೇವಿಸುತ್ತಿದ್ದರೆ ಅವುಗಳಿಗೆ ಸೂಕ್ತ ಪ್ರಮಾಣದಲ್ಲಿ ಶಾಖ ಸಿಗುತ್ತಿದೆ ಎಂದರ್ಥ. ಅಧಿಕ ಶಾಖ ಒದಗಿಸಿದಲ್ಲಿ, ಮರಿಗಳು ನಿರ್ಜಲೀಕರಣಕ್ಕೆ ಒಳಗಾಗಬಹುದು. ಅಲ್ಲದೇ ಅವುಗಳಲ್ಲಿನ ಭಂಡಾರ ಹೀರುವಿಕೆ ನಿಧಾನಗೊಳ್ಳುತ್ತದೆ.
ಸಲಕರಣೆಗಳ ಜೊಡಣೆ:
ಭತ್ತದ ಹೊಟ್ಟಿನ ಮೇಲೆ ಹಾಕಿರುವ ವೃತ್ತಪತ್ರಿಕೆ (ಕಾಗದ) ಗಳನ್ನು 5 ರಿಂದ 7 ದಿನಗಳ ನಂತರ ತೆಗೆದು ಹಾಕಬೇಕು.
ಸಾಕಷ್ಟು ಪ್ರಮಾಣದಲ್ಲಿ ಮೇವುಣಿಕೆ ಮತ್ತು ನೀರುಣಿಕೆಗಳನ್ನು ವೃತ್ತಾಕಾರವಾಗಿ ಒಂದಾದನಂತರ ಮತ್ತೊಂದು ಬರುವಂತೆ ಜೋಡಿಸಬೇಕು.
ಒಂದು ದಿನದ ಮರಿಗಳನ್ನು ಬಿಸಿಬುಟ್ಟಿಯ ಕೆಳಗಡೆ ಬಿಟ್ಟ ನಂತರ, ಮೊದಲ ಸಲ ಕೊಡುವ ನೀರಿನಲ್ಲಿ ಖನಿಜ ದ್ರಾವಣ (ಎಲೆಕ್ಟ್ರೋಲೈಟ್) ಅಥವಾ ಶೇ.10ರ ಪ್ರಮಾಣದಷ್ಟು ಸಕ್ಕರೆ ಬೆರೆಸುವುದರಿಂದ ಮರಿಗಳು ಬೇಗ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ. ಮರಿಗಳು ಬೆಳೆದಂತೆ ಬಿಸಿಬುಟ್ಟಿಯನ್ನು ಮೇಲಕ್ಕೆ ಎತ್ತುವುದು ಮತ್ತು ಮರಿತಡೆಗಳನ್ನು ಹಿಂದಕ್ಕೆ ಸರಿಸುತ್ತಾ ಹೋಗಬೇಕಾಗುತ್ತದೆ. ಮೊದಲ 3 ರಿಂದ 5 ದಿನಗಳು ಮುಂಜಾಗ್ರತ ಕ್ರಮವಾಗಿ ರೋಗನಿರೋಧಕ (ಆಂಟಿಬಯೋಟಿಕ್ಸ್) ಔಷಧಿಯನ್ನು ನೀರಿನ ಮುಖಾಂತರ ಕೊಡಬೇಕು.
ಮೇವುಣಿಕೆ ಮತ್ತು ನೀರುಣಿಕೆ ಸ್ಥಳ:
ಸಾಮಾನ್ಯವಾಗಿ 4 ಅಡಿ ಉದ್ದವಾಗಿರುವ ಮೇವುಣಿಕೆಗಳು ಮರಿ ಹಂತಕ್ಕೊಂದು (0-3 ವಾರದವರೆಗೆ) ನಂತರದ ಅವಧಿಗೆ (3-6 ವಾರದವರೆಗೆ) ಮತ್ತೊಂದು ಹೀಗೆ ಎರಡು ರೀತಿ ಇರುತ್ತದೆ. ಪ್ಲಾಸ್ಟಿಕ್‍ನ ಗೋಲಾಕಾರದ ಮೇವುಣಿಕೆಗಳನ್ನು 3 ವಾರಗಳ ನಂತರ ಬಳಸಬಹುದು.
ಪ್ರಾರಂಭಿಕ ಹಂತದಲ್ಲಿ ಪ್ರತಿ 100 ಮರಿಗಳಿಗೆ 2 ಮೇವುಣಿಕೆಗಳು ಹಾಗೂ 3 ವಾರಗಳ ನಂತರ 3 ಮೇವುಣಿಕೆಗಳನ್ನು ಇಡಬೇಕಾಗುತ್ತದೆ. ಉದ್ದನೆಯ ಮೇವುಣಿಕೆಗಳಲ್ಲಿ 2/3 ರಷ್ಟು ಭಾಗ ಮತ್ತು ಗೋಲಾಕಾರದ ಮೇವುಣಿಕೆಗಳಲ್ಲಿ 1 ಇಂಚಿನಷ್ಟು ಮಾತ್ರ ಆಹಾರವನ್ನು ಹಾಕಬೇಕು. ಇದರಿಂದ ಆಹಾರ ಚೆಲ್ಲಿ ಹಾಳಾಗುವುದನ್ನು ತಡೆಗಟ್ಟಬಹುದು. ಮಾಂಸದ ಕೋಳಿಗಳಿಗೆ ದಿನಕ್ಕೆ 3 ಬಾರಿ ಆಹಾರವನ್ನು ಕೊಡಬೇಕು. ಹೆಚ್ಚು ಬಾರಿ ಹೊಸ ಆಹಾರ ದೊರೆಯುವುದರಿಂದ ಕೋಳಿಗಳು ಚೆನ್ನಾಗಿ ತಿನ್ನುತ್ತವೆ.
ಸ್ವಚ್ಛ ಮತ್ತು ತಾಜಾ ನೀರು ಸದಾ ಕೋಳಿಗಳಿಗೆ ಸಿಗುವಂತಿರಬೇಕು. ಪ್ರಾರಂಭಿಕ ಹಂತದಲ್ಲಿ ಮರಿ ನೀರುಣಿಕೆಗಳು, 3 ವಾರಗಳ ನಂತರ 5 ಲೀಟರಿನಷ್ಟು ನೀರು ಸಾಮಥ್ರ್ಯ ಹೊಂದಿರುವ ಪ್ಲಾಸ್ಟಿಕ್ ಬೇಸಿನ್ ಗಳ ಮೇಲೆ ತಂತಿಜಾಲರಿಯೊಂದಿಗೆ, ಪ್ರತಿ 100 ಕೋಳಿಗಳಿಗೆ 2 ರಂತೆ ನೀರುಣಿಕೆಗಳನ್ನು ಬಳಸಬೇಕು. ಪ್ರತಿ ಬಾರಿ ನೀರು ಮುಗಿದಾಗಲೂ ನೀರುಣಿಕೆಗಳನ್ನು ತೊಳೆದು ಬಳಸಬೇಕಾಗುತ್ತದೆ
ಅತಿ ಹೆಚ್ಚು ಉಷ್ಣತೆಯಲ್ಲಿ ಮಾಂಸದ ಕೋಳಿಗಳ ನಿರ್ವಹಣೆ :
ವಾತಾವರಣದಲ್ಲಿ ಶಾಖ 800ಈ (330ಅ) ದಾಟಿದಾಗ ಕೋಳಿಗಳು ಈ ಶಾಖಕ್ಕೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯ ವiತ್ತು ಅವುಗಳ ಚಟುವಟಿಕೆಗೆ ತೊಂದರೆಯಾಗುತ್ತದೆ. ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತವೆ. ಅಧಿಕ ಶಾಖದಿಂದುಂಟಾಗುವ ಪ್ರತಿಕೂಲ ಪರಿಣಾಮಗಳನ್ನು ಹೀಗೆ ನಿಯಂತ್ರಿಸಬಹುದು.
- ಮೇಲ್ಛಾವಣಿಯ ಮೇಲೆ ಭತ್ತದ ಹುಲ್ಲು / ತೆಂಗಿನ ಗರಿ ಹಾಕಿ ನೀರನ್ನು ಸಿಂಪಡಿಸುವುದು.
- ಮೇಲ್ಛಾವಣಿಯ ಮೇಲ್ಮೈಗೆ ಸುಣ್ಣ ಬಳಿಯುವುದು.
- ಕೋಳಿ ಮನೆಯಲ್ಲಿ ಫ್ಯಾನುಗಳನ್ನು ಅಳವಡಿಸಬಹುದು.
- ಹೆಚ್ಚು ನೀರುಣಿಕೆಗಳನ್ನು ಒದಗಿಸುವುದು.
- ಆಹಾರ ಸೇವನೆ ಸರಿಯಾದ ಪ್ರಮಾಣದಲ್ಲಿರಲು ದಿನದ ತಂಪಾದ ಹೊತ್ತಿನಲ್ಲಿ ಅಂದರೆ ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ಆಹಾರ ಒದಗಿಸುವುದು.
- ಪ್ರತಿ ಕೋಳಿಗೆ 1.2 ಚದರ ಅಡಿ ಸ್ಥಳ ಒದಗಿಸಿ ಸಾಂದ್ರತೆ ಕಡಿಮೆ ಮಾಡುವುದು.
- ಕೋಳಿ ಮನೆಯೊಳಗೆ ಯಥೇಚ್ಛವಾಗಿ ಗಾಳಿಯಾಡುವ ವ್ಯವಸ್ಥೆ ಮಾಡುವ್ಯದು.
ಕೊಕ್ಕು ಕತ್ತರಿಸುವ ಯಂತ್ರ:
ಸಾಮಾನ್ಯವಾಗಿ ಮೊಟ್ಟೆ ಕೋಳಿಗಳಲ್ಲಿ ಕೊಕ್ಕನ್ನು ಕತ್ತರಿಸಲಾಗುತ್ತದೆ. ಏಕೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳನ್ನು ಕೂಡಿಟ್ಟು ಸಾಕುವ ವಿಧಾನದಲ್ಲಿ ಅವುಗಳು ಕಚ್ಚಾಡುತ್ತವೆ ಮತ್ತು ಇದರಿಂದ ಕೋಳಿಗಳ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟಾಗುತ್ತದೆ. ಆದ್ದರಿಂದ, ಮರಿಗಳಿಗೆ ಸಣ್ಣ ವಯಸ್ಸಿರುವಾಗಲೇ ಅವುಗಳ ಕೊಕ್ಕನ್ನು ನಿರ್ದಿಷ್ಟವಾಗಿ ಕತ್ತರಿಸುವ ಮೂಲಕ ಈ ತೊಂದರೆಯನ್ನು ನಿವಾರಿಸಬಹುದಾಗಿದೆ. ಈ ರೀತಿ ಮಾಡುವುದರ ಇನ್ನೊಂದು ಬಹುಮುಖ್ಯ ಉಪಯೋಗವೇನೆಂದರೆ, ಮೇವು ತಿನ್ನುವಾಗ ಕೋಳಿಗಳು ಹೆಚ್ಚಿನ ಪ್ರಮಾಣದಲ್ಲಿ ಅಪವ್ಯಯವಾಗುವುದನ್ನು ತಪ್ಪಿಸಬಹುದು.
ಹೆಚ್ಚಿನ ಮಾಹಿತಿಗಾಗಿ : ಡಾ.ಭರತ್ ಭೂಷಣ್.ಎಮ್ ೯೦೩೬೬೯೬೮೧೫