ಶಿವಮೊಗ್ಗ, ಏಪ್ರಿಲ್ 29 : ಶಿವಮೊಗ್ಗ ನಗರದ ನೀರು ಸರಬರಾಜು ವ್ಯವಸ್ಥೆಯಡಿ ಬರುವ 35 ವಾರ್ಡ್ಗಳಲ್ಲಿ ಮೇಲ್ಮಟ್ಟದ ಟ್ಯಾಂಕ್ನಿಂದ ಅಳವಡಿಸಿರುವ ವಿತರಣಾ ಕೊಳವೆ ಮಾರ್ಗದಿಂದ ನೀರಿನ ಸಂಪರ್ಕವನ್ನು ಪಡೆದಿರುವ ಕೆಲವು ಗ್ರಾಹಕರು ನೀರು ಪೂರೈಕೆ ಸಮಯದಲ್ಲಿ ನೀರಿನ ಸಂಪರ್ಕಕ್ಕೆ ನೇರವಾಗಿ ವಿದ್ಯುತ್ ಮೋಟಾರ್ನ್ನು ಅಳವಡಿಸಿಕೊಂಡು ಕಾನೂನು ಬಾಹಿರವಾಗಿ ನೀರನ್ನು ಸಂಗ್ರಹಿಸುತ್ತಿರುವುದು ಮಹಾನಗರಪಾಲಿಕೆ/ಜಲಮಂಡಳಿಯ ಗಮನಕ್ಕೆ ಬಂದಿದು, ಈ ಕುರಿತು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕ & ಒ ಮಂ, ದ ಕಾರ್ಯಕಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ರೀತಿ ಅಕ್ರಮವಾಗಿ ನೀರಿನ ಸಂಪರ್ಕ ತೆಗೆದುಕೊಂಡಿರುವ ಕೊಳವೆ ಜೋಡಣೆಗೆ ಮೋಟಾರ್ ಅಳವಡಿಸಿಕೊಂಡು ಮುನ್ಸಿಪಲ್ ಕಾಯಿದೆ ಮತ್ತು ಕಾನೂನಿಕೆ ವಿರುದ್ಧವಾಗಿ ವಿತರಣಾ ಕೊಳವೆಮಾರ್ಗದಿಂದ ನೀರನ್ನು ಸಂಗ್ರಹಿಸಿ ಇತರೇ ಗ್ರಾಹಕರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗದೆ ಸಮಸ್ಯೆಯಾಗುತ್ತಿದ್ದು, ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಮೋಟರ್ನ್ನು ತೆರವುಗೊಳಿಸಿರುವುದಿಲ್ಲ.