ಶಿವಮೊಗ್ಗದ ಸಮಾನ ಮನಸ್ಕ ವಿದ್ಯಾಥಿ೯ಗಳು ಜೊತೆಗೂಡಿ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಶ್ರೀರಾಂಪುರದಲ್ಲಿ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪಕಿನ್ಗಳನ್ನು ವಿತರಿಸಿದರಲ್ಲದೆ ಆಹಾರದ ಕಿಟ್‌ಗಳನ್ನು ಮನೆ ಮನೆಗೆ ತೆರಳಿ ಆಹಾರದ ಕಿಟ್‌ ಗಳನ್ನು ಕೂಡ ವಿತರಿಸಲಾಯಿತು.ಹೆಣ್ಣೂ ಮಕ್ಕಳಿಗೆ ವಿಕಲಚೇತನರಿಗೆ ಗಭಿ೯ಣಿ ಬಾಣಂತಿಯರಿಗೆ ಸ್ಯಾನಟರಿ ನ್ಯಾಪ್ಕಿನ್‌ ವಯೋವೃದ್ದರಿಗೆ ಹಾಗು ಹಾಗು ಕೊರೋನಾ ಸಂತ್ರಸ್ತರಿಗೆ ಆಹಾರದ ಪೊಟ್ಟಣಗಳನ್ನು ಗ್ರಾಮದ ಮನೆಗಳಿಗೆ ತೆರಳಿ ವಿತರಿಸಿದರು. ಬಡ ಜನರಿಗೆ ಆಹಾರದ ಕಿಟ್‌ ನೀಡುವುದರ ಮೂಲಕ ಕಷ್ಟದಲ್ಲದ್ದವರಿಗೆ ನೆರವಿನ ಹಸ್ತ ಚಾಚಿದ್ದಾರೆ.400 ಸ್ಯಾನಟರಿ ನ್ಯಾಪಕಿನ್‌ ಪ್ಯಾಕೇಟ್ಗಳು ಹಾಗು 40 ಆಹಾರದ ಕಿಟ್ಗಳನ್ನು ವಿತರಿಸಲಾಯಿತು.ಕೊರೋನಾ ಸಂಕಷ್ಟೆದ ಕಾಲದಲ್ಲಿ ಸಮಾನ ಮನಸ್ಕ ವಿದ್ಯಾಥಿ೯ಗಳ ತಂಡದ ಕಾಯ೯ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಪಂಚಾಯಿತಿ ಅಧ್ಯಕ್ಷರಿಂದ ಸಾಂಕೇತಿಕವಾಗಿ ಗ್ರಾಮಸ್ಥರಿಗೆ ಆಹಾರದ ಕಿಟ್‌ ವಿತರಣೆ

ವಿದ್ಯಾಥಿ೯ನಿ ವಷಾ೯ ಮಾತನಾಡಿ ಕೋರೋನಾ ಹಲವು ಸಂಕಷ್ಟ್ಳನ್ನು ತಂದೊಡ್ಡಿದೆ, ಅನೇಕರು ಆಥಿ೯ಕವಾಗಿ ತೊಂದರೆಗೆ ಸಿಲುಕಿದ್ದಾರೆ.ಈ ಸಂಧಭ೯ದಲ್ಲಿ ಸಂಕಷ್ಟಕ್ಕೆ ಸಿಲಿಕಿದವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ ಎಂದರು.

ವಿದ್ಯಾಥಿ೯ ಗೌತಮ್‌ ಮಾತನಾಡಿ ಇಂತಹ ಸಂದಿಗ್ದ ಸಂದಬ೯ದಲ್ಲಿ ಸ್ಪಂದಿಸಬೇಕಾದದು ಮಾನವ ಧಮ೯ ಹಾಗಾಗಿ ಸ್ನೇಹಿತರೆಲ್ಲರೂ ಸೇರಿ ಆಹಾರದ ಕಿಟ್‌ ಗಳನ್ನು ವಿತರಿಸುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.

ನಮಿತಾ ಮಾತನಾಡಿ ಆಥಿ೯ಕ ಸಂಕಷ್ಟಕ್ಕೆ ಸಿಲಿಕಿದವರಿಗೆ ಹಾಗು ಹೆಣ್ಣುಮಕ್ಕಳಿಗೆ ವಿಕಲಚೇತನರಿಗೆ ಹಾಗು ವಯೋ ವೃದ್ದರಿಗೆ ಗ್ರಾಮದ ಇನ್ನೂ ಹಲವರಿಗೆ ನಾವುಗಳೆಲ್ಲಾ ಸೇರಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದರು.

ಕಾಯ೯ಕ್ರಮದಲ್ಲಿ ತಂಡದ ಸದಸ್ಯ ಚಿರಾಗ್‌ ಹಾಗು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರು, ಆಶಾ ಕಾಯ೯ಕತೆ೯ಯರು ಭಾಗವಹಿಸಿ ಕಾಯ೯ಕ್ರಮದಲ್ಲಿ ಉಪಸ್ತಿತರಿದ್ದು ಯಶಸ್ವಿಗೊಳಿಸದರು.

ಸಮಾನ ಮನಸ್ಕರ ವಿದ್ಯಾಥಿ೯ಗಳ ತಂಡ
error: Content is protected !!