ತುಂಗಾ ನದಿಯ ದಡದಲ್ಲಿರುವ ಹೊಸಳ್ಳಿ ಒಂದು ಪುಟ್ಟ ಗ್ರಾಮ ಇಲ್ಲಿರುವ ಮನೆಮನೆಗಳಲ್ಲಿ ಗಮಕ ವಾಚನ ಅರ್ಥಗಾರಿಕೆ ಮಾಡಲಾಗುತ್ತದೆ

ನಮ್ಮ ರಾಮಾಯಣ ಮತ್ತು ಮಹಾಭಾರತದ ಕಥಾನಕಗಳನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿರುವ ಗಮಕಿ ಹೊಸಳ್ಳಿ ಕೇಶವಮೂರ್ತಿಯವರಿಗೆ ವರ್ಷದ ಪದ್ಮಶ್ರೀ ಪುರಸ್ಕಾರ ಸಂದಿದೆ ನಾಡಿನ ಮೂಲೆಮೂಲೆಗಳಿಂದ ಅವರ ಶಿಷ್ಯರು ಆಗಮಿಸಿ ಗೌರವಿಸುತ್ತಿದ್ದಾರೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೇಶವಮೂರ್ತಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ

ಹೆಚ್.ಆರ್. ಕೇಶವಮೂರ್ತಿ ಗಮಕ ಕಲೆ ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆ ದೊಡ್ಡದು ಗಮಕ ಕಲೆಯ ಉಳಿವಿಗೆ ಜನರು ಪ್ರಯತ್ನಮಾಡಬೇಕು ಸರ್ಕಾರವು ಬೆನ್ನೆಲುಬಾಗಿ ನಿಲ್ಲಬೇಕು ನಮಂತ ಗ್ರಾಮೀಣ ಪ್ರದೇಶದ ಕಲಾವಿದರನ್ನು ಹುಡುಕಿ ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ ಇದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ

ಭಾನುಪ್ರಕಾಶ್ ಸ್ಥಳೀಯರು ಕೇಶವಮೂರ್ತಿಯವರು ಗಮಕ ಕಲೆಗಾಗಿ ತಮ್ಮ ಜೀವಮಾನವನ್ನೇ ಸವೆಸಿದವರು ಸುಮಾರು 96 ರಾಗಗಳಲ್ಲಿ ಗಮಕ ಕಲೆಯನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಕೇಂದ್ರ ಸರ್ಕಾರ ಅಪರೂಪದಲ್ಲಿ ಅಪರೂಪದ ಕಲಾವಿದರನ್ನು ಗುರುತಿಸಿದ್ದಕ್ಕೆ ಗಮಕ ಕಲಾವಿದರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ

error: Content is protected !!