ಚಿಕ್ಕಮಗಳೂರು : ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು ಹಬ್ಬದ ಎರಡನೇ ದಿನವಾದ ಗುರುವಾರ ಕೇಂದ್ರ ಸಂವಹನ ಇಲಾಖೆ, ಶಿವಮೊಗ್ಗ ಹಾಗು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನವನ್ನು ಕೇಂದ್ರ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್ ಮುರುಗನ್ ಹಾಗು ಕೇಂದ್ರ ಕಲ್ಲಿದಲು, ಗಣಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಇವರು ಉದ್ಘಾಟಿಸಿದ್ದರು.
ನಂತರ ಮಾತನಾಡಿದ ಕೇಂದ್ರ ಸಚಿವ ಎಲ್. ಮುರ್‌ಗನ್ ಅವರು ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು ನಾಯಕರ, ಸ್ವಾತಂತ್ರ ಹೋರಾಟಗಾರರ, ಸೇನಾನಿಗಳ , ಕರ್ನಾಟಕದ ರಾಣಿ ಚೆನ್ನಮ್ಮ ಸೇರಿ ಹಲವು ಮಹಾನೀಯರ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಹಾಕಲಾಗಿದೆ. ಹಾಗೆ ಕೇಂದ್ರ ಸರ್ಕಾರದ ಯೋಜನೆಗಳಾದ ಆಶ್ರಯ ಮನೆ ಯೋಜನೆ, ಸ್ವಚ್ಚ ಭಾರತ್ ಯೋಜನೆ, ಜಲ ಜೀವನ್ ಮಿಷನ್, ಗರೀಬ್ ಕಲ್ಯಾಣ್ ಅನ್ನ ಯೋಜನೆ ಹೀಗೆ ಹಲವಾರು ಯೋಜನೆಗಳ ಕುರಿತಾದ ಛಾಯಾಚಿತ್ರಗಳನ್ನು ಮಾಹಿತಿ ಸಹಿತ ಪ್ರದರ್ಶಿಸುತ್ತಿದು ಇದರ ಬಗ್ಗೆ ಜನರೀಗೆ ಅರಿವು ಮೂಡಿಸುತ್ತಿದೆ ಎಂದರು.