ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣೆಗೆ ಹೊಸ ಚಿಂತನೆ ಮಾಡುತ್ತಿದ್ದು, ಇನ್ನು ಮುಂದೆ ಕಾಗದ ರಹಿತ ಆಗಲಿದೆ. ಕೇಂದ್ರ ಸರ್ಕಾರ ಸ್ಮಾಟ೯ ಪೋನ್ ನಲ್ಲಿ ಸ್ನೇಹ ಅಪ್ಲಿಕೇಷನ್ ಅಳವಡಿಸುವ ಮೂಲಕ ಡಿಜಿಟಲೈಸ್ ಮಾಡಲಾಗುತ್ತಿದೆ. . ಕೇಂದ್ರದ ಎಲ್ಲ ಕಾರ್ಯ ಚಟುವಟಿಕೆಯು ಇನ್ನೂ ಮುಂದೆ ಮೊಬೈಲ್ ಫೋನ್ ಮೂಲಕವೇ ನಡೆಯಲಿದೆ.ಕಾಯ೯ಕತೆ೯ಯರು ಹಾಗು ಸಿಬ್ಬಂದಿಯು ಇನ್ನು ಹೆಚ್ಚು ವೇಗವಾಗಿ ಕೆಲಸ ಮಾಡಲು ಅನುಕೂಲವಾಗಲಿದೆ.
ರಾಜ್ಯದಲ್ಲಿ ಒಟ್ಟಾರೆ 65,911 ಅಂಗನವಾಡಿ ಕೇಂದ್ರಗಳಿದ್ದು, ಪೋಷಣ್ ಅಭಿಯಾನ್ನಲ್ಲಿ 2,500 ಜನರು ಇದರ ಉಸ್ತುವಾರಿ ನಡೆಸುತ್ತಿದ್ದಾರೆ. ಒಟ್ಟು 68 ಸಾವಿರ ಸ್ಮಾರ್ಟ್ ಮೊಬೈಲ್ ಫೋನ್ಗಳನ್ನು ಈಗಾಗಲೇ ಖರೀದಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಯ 2,439 ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಲಾಗುತ್ತಿದೆ. ಸರ್ಕಾರವೇ ಸಿಮ್ ವಿತರಿಸಲಿದ್ದು, ಮೊಬೈಲ್ಗೆ ಸಿಮ್ ಅಳವಡಿಸುತ್ತಿದ್ದಂತೆ ತನ್ನಿಂದ ತಾನೇ ಆಪ್ಲಿಕೇಷನ್ ಮತ್ತು ಇತರೆ ತಂತ್ರಾಂಶಗಳು ತೆರೆದುಕೊಳ್ಳುತ್ತವೆ. ಕೇಂದ್ರ ಸರ್ಕಾರದ ಸಿಎಎಎಸ್ ಹಾಗೂ ರಾಜ್ಯ ಸರ್ಕಾರದ ಸ್ನೇಹ ಆಪ್ ತೆರೆದುಕೊಳ್ಳಲಿದೆ.
ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಒಳಗೊಂಡಂತೆ ಎಲ್ಲ ವಿವರಗಳು ಹಾಗೂ ದಾಖಲಾತಿಗಳು ಇದರಲ್ಲಿರುತ್ತವೆ. ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿ, ಪೌಷ್ಠಿಕಾಂಶ ವಿತರಣೆ, ಎಲ್ಲ ವಿವರಗಳು ಬೆರಳ ತುದಿಯಲ್ಲಿ ಲಭ್ಯವಾಗುತ್ತವೆ. ಭಾವಚಿತ್ರದ ಸಹಿತ ಎಲ್ಲವೂ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಪ್ರಥಮ ಹಂತದಲ್ಲಿ 17 ಜಿಲ್ಲೆಗಳಿಗೆ ಈ ಯೋಜನೆ ಕಾರ್ಯಗತವಾಗುತ್ತಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯು ಒಳಗೊಂಡಿದೆ. ಈ ತಂತ್ರಾಂಶದಿಂದ ಅಂಗನವಾಡಿಯ ಕಾಯ೯ಕ್ಷೇತ್ರವು ಇನ್ಕೂನೂ ಹೆಚ್ಡಚು ಕೆಲಸವನ್ನು ಮಾಡಲು ಅನುಕೂಲವಾಗಲಿದೆ. ಕಾಯ೯ಕತೆ೯ಯರು ಹಾಗು ಮೇಲ್ವಚಾರಕರು ಕೂಡ ಚುರುಕುಗೊಳ್ಳಲಿದ್ದಾರೆ.
ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿದ ಚಂದ್ರಪ್ಪ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಫೋನ್ ಉಚಿತವಾಗಿ ನೀಡಲಾಗುತ್ತಿದೆ. ದೈನಂದಿನ ಎಲ್ಲ ಕಾರ್ಯ ಚಟುವಟಿಕೆಗಳನ್ನು ನಡೆಸಲು ತುಂಬಾ ಅನುಕೂಲವಾಗಿದ್ದು, ಎಲ್ಲ ದಾಖಲಾತಿಗಳು ಇದರಲ್ಲಿ ಲಭ್ಯವಾಗಿದ್ದು, ಈಗಾಗಲೇ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಫಲಾನುಭವಿಗಳಿಗೆ ಮಾಹಿತಿ ಕೊಡಲಾಗುತ್ತದೆ.ಎಂದು ತಿಳಿಸಿದರು.
ತಾಬೀರ, ಅಂಗನವಾಡಿ ಕಾರ್ಯಕರ್ತೆ ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿ ಪೋಷಣ್ ಅಭಿಯಾನದಡಿ ಸ್ನೇಹ ಆಪ್ಅನ್ನು ಹೇಗೆ ಬಳಸಬೇಕು ಎನ್ನುವ ಬಗ್ಗೆ ಈಗಾಗಲೇ ಇಲಾಖೆ ವತಿಯಿಂದ ತರಬೇತಿ ನೀಡಲಾಗಿದೆ. ನಾವು ಮನೆ ಮನೆಗೆ ತೆರಳಿ ಫಲಾನುಭವಿಗಳು ದಾಖಲಾತಿ ಹೇಗೆ ನೀಡಬೇಕು ಎನ್ನುವ ಮಾಹಿತಿ ನೀಡುವ ಜತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.
ಸುಮಂಗಲಾ, ಮೇಲ್ವಿಚಾರಕಿ ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಸ್ನೇಹ ಆಪ್ ಕುರಿತಂತೆ ಜಿಲ್ಲಾದ್ಯಂತ ತರಬೇತಿ ನೀಡುವ ಕೆಲಸ ನಡೆಯುತ್ತಿದೆ. ಸ್ನೇಹ ಆಪ್ನಿಂದ ಬಹಳ ಸುಲಭವಾಗಿ ಅಗತ್ಯ ವಿವರಗಳನ್ನು ಪಡೆಯಬಹುದಾಗಿದೆ ಅಲ್ಲದೇ ಕಾರ್ಯ ನಿರ್ವಹಣೆ ಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಣಬಹುದಾಗಿದೆ.ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಿ ಸರ್ಕಾರದ ಸಿಮ್ ಅಳವಡಿಸಿ ಪಾರದರ್ಶಕ ಆಡಳಿತ ನಡೆಸುವ ದಿಟ್ಟ ಹೆಜ್ಜೆ ಇಟ್ಟಿದೆ.