ಕೊರೊನಾ ಸಮಸ್ಯೆಯಿಂದ ಜನರಷ್ಟೇ ತೊಂದರೆಗೊಳಗಾಗಲಿಲ್ಲ. ಜಾನುವಾರುಗಳೂ ಕೂಡ ಮೇವಿಲ್ಲದೆ ಪರದಾಡಿದವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾನವ ಸಂಪನ್ಮೂಲದ ಬಳಕೆ ಮತ್ತು ಗೋವುಗಳ ಸಂರಕ್ಷಣೆಗಾಗಿ ‘ಮೈತ್ರಿ’ ಎನ್ನುವ ಯೋಜನೆಯನ್ನು ಹೊರತಂದಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಯೋಜನೆ ವರದಾನವಾಗಿದೆ. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿ ಈ ಕಾರ್ಯಕ್ರಮ ನಡೆಯುತ್ತಿದೆ.
ಕೇಂದ್ರ ಸರ್ಕಾರದ ಪಶು ಸಂಗೋಪನಾ ಇಲಾಖೆ [Multi Purpose Artificial insemination Technician in Rural India] ಮೈತ್ರಿ ಯೋಜನೆ ದೇಶದಾದ್ಯಂತ ಕೊರೊನ ಸಂಕಷ್ಟದಲ್ಲಿ ಜಾರಿಗೆ ತರಲಾಗಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಗುತ್ತಿದ್ದು ಶಿವಮೊಗ್ಗದ ಪಶು ಸಂಗೋಪನಾ ಇಲಾಖೆಯಲ್ಲಿ ಜಿಲ್ಲೆಯ 64 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪಶು ಸಂಗೋಪನೆ ಸಂಬಂಧೀ ತರಬೇತಿ ಇದಾಗಿದ್ದು ಒಟ್ಟು 3 ತಿಂಗಳು ತರಬೇತಿ ನೀಡಲಾಗುತ್ತದೆ. ಎರಡು ತಿಂಗಳುಗಳ ಕಾಲ ಅವರ ಪ್ರದೇಶಗಳಲ್ಲಿ ಅಭ್ಯಾಸದ ಮುಖೇನ ಅನುಷ್ಠಾನಗೊಳಿಸಲಾಗುತ್ತದೆ. ತರಬೇತಿಯ ಸಂದರ್ಭದಲ್ಲಿ ಜಾನುವಾರುಗಳಿಗೆ ಚುಚ್ಚುಮದ್ದು, ವಿಮೆ, ಹಾಲು ಇಳುವರಿ ದಾಖಲಿಸುವುದು, ರಾಸುಗಳಲ್ಲಿ ಕೃತಕ ಗರ್ಭಧಾರಣೆ ಸೌಕರ್ಯವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವುದು, ಪಶುವೈದ್ಯಕೀಯ ಸೇವೆಗಳು ಲಭ್ಯವಿಲ್ಲದಿರುವ ಸ್ಥಳಗಳಲ್ಲಿ ಇವರನ್ನು ಬಳಸಲಾಗುತ್ತದೆ. ಕನಿಷ್ಠ 10ನೇ ತರಗತಿ ಗರಿಷ್ಠ ದ್ವಿತೀಯ ಪಿಯುಸಿ ಆಗಿರಬೇಕು. ವಯಸ್ಸು 18ಕ್ಕಿಂತ ಕಡಿಮೆ ಇರಬಾರದು ಎನ್ನುವ ನಿಬಂಧನೆಗಳಿವೆ. ಜಿಲ್ಲೆಯ ವಿವಿಧೆಡೆಗಳಿಂದ ಯುವಜನರು ಈ ತರಬೇತಿಯಲ್ಲಿ ಅತ್ಯಂತ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ.
ಕಾನ್ಲೆ ಶ್ರೀಧರ್, ಕಾರ್ಯದರ್ಶಿ, ಶ್ರೀಧರ ಮಹಾಮಂಡಲ, ವರದಳ್ಳಿ ಗೋಶಾಲೆ News Next ಮಾತನಾಡಿ ಕೊರೊನಾದಂತಹ ಈ ಸಂಕಷ್ಟ ಜನರ ಜೊತೆಯಲ್ಲಿ ಜಾನುವಾರುಗಳಿಗೂ ತೀವ್ರ ಸಂಕಷ್ಟವನ್ನು ತಂದೊಡ್ಡಿತು. ಮೂಕಪ್ರಾಣಿಗಳು ಮೇವಿಲ್ಲದೆ ಒದ್ದಾಡಿದವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಗೋಶಾಲೆಗೆ ಬೆನ್ನೆಲುಬಾಗಿ ನಿಂತಿವೆ. ಕೊರೊನಾದಂತಹ ಈ ಸಂಕಷ್ಟದ ಸಮಯದಲ್ಲಿಯೂ ಈ ಯೋಜನೆಯ ಮೂಲಕ ತಯಾರಾದ ಮೈತ್ರಿ ಕಾರ್ಯಕರ್ತರು ಗೋಶಾಲೆಗಳಿಗೆ ಅತ್ಯಂತ ಉಪಯುಕ್ತವಾಗಲಿದ್ದಾರೆ.
ಡಾ|| ಟಿ.ಎಂ. ಸದಾಶಿವ, ಉಪನಿರ್ದೇಶಕರು, ಪಶುವೈದ್ಯಕೀಯ ಇಲಾಖೆ, ಶಿವಮೊಗ್ಗ News Next ಶಿವಮೊಗ್ಗದಲ್ಲಿ ದಾವಣಗೆರೆಯಲ್ಲಿರುವ ಇಲಾಖೆಯ ತರಬೇತಿ ಕೇಂದ್ರದ ಸಹಕಾರದೊಂದಿಗೆ ಮೈತ್ರಿ ಯೋಜನೆಯ ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತಿದೆ. ಪಶುಗಳಿಗೆ ಕೃತಕ ಗರ್ಭಧಾರಣೆ, ಜಂತುನಾಶಕ, ಲಸಿಕೆ, ಮೇವುಬೀಜ ವಿತರಿಸುವುದು ಮುಂತಾದ ವಿಷಯಗಳ ಕುರಿತು ತಜ್ಞರು ಮಾಹಿತಿ ನೀಡುತ್ತಿದ್ದಾರೆ. ತರಬೇತಿ ಪಡೆದವರು ಗ್ರಾಮೀಣ ಪ್ರದೇಶದ ಜಾನುವಾರುಗಳ ಆರೈಕೆಯಲ್ಲಿ ಇಲಾಖೆಗೆ ಸಹಕಾರಿಯಾಗಲಿದ್ದಾರೆ.
ಮಹೇಶ ಫಲಾನುಭವಿ News Next ಮಾತನಾಡಿ ಕೇಂದ್ರ ಸರ್ಕಾರ ಮೈತ್ರಿ ಯೋಜನೆಯಲ್ಲಿ ನಮ್ಮನ್ನು ತೊಡಗಿಸಿ ಕೊರೊನಾದಂತಹ ಈ ಸಂಕಷ್ಟದ ಸಮಯದಲ್ಲಿಯೂ ಸಹಕಾರ ನೀಡಿದೆ. ಗೋವುಗಳ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ನಾವು ತೊಡಗಿಕೊಂಡಿದ್ದೇವೆ. ಉಚಿತ ತರಬೇತಿ ನೀಡಿ ಗೌರವಧನವನ್ನೂ ನೀಡುತ್ತಿದೆ.
ಕೃಷ್ಣಮೂರ್ತಿ, ಶಿವಮೊಗ್ಗ, ಫಲಾನುಭವಿ News Next ಮಾತನಾಡಿ ಜಾನುವಾರುಗಳ ಬಗ್ಗೆ ನಮಗೆ ಸಾಮಾನ್ಯ ತಿಳುವಳಿಕೆ ಇರುತ್ತದೆ. ಆದರೆ ಈ ಯೋಜನೆಯಲ್ಲಿ ನಮ್ಮನ್ನು ತೊಡಗಿಸಿ ಗಂಭೀರವಾಗಿ ಇದರಲ್ಲಿ ಕಾರ್ಯ ನಿರ್ವಹಿಸುವಂತೆ ಕೇಂದ್ರ ಸರ್ಕಾರ ನಮಗೆ ಅವಕಾಶ ನೀಡಿದೆ. ಮೈತ್ರಿ ಯೋಜನೆಯಿಂದ ಮಾನವ ಸಂಪನ್ಮೂಲದ ಬಳಕೆಯೂ ಆಗುತ್ತದೆ.