1. ಕೆಸರು ಮಡಿ ಮಾಡುವ ಪ್ರದೇಶದಲ್ಲಿ ನೆರಳು ಇರಬಾರದು
  2. ಪ್ರತಿ ಎಕೆರೆಗೆ ಬೇಕಾಗುವ ಸಸಿಗಳನ್ನು ಬೆಳೆಸಲು 3 ಗುಂಟೆ ಕ್ಷೇತ್ರ ಬೇಕು
  3. ಸಸಿ ಮಡಿ ಪ್ರದೇಶವನ್ನು ಚೆನ್ನಾಗಿ ಕೆಸರು ಮಾಡಿ ಸಮ ಮಾಡಬೇಕು, ನೀರು ಹಾಯಿಸಲು ಏರ್ಪಾಡು ಮಾಡಿ ಹಾಗೂ ಹೆಚ್ಚಾದ ನೀರನ್ನು ಹೊರ ತೆಗೆಯಲು ಕಾಲುವೆಗಳನ್ನು ರೈತರು ಮಾಡಬೇಕು
  4. 25 ಅಡಿ ಉದ್ದ, 4 ಅಡಿ ಅಗಲದ ಹಾಗೂ 10-15 ಸೆಂ.ಮೀ ಎತ್ತರವಿರುವ 30 ಸಸಿ ಮಡಿಗಳನ್ನು ಸಿದ್ದಪಡಿಸಬೇಕು
  5. ಸಸಿ ಮಡಿಗಳನ್ನು ಸಿದ್ದಪಡಿಸಿದ ನಂತರ ಪ್ರತಿ 1 ಗುಂಟೆ ಕ್ಷೇತ್ರಕ್ಕೆ 1.0 ಕೆ.ಜಿ. ಸಾರಜನಕ (2.25 ಕೆ.ಜಿ. ಯೂರಿಯಾ), 0.4 ಕೆ.ಜಿ. ರಂಜಕ (2.50 ಕೆ.ಜಿ. ಸಿಂಗಲ್ ಸೂಪರ್ ಫಾಸ್ಪೇಟ್) ಮತ್ತು 0.5 ಕೆ.ಜಿ. ಪೊಟ್ಯಾಷ್ (850 ಗ್ರಾಂ ಎಂಒಪಿ) ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು 250 ಕಿ. ಗ್ರಾಂ. ಕೊಟ್ಟಿಗೆ ಗೊಬ್ಬರದೊಡನೆ ಬೆರೆಸಿ ಮಡಿಗಳಿಗೆ ಎರಚಬೇಕು
  6. ಬಿತ್ತನೆ ಬೀಜವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ 36-48 ಗಂಟೆಗಳ ಕಾಲ ಬೆಚ್ಚನೆಯ ಪ್ರದೇಶದಲ್ಲಿ ಇಟ್ಟರೆ ಮೊಳಕೆ ಬರುತ್ತವೆ
  7. ಬಿತ್ತಿದ ಕಾಳಿನ ಗಾತ್ರ ಆಧರಿಸಿ ಪ್ರತಿ ಚದರ ಮೀಟರ್‍ಗೆ 50-70 ಗ್ರಾಂ ನಂತೆ ಬೀಜ ಬಿತ್ತನೆ ಮಾಡಬೇಕು
  8. ಕೆಸರು ಮಡಿಯಲ್ಲಿ ಬಿತ್ತನೆ ಮಾಡಿದ 3 ದಿನಗಳೊಳಗೆ 3 ಗುಂಟೆ ಸಸಿಮಡಿ ಪ್ರದೇಶಕ್ಕೆ 76 ಮಿ.ಲೀ. ಬ್ಯುಟಾಕ್ಲೋರಾ 50 ಇ.ಸಿ. ಅಥವಾ 8 ಗ್ರಾಂ. ಪೈರಾಜೋಸೆಲ್ಯುರಾನ್ ಈಥೈಲ್ (ಶೇ. 10ರ ಪುಡಿ) ಅಥವಾ 30 ಮಿ.ಲೀ. ಪ್ರೆಟಿಲಾಕ್ಲೋರ್+ಸೇಫನರ್‍ನ್ನು 30 ಇ.ಸಿ. ಯನ್ನು 24 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಿ ಕಳೆ ನಿಯಂತ್ರಣ ಮಾಡಬೇಕು
  9. ಸಸಿ ಮಡಿಗಳನ್ನು ಮೊದಲ ಕೆಲವು ದಿವಸಗಳವರೆಗೆ ಒಣಗದಂತೆ ಎಚ್ಚರವಹಿಸಿ, ಸಸಿಗಳು ಒಂದು ಅಂಗುಲ ಎತ್ತರ ಬೆಳೆದಾಗ ತೆಳ್ಳಗೆ ನೀರು ಹಾಯಿಸಬೇಕು
  10. ಸಸಿ ನಾಟಿ ಮಾಡಲು 6 ದಿವಸಗಳಿಗೆ ಮುಂಚೆ ಪ್ರತಿ 1 ಗುಂಟೆ ಪ್ರದೇಶಕ್ಕೆ 0.3 ರಿಂದ 0.6 ಕಿ. ಗ್ರಾಂ. ಸಾರಜನಕವನ್ನು (650 ಗ್ರಾಂ – 1.30 ಕೆ.ಜಿ. ಯೂರಿಯಾ) ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು ಮೇಲುಗೊಬ್ಬರವಾಗಿ ಕೊಡಬೇಕು
  11. ಬಿತ್ತನೆಯಾದ 20-25 ದಿನಗಳಲ್ಲಿ ಪೈರು ನಾಟಿಗೆ ಸಿದ್ದವಾಗುತ್ತವೆ..

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ. ಬಸವರಾಜ , ವಿಜ್ಞಾನಿ (ಬೇಸಾಯ ಶಾಸ್ತ್ರ), ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಮೊ: 9945134501

ರೇಖಾ, ಎಂ.ವಿ., ವಿಜ್ಞಾನಿ (ಮಣ್ಣು ವಿಜ್ಞಾನ), ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಮೊ: 7411295034

error: Content is protected !!