ಕೊರೋನಾ ಸೋಂಕು ನಿಯಂತ್ರಣದ ಹಿನ್ನೆಲೆಯ ಲಾಕ್ ಡೌನ್ ಪರಿಣಾಮ ದಿಂದ ಹೋಟೆಲ್ – ಕ್ಯಾಂಟೀನ್ ಗಳು ಬಾಗಿಲು ಮುಚ್ಚಿವೆ. ಇದರಿಂದಾಗಿ ದಿನ ನಿತ್ಯ ಆಸ್ಪತ್ರೆಯಲ್ಲಿರುವ ರೋಗಿಗಳು ಆವರಗಳ ಸಂಬಂಧಿಗಳು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಆಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಈ ಸಂಕಷ್ಟ ಪರಿಹಾರಕ್ಕಾಗಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ರವರ ಮತ್ತು ಅವರತಂಡದವರನೇತೃತ್ವದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ಅವರಅಭಿಮಾನಿಗಳು ಪ್ರಥಮವಾಗಿ ಆರಂಭದಲ್ಲಿ ಬೇರೆಡೆಯಿಂದ ಆಹಾರ ತಂದು ಇವರಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಶ್ರೀ ಡಿ .ಕೆ .ಶಿವಕುಮಾರ್ ಕ್ಯಾಂಟೀನ್ ಮತ್ತು ಸಂಚಾರಿ ಕ್ಯಾಂಟಿನ್ ಮೂಲಕ ರೋಗಿಗಳಿಗೂ ಆವರ ಸಂಬಂಧಿಕರು ಹಾಗು ವೈದ್ಯಕೀಯಸಿಬ್ಬಂದಿಗೆ ಉಚಿತ ವಾಗಿ ಊಟ ಹಾಗೂ ತಿಂಡಿ ವಿತರಿಸು ವ ಸೇವಾ ಕಾರ್ಯವನ್ನು ಇಂದಿನಿಂದ ಆರಂಭಿಸಲಾಯಿತು ಮಾಜಿಸಚಿವರು ಶ್ರೀಕಿಮ್ಮನೆರತ್ನಾಕರ್ ರವರು ಶಿವಮೊಗ್ಗದ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಮಠದ ಎದುರು ಶ್ರೀಬಸವೇಶ್ವರ ಆಸ್ಪತ್ರೆ ಪಕ್ಕ ಚಾಲನೆ ನೀಡಿದ್ದರುಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಜಿಲ್ಲಾಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹೆಚ್.ಎಸ್ ಸುಂದರೇಶ್ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಹೆಚ್. ಸಿ. ಯೋಗೇಶ್ ಮತ್ತು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ಮತ್ತು ಕಾಂಗ್ರೆಸ್ ಪಕ್ಷ ಪ್ರಮುಖರು ಉಪಸ್ಥಿತರಿದ್ದು ಆಹಾರ ಸಾಮಾಗ್ರಿಗಳನ್ನು ವಿತರಿಸಿದರು.

error: Content is protected !!