ಪೈನಾಪಲ್ ಜಾಮ್ ಮತ್ತು ಕ್ಯಾಂಡಿ ತಯಾರಿಕೆ ಕುರಿತ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮ
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಹಾಗೂ ಕೃಷಿ ಇಲಾಖೆ, ಸಾಗರದ ಆತ್ಮ ಯೋಜನೆಯಡಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ದಿನಾಂಕ 4.01.2023 ರಂದು ಪೈನಾಪಲ್ ಹಣ್ಣಿನ ಜಾಮ್ ಮತ್ತು ಕ್ಯಾಂಡಿ ತಯಾರಿಕೆಯ ಬಗ್ಗೆ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸ್ವಸಹಾಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಗಿತ್ತು. ತರಬೇತಿಯನ್ನು ಶ್ರೀ. ಕಾಶೀನಾಥ್ ವೈ. ಒಂಟೆಕೋರ್, ಸಹಾಯಕ ಕೃಷಿ ನಿರ್ದೇಶಕರು, ಸಾಗರ ಇವರು ಉದ್ಘಾಟಿಸಿದರು.
ತರಬೇತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಗೃಹ ವಿಜ್ಞಾನಿಯಾದ ಡಾ. ಜ್ಯೋತಿ ಎಂ. ರಾಠೋಡ್ ರವರು ಉದ್ಯಮಶೀಲತೆ ಬಗ್ಗೆ ತರಬೇತಿ ನೀಡಿ ಪೈನಾಪಲ್ ಹಣ್ಣಿನ ಪೋಷಕಾಂಶಗಳು ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿ ಪೈನಾಪಲ್ ಜಾಮ್, ಕ್ಯಾಂಡಿ ಮತ್ತು ಸ್ಕ್ವಾಶ್ ತಯಾರಿಕೆಯನ್ನು ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ಹೇಳಿಕೊಡಲಾಯಿತು.
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆರ್ಯ ಯೋಜನೆಯ ಹಿರಿಯ ಸಹಾಯಕ ಸಂಶೋಧಕರು ಡಾ. ಪೂಜಾ. ಜಿ. ಕೆ., ಸಾಗರ ತಾಲೂಕಿನ ಕೃಷಿ ಇಲಾಖೆಯ ಶ್ರೀ. ವಿನಾಯಕ್ ರಾವ್, ಶ್ರೀ. ಪ್ರದೀಪ್ ಕುಮಾರ್, ಶ್ರೀ. ಪಾಂಡುರಂಗ, ಶ್ರೀಮತಿ ನಾಗರತ್ನ ಹಾಗೂ ಜೋಗದಸಿರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉಮಾದೇವಿ ಉಪಸ್ಥಿತರಿದ್ದರು.
ತಾಳಗುಪ್ಪದ ಸ್ವಸಹಾಯ ಸಂಘದ ಒಟ್ಟು 50 ಕ್ಕೂ ಹೆಚ್ಚು ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು.