ಶಿವಮೊಗ್ಗ: ಜನವರಿ-07 : 2022-23 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ರೈತರ ಆದಾಯವನ್ನು ದ್ವಿಗುಣಗೊಳಿಸಲು, ರೈತರನ್ನು ಬೆಳೆಗಳ ಗುಣಮಟ್ಟದ ಉತ್ಪಾದನೆಗೆ ಉತ್ತೇಜಿಸಲು ಹಾಗೂ ತೋಟಗಾರಿಕೆಯಲ್ಲಿ ಕೊಯ್ಲೋತ್ತರ ನಿರ್ವಾಹಣಾ ಚಟುವಟಿಕೆಗಳ ಕಾರ್ಯಕ್ರಮಗಳಡಿಯಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರ, ಲಘು ಪೋಷಕಾಂಶಗಳು , ಮೋಹಕ ಕೀಟ ಬಲೆಗಳು/ಜಿಗುಟಾದ ಬಲೆಗಳು, ಸೌರ ಶಕ್ತಿ ಆಧಾರಿತ ಕೃತಕ ಬುದ್ದಿಯ ಕೀಟ ನಿಯಂತ್ರಕ ಬಲೆಗಳು, ಸೋಲಾರ್ ಪಂಪ್ ಸೆಟ್, ಪ್ಲಾಸ್ಟಿಕ್ ಕ್ರೇಟ್ಸ್ ಮತ್ತು ಕೊರುಗೇಟೆಡ್ ಬಾಕ್ಸ್‍ಗಳ ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.40 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಶೇ.50 ರಂತೆ ಸಹಾಯಧನ ನೀಡಲು ಅರ್ಹ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.