ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ನವಿಲೆ, ಶಿವಮೊಗ್ಗದ ಮುಖ್ಯ ಆವರಣದಲ್ಲಿ “5ನೇ ವಿಶ್ವ ಯೋಗ ದಿನ”ವನ್ನು ನುರಿತ ಯೋಗ ಶಿಕ್ಷಕರಾದ ಶ್ರೀಯುತ ರವಿ ಮತ್ತು ತಂಡ ಶಿವಮೊಗ್ಗ ಇವರ ಮಾರ್ಗದರ್ಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಮ್.ಕೆ ನಾಯ್ಕ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಎಲ್ಲರನ್ನುದ್ದೇಶಿಸಿ ವಿದ್ಯಾಭ್ಯಾಸ ಬದುಕಿಗೆ ಎಷ್ಟು ಮುಖ್ಯವೋ ಯೋಗಭ್ಯಾಸವೂ ಅಷ್ಟೇ ಮುಖ್ಯ ಎಂದು ಮಾತನಾಡಿದರು.
ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಿದ್ದ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ. ಬಿ. ಹೇಮ್ಲಾನಾಯಕ್ರವರು ಯೋಗದ ಮಹತ್ವ ಕುರಿತು ಆಧುನಿಕ ಬದುಕಿಗೆ ಹೊಂದಿಕೊಂಡ ನಾವು ಯೋಗವನ್ನು ನಿರ್ಲಕ್ಷಿಸಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಆದ್ದರಿಂದ ಪ್ರತಿನಿತ್ಯ ಯೋಗಭ್ಯಾಸವನ್ನು ಮಾಡಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕುಲಸಚಿವರಾದ ಡಾ. ಪಿ ನಾರಾಯಣ ಸ್ವಾಮಿ, ವಿಸ್ತರಣಾ ನಿರ್ದೇಶಕರಾದ ಡಾ. ಎಸ್. ಪಿ. ನಟರಾಜು, ಪರಿಶಿಷ್ಟ ಜಾತಿ/ಪಂಗಡ ಘಟಕದ ನಿರ್ದೇಶಕರಾದ ಡಾ. ಆರ್. ಗಣೇಶನಾಯ್ಕ್, ಪ್ರಾಧ್ಯಾಪಕರಾದ ಡಾ. ವೀರಣ್ಣ ಬೇಸಾಯಶಾಸ್ತ್ರ ವಿಭಾಗ, ಸಹಾಯಕ ಪ್ರಾಧ್ಯಾಪಕ ಹಾಗೂ ನಿಲಯ ಪಾಲಕರಾದ ಬಸವರಾಜ ಬೀರಣ್ಣವರ್, ಸೇರಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಭೋಧಕ ಮತ್ತು ಭೋಧಕೇತರ ಆಸಕ್ತ ಸಿಬ್ಬಂದಿಗಳು 200 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.