ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯವು 2018-19ರಲ್ಲಿ ನಡೆದ ರಾಷ್ಟ್ರಮಟ್ಟದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 11 ರ್ಯಾಂಕ್ಗಳನ್ನು (ಶಿಷ್ಯವೇತನವನ್ನು) ಪಡೆದು ದೇಶದ ಎಲ್ಲ ಕೃಷಿಗೆ ಸಂಬಂದಪಟ್ಟ ವಿಷಯಗಳ ವಿಶ್ವವಿದ್ಯಾಲಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದರಿಂದ ಸನ್ಮಾನ್ಯ ಕುಲಪತಿಗಳಾದ ಡಾ.ಎಂ.ಕೆ.ನಾಯ್ಕ್ ರವರು ಗೌರವಾನ್ವಿತ ಶ್ರೀ ರಾಧಾ ಮೋಹನ್ ಸಿಂಗ್, ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ಭಾರತ ಸರ್ಕಾರ ಇವರಿಂದ ದಿನಾಂಕ 31.01.2019 ರಂದು ನವದೆಹಲಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಈ ಪ್ರಶಸ್ತಿ ಸಮಾರಂಭದಲ್ಲಿ ಗೌರವಾನ್ವಿತ ಶ್ರೀ ಗಜೇಂದ್ರ ಸಿಂಗ್ ಶೇಖಾವತ್, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರು, ಭಾರತ ಸರ್ಕಾರ ಹಾಗೂ ಶ್ರೀಮತಿ ಕೃಷ್ಣರಾಜ್, ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರು, ಭಾರತ ಸರ್ಕಾರ ಮತ್ತು ಡಾ. ತ್ರಿಲೋಚನ ಮಹಾಪಾತ್ರ, ಡೈರೆಕ್ಟರ್ ಜನರಲ್, ಐಸಿಎಆರ್, ನ್ಯೂಡೆಲ್ಲಿ ಇವರುಗಳು ಸಹ ಭಾಗವಹಿಸಿರುತ್ತಾರೆ. ಈ ಸಾಧನೆಗಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವರ್ಗವನ್ನು ಅಭಿನಂದಿಸಿದ್ದಾರೆ.