“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ

ಕೃಷಿ ನವೋದ್ಯಮಗಳಿಗೆ ಉತ್ತಮ ಅವಕಾಶಗಳಿವೆ. ನಮ್ಮ ಸಂಸ್ಥೆ ನಿಮಗೆ ನವೋದ್ಯಮಗಳ ಪ್ರಾರಂಭಕ್ಕೆ ನೆರವಾಗಲಿದೆ ಎಂದು ಡಾ.ಪಿ.ಚಂದ್ರಶೇಖರ್ ಜಯಪುರದ ಚೌದರಿ ಚರಣ ಸಿಂಗ್, ರಾಷ್ಟ್ರೀಯ ಕೃಷಿ ಮಾರುಕಟ್ಟೆ ಸಂಸ್ಥೆಯ (ನಿಯಾಮ್), ಮುಖ್ಯಸ್ಥರು ತಿಳಿಸಿದರು. ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ ಹಾಗೂ ನಿಯಾಮ್ ಸಹಯೋಗದಲ್ಲಿ ಆಯೋಜಿಸಿದ್ದ “ಕೃಷಿ ನವೋದ್ಯಮ ಅವಕಾಶಗಳ ಅನಾವರಣ ಜಾಲತಾಣ” ಸಂಕಿರಣದಲ್ಲಿ ಮಾತನಾಡಿದ ಡಾ.ಪಿ.ಚಂದ್ರಶೇಖರ್ ಅವರು, ನವೋದ್ಯಮಗಳಿಗೆ ಎರಡು ರೀತಿ ಅವಕಾಶಗಳಿವೆ ಬೀಜ ಪೂರ್ವ ಹಾಗೂ ಬೀಜ ಯೋಜನೆ ಅಂದರೆ ಹೊಸದಾಗಿ ನವೋದ್ಯಮ ಪ್ರಾರಂಭಿಸುವವರಿಗೆ ಹಾಗೂ ಈಗಾಗಲೇ ನವೋದ್ಯಮ ಪ್ರಾರಂಭಿಸಿದವರಿಗೆ ಉತ್ತಮ ಪ್ರಾರಂಭ ಹಾಗೂ ವಿಸ್ತರಣೆಗೆ ತರಬೇತಿ ಹಾಗೂ ಹಣಕಾಸು ನೆರವು ಲಭ್ಯವಿದೆ ಎಂದು ತಿಳಿಸಿದರು. ಮೊದಲ ಹಂತದಲ್ಲಿ ಎರಡು ತಿಂಗಳ ತರಬೇತಿ ನೀಡಿ ಆಯ್ಕೆಯಾದ ಯೋಜನೆಗೆ 5 ಲಕ್ಷಗಳವರೆಗೆ ಹಣಕಾಸು ನೆರವು ನೀಡಲಾಗುತ್ತದೆ. ಎರಡನೇ ಯೋಜನೆಗೆ 2 ತಿಂಗಳ ತರಬೇತಿ ಹಾಗೂ 25 ಲಕ್ಷಗಳವರೆಗಿನ ನೆರವು ದೊರೆಯುತ್ತದೆ ಎಂದರು. ನಾವು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದೊಂದಿಗೆ ನಿಕಟವಾಗಿ ಕಾರ್ಯ ಮಾಡುತ್ತಿದ್ದೇವೆ ಮಾಹಿತಿಗಾಗಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ನಿಯಾಮ್ ನಂತಹ ಕೇಂದ್ರದ ಮುಖ್ಯಸ್ಥನಾಗಿ ಕನ್ನಡದಲ್ಲಿ ಜಾಲತಾಣ ಸಂಕಿರಣದಲ್ಲಿ ಮಾತನಾಡುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದರು. ನಿಯಾಮ್ ಶ್ರೀ ಮನೋಜ್ ಅಗರ್ವಾಲ್ ಅವರು ನಿಯಾಮ್ ನ ಪರಿಚಯ ಮಾಡಿ ಅಲ್ಲಿ ಇದುವರೆಗೆ ಪ್ರಾರಂಭಿಸಿದ ನವೋದ್ಯಮಗಳ ಕುರಿತು ಪರಿಚಯ ಮಾಡಿಕೊಟ್ಟರು. ನವೋದ್ಯಮಿಗಳಾದ ಕಾರ್ತಿಕ್ ಶೇಖರ್, ಅನೀಶ್ ಕಟ್ನ ನವರ್, ಸಂಜಯ್ ಅಗರ್ವಾಲ್ ಅವರು ತಮ್ಮ ಅನುಭವ ಹಂಚಿಕೊಂಡರು. ಪುಂಡಿನಾರಿನಿಂದ ಉತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಒದಗಿಸುತ್ತಿರುವ ಹನೀಶ್ ಮಾತನಾಡಿ ನಿಯಾಮ್ ನೆರೆವಿನಿಂದ ನನ್ನ ಕನಸುಗಳಿಗೆ ಮೂಹೂರ್ತ ಸ್ವರೂಪಿ ದೊರೆಕಿದೆ ಎಂದರು. ಕುಲಪತಿಗಳಾದ ಡಾ.ಎಂ.ಕೆ.ನಾಯಕ್ ಮಾತನಾಡಿ ಎರಡು ಉನ್ನತ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ, ಇದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ನವೋದ್ಯಮ ಕೇಂದ್ರ ತೆರೆಯಲು ಮುನ್ನುಡಿ ಬರೆದಿದೆ ಎಂದರು. ಇನ್ನು ಮುಂದೆ ಕೃಷಿ ನವೋದ್ಯಮ ಪ್ರಾರಂಭಿಸಲು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ತಾಂತ್ರಿಕ ಹಾಗೂ ಮೂಲ ಸೌಕರ್ಯದ ಪ್ರಾರಂಭಿಕ ವ್ಯವಸ್ಥೆಗಳನ್ನು ಆಸಕ್ತರಿಗೆ ಮಾಡಿಕೊಡಲಿದೆ ಎಂದರು. ವಿಸ್ತರಣಾ ನಿರ್ದೇಶಕರಾದ ಡಾ. ಕೆ. ಸಿ. ಶಶಿಧರ ಅವರು ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ನಿಯಾಮ್ ನ ಚಂದ್ರಶೇಖರ್ ಕೈ ಜೋಡಿಸಿದ್ದಾರೆ. ಇದು ಮೊದಲ ಕಾರ್ಯಕ್ರಮವಾಗಿದ್ದು ಇನ್ನು ಮುಂದೆ ಇಂತಹ ಹಲವು ಅವಕಾಶಗಳನ್ನು ಕಲ್ಪಿಸಲು ನಮ್ಮ ವಿಶ್ವವಿದ್ಯಾಲಯ ಸಿದ್ದ ಎಂದು ತಿಳಿಸಿದರು. ಈ ತಿಂಗಳು ಪ್ರತಿ ದಿನ ನಿಯಾಮ್ ಕೃಷಿ ನವೋದ್ಯಮಗಳನ್ನು ಪರಿಚಯಿಸಲಿದೆ. ಪ್ರತಿದಿನ ಬೆಳಿಗ್ಗೆ
11.00 ರಿಂದ 12.00 ರವರೆಗೆ ದಿನಕ್ಕೊಂದು ನವೋದ್ಯಮಗಳ ಯಶೋಗಾಥೆ ಜಾಲತಾಣ ಸಂಕಿರಣ ನಡೆಯಲಿದೆ ಆಸಕ್ತರು ಈ ಕೆಳಗಿನ ಲಿಂಕ್ ಬಳಸಿ ವೀಕ್ಷಿಸಬಹುದು ಎಂದು ವಿಸ್ತರಣಾ ನಿರ್ದೇಶಕರಾದ ಡಾ.ಕೆ.ಸಿ. ಶಶಿಧರ ರವರು ತಿಳಿಸಿದ್ದಾರೆ.

error: Content is protected !!