“ಬೇಕರಿ ಉತ್ಪನ್ನಗಳ”ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ


ಕೋವಿಡ್ ನಂತರದ ಕೃಷಿ – ರೈತರ ಆದಾಯ ದ್ವಿಗುಣ ಮತ್ತು ಪೌಷ್ಟಿಕಾಂಶಗಳ ಭದ್ರತೆ’

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗವು ಈ ವರ್ಷ ಕೋವಿಡ್ ಕಾರಣದಿಂದ ಪ್ರತಿ ವರ್ಷದಂತೆ ನಡೆಯುವ ಕೃಷಿ ಮೇಳದ ಬದಲು ದಿನಾಂಕ 31-10-2021ನೇ ಭಾನುವಾರದಂದು “ಕೃಷಿ ಕ್ಷೇತ್ರೋತ್ಸವ ಮತ್ತು ವಿಚಾರ ಸಂಕಿರಣ-2021”ವನ್ನು ‘ಕೋವಿಡ್ ನಂತರದ ಕೃಷಿ – ರೈತರ ಆದಾಯ ದ್ವಿಗುಣ ಮತ್ತು ಪೌಷ್ಟಿಕಾಂಶಗಳ ಭದ್ರತೆ’ ಎಂಬ ಧ್ಯೇಯದೊಂದಿಗೆ ಶಿವಮೊಗ್ಗದ ವಿಶ್ವವಿದ್ಯಾಲಯದ ಆವರಣದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಈ ಕ್ಷೇತ್ರೋತ್ಸವವನ್ನು ಮಾನ್ಯ ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲಿದ್ದು, ಮಾನ್ಯ ಗೃಹ ಸಚಿವರು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಲೋಕ ಸಭಾ ಸದಸ್ಯರು, ಮಾನ್ಯ ವಿಧಾನ ಸಭಾ ಶಾಸಕರುಗಳು ಮತ್ತು ಸರ್ಕಾರದ ಇನ್ನಿತರ ಮಾನ್ಯರುಗಳು ಭಾಗವಹಿಸಲಿದ್ದಾರೆ.
ಕೃಷಿ ಕ್ಷೇತ್ರೋತ್ಸವದ ಸಂದರ್ಭದಲ್ಲಿ ಕೃಷಿ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆಯ ‘ಸಸ್ಯಕಾಶಿ’ಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಏಳು ಜಿಲ್ಲೆಗಳಿಂದ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾಧನೆಗೈದ ರೈತರು ಮತ್ತು ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ನವೀನ ತಾಂತ್ರಿಕತೆಗಳು ಮತ್ತು ವಿವಿಧ ಬೆಳೆಗಳ ಹೊಸ ತಳಿಗಳ ಬಿಡುಗಡೆಯನ್ನು ಮಾಡಲಾಗುತ್ತಿದೆ. ಅಲ್ಲದೆ ರೈತ ಸಮೂಹಕ್ಕೆ ಮಾಹಿತಿಗಾಗಿ ವಿವಿಧ ಬೆಳೆ ಮತ್ತು ತಾಂತ್ರಿಕತೆಗಳನ್ನು ಹೊತ್ತ ತಾಂತ್ರಿಕ ಕೈಪಿಡಿಗಳ ಬಿಡುಗಡೆ ಮಾಡಲಾಗುತ್ತಿದೆ.
ಕೃಷಿ ಪರಿಕರ ವಿತರಕರು, ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತ ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸಂವಾದವನ್ನು ಏರ್ಪಡಿಸಲಾಗಿದೆ.

ಕೃಷಿ ಕ್ಷೇತ್ರೋತ್ಸವದ ವಿಶೇಷತೆಗಳು :

 ತಂತ್ರಜ್ಞಾನ ಉದ್ಯಾನವನ  ಕೃಷಿ-ತೋಟಗಾರಿಕೆ-ಅರಣ್ಯ ಸಮಗ್ರ ಪದ್ಧತಿಗಳು
 ಭತ್ತ, ರಾಗಿ ಮತ್ತು ಮೆಕ್ಕೆಜೋಳ ತಳಿ ಮತ್ತು ತಂತ್ರಜ್ಞಾನ  ಸಾವಯವ ಕೃಷಿ
 ಹವಾಮಾನ ವೈಪರೀತ್ಯ ಚೇತರಿಕೆ ಪ್ರಾತ್ಯಕ್ಷಿಕೆ ಕೇಂದ್ರ  ಅಣಬೆ ಬೇಸಾಯ
 ದ್ವಿದಳ ಧಾನ್ಯ ತಳಿ ಪ್ರಾತ್ಯಕ್ಷಿಕೆ  ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ
 ವರ್ಜೀನಿಯ ತಂಬಾಕು ಹದಮಾಡುವ ತಂತ್ರಜ್ಞಾನ  ಸಮಗ್ರ ಜಲಾನಯನ ಅಭಿವೃದ್ಧಿ
 ವಿವಿಧ ಮೇವಿನ ಬೆಳೆಗಳು  ಪಶುಸಂಗೋಪನೆ ಮತ್ತು ಮೀನುಗಾರಿಕೆ ತಂತ್ರಜ್ಞಾನಗಳು
 ಹೈಡ್ರೋಪೋನಿಕ್ಸ್ (ಜಲ ಕೃಷಿ)  ಜೇನು ಸಾಕಾಣಿಕೆ
 ಅಡಿಕೆ ತಳಿ ಹಾಗೂ ತಂತ್ರಜ್ಞಾನ  ನೀರು ಮತ್ತು ಗೊಬ್ಬರ ನಿರ್ವಹಣೆ
 ಹೈ-ಟೆಕ್ ತೋಟಗಾರಿಕೆ  ರೈತರ ಯಶೋಗಾಥೆ ಮತ್ತು ಕೃಷಿ ತಜ್ಞರೊಂದಿಗೆ ಸಂವಾದ
 ಗೋಡಂಬಿ ಕೃಷಿ ತಾಂತ್ರಿಕತೆ  ಕೃಷಿ ಪರಿಕರಗಳ ಪ್ರದರ್ಶನ
 ಸಾಂಬಾರ್ ಬೆಳೆ ತಳಿ ಹಾಗೂ ತಂತ್ರಜ್ಞಾನ  ಕೃಷಿ ಯಂತ್ರೋಪಕರಣಗಳ ಪ್ರದರ್ಶನ
 ಖುಷ್ಕಿ ತೋಟಗಾರಿಕೆ ಪ್ರಾತ್ಯಕ್ಷಿಕೆಗಳು  ಶ್ರೇಷ್ಠ ಕೃಷಿಕರು ಮತ್ತು ಕೃಷಿ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ

ವಿಶ್ವ ವಿದ್ಯಾಲಯದ ಇತ್ತೀಚಿನ ಪ್ರಮುಖ ತಳಿಗಳು / ತಾಂತ್ರಿಕತೆಗಳು:
 ಸಹ್ಯಾದ್ರಿ ಕೆಂಪು ಮುಕ್ತಿ : ಅಧಿಕ ಇಳುವರಿ ಹಾಗೂ ಬೆಂಕಿ ರೋಗ ನಿರೋಧಕತೆ ಹೊಂದಿದ ಭತ್ತದ ತಳಿ.
 ಸಹ್ಯಾದ್ರಿ ಪಂಚಮುಖಿ : ಅಧಿಕ ಇಳುವರಿ ನೀಡುವ ಹಾಗೂ ಪ್ರವಾಹಕ್ಕೆ ತಡೆದುಕೊಳ್ಳುವ ಕೆಂಪು ಅಕ್ಕಿ ತಳಿ.
 ಸಹ್ಯಾದ್ರಿ ಬ್ರಹ್ಮ : ಇದು ಕುಬ್ಜ ಕಂದು ಅಕ್ಕಿ ತಳಿಯಾಗಿದ್ದು, 130-135 ದಿನಗಳಲ್ಲ್ಲಿ ಪಕ್ವವಾಗುತ್ತದೆ.
 ಸಹ್ಯಾದ್ರಿ ಮೇಘ : ಅಧಿಕ ಇಳುವರಿ ಕೊಡುವ ಭತ್ತದ ತಳಿಯಾಗಿದ್ದು, ಮಳೆಗಾಲ ಮತ್ತು ಬೇಸಿಗೆಗೆ ಸೂಕ್ತವಾದ ತಳಿಯಾಗಿದೆ.
 ಸಹ್ಯಾದ್ರಿ ಕಾವೇರಿ : ಅಧಿಕ ಇಳುವರಿ ನೀಡುವ ಭತ್ತದ ತಳಿಯಾಗಿದ್ದು, ಮಳೆಯಾಶ್ರಿತ ಬೆಳೆಗೆ ಅನುಕೂಲವಾಗಿದೆ.
 ಅಲಸಂದೆ- ಸಹ್ಯಾದ್ರಿ ಯುಕ್ತಿ : ಇದು ಅಲಸಂದೆ ತಳಿಯಾಗಿದ್ದು ಬೇಸಿಗೆ ಮತ್ತು ಮುಂಗಾರು ಬೆಳೆಗೆ ಸೂಕ್ತವಾಗಿದೆ.
 ತಂಬಾಕು- ಸಹ್ಯಾದ್ರಿ ಟೋಬಿಯಾಸ್ : ಇದು ಬರ ನಿರೋಧಕ ತಂಬಾಕಿನ ತಳಿಯಾಗಿದ್ದು ಕೊಳೆ ರೋಗಕ್ಕೆ ಮತ್ತು ಕಪ್ಪೆ ಕಣ್ಣಿನ ಎಲೆ ಚುಕ್ಕೆ ರೋಗ ತಡೆಗಟ್ಟುವ ಶಕ್ತಿ ಹೊಂದಿದೆ.
 ಮೋಟಾರ್ ಚಾಲಿತ ಕಾಫಿ ಒಟ್ಟುಗೂಡಿಸುವ ಯಂತ್ರ.
 ಕೈ ಚಾಲಿತ ಕಾಫಿ ರೇಕಾರ್ ಯಂತ್ರ್ರ
 ಅಡಿಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆ.
 ಭತ್ತದಲ್ಲಿ ಕಳೆ ತೆಗೆಯುವ ಸುಧಾರಿತ ಕೋನೋ ವೀಡರ್.
 ಈರುಳ್ಳಿ ಬಿತ್ತನೆ ಮಾಡುವ ಸುಧಾರಿತ ಯಂತ್ರ ಪ್ರಮುಖ ಬೆಳೆಗಳಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಗೆ ನವೀನ ತಾಂತ್ರಿಕತೆಗಳು.
 ಪ್ರಮುಖ ಬೆಳೆಗಳಲ್ಲಿ ಸುಧಾರಿತ ಬೇಸಾಯ ಕ್ರಮಗಳು.

ಹಣ್ಣು ಮತ್ತು ತರಕಾರಿಗಳ ಅಂತರ ರಾಷ್ಟೀಯ ವರ್ಷ -2021
 ತೋಟಗಾರಿಕೆ ಎನ್ನುವುದು ಕೃಷಿಯ ಒಂದು ಭಾಗವಾಗಿದ್ದು, ಇದು ಹೂವು, ಹಣ್ಣು, ತರಕಾರಿ ತೋಟಪಟ್ಟಿ ಬೆಳೆಗಳು ಸಾಂಬಾರು ಬೆಳೆಗಳು, ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳು ಮತ್ತು ಅಲಂಕಾರಿಕ ಸಸ್ಯ ಬೆಳೆಗಳನ್ನು ಒಳಗೊಂಡಿರುತ್ತದೆ. ಮಾನವನ ಪೌಷ್ಟಿಕಾಂಶದ ದೃಷ್ಟಿಕೋನದಿಂದ ನಮ್ಮ ದೈನಂದಿನ ಜೀವನಕ್ಕೆ ತೋಟಗಾರಿಕೆ ಬಹಳ ಮುಖ್ಯವಾಗಿದೆ. ಹಣ್ಣು ಮತ್ತು ತರಕಾರಿ ಆರೋಗ್ಯಕರ ಆಹಾರದ ಆಧಾರವಾಗಿವೆ. ಮಾನವನ ಪೋಷಣೆ, ಆಹಾರ ಭದ್ರತೆ ಮತ್ತು ಆರೋಗ್ಯದಲ್ಲಿ ಹಣ್ಣು ಮತ್ತು ತರಕಾರಿಗಳ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ‘ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿಯು’ 2021 ರ ಈ ವರ್ಷವನ್ನು ‘ಅಂತರರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷ’ ಎಂದು ಘೋಷಿಸಿದೆ. ಹಣ್ಣು ಮತ್ತು ತರಕಾರಿಗಳು ಮಾನವನ ಆರೋಗ್ಯಕ್ಕೆ ಬೇಕಾದ ಜೀವಸತ್ವಗಳು, ಖನಿಜಗಳು, ಪ್ರೊಟೀನ್‍ಗಳನ್ನು ಹೊಂದಿದ್ದು ಮತ್ತು ಶಕ್ತಿಯ ಉತ್ತಮ ಮೂಲಗಳಾಗಿವೆ. ಆದ್ದರಿಂದಲೇ ಅವುಗಳು ಆರೋಗ್ಯ ರಕ್ಷಕ ಆಹಾರ ಎಂದು ಕರೆಯಲ್ಪಡುತ್ತವೆ. ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಒ) ಮತ್ತು ವಿಶ್ವ ಅರೋಗ್ಯ ಸಂಸ್ಥೆ (ಡಬ್ಲ್ಯೂ.ಹೆಚ್.ಒ) ಪ್ರತಿ ವಯಸ್ಕರು ಕ್ಯಾನ್ಸರ್, ಮಧುಮೇಹ, ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಸ್ಥೂಲಕಾಯತೆ, ಜೊತೆಗೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸಲು ಪ್ರತಿದಿನ ಕನಿಷ್ಠ ನಾವು ಸೇವಿಸುವ ಆಹಾರದಲ್ಲಿ 285 ರಿಂದ 300 ಗ್ರಾಂ ತರಕಾರಿ (115-125 ಗ್ರಾಂ ಸೊಪ್ಪು ತರಕಾರಿ), 85 ಗ್ರಾಂ ಗೆಡ್ಡೆ ತರಕಾರಿ, 85 ಗ್ರಾಂ ಇತರೆ ತರಕಾರಿ ಹಾಗೂ 100 ಗ್ರಾಂ ಹಣ್ಣು ಹಂಪಲಿನಿಂದ ಕೂಡಿದ ಸಮತೋಲನ ಆಹಾರ ಇರಬೇಕು. ಕೊರೋನಾ ಸಾಂಕ್ರಾಮಿಕ ಸೋಂಕು ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ನಾವು ದೀರ್ಘಕಾಲದವರೆಗೆ ಕೊರೋನಾ ವೈರಾಣುವಿನೊಂದಿಗೆ ಬದುಕಬೇಕಾದ ಅನಿವಾರ್ಯತೆ ತಲೆದೋರಿದೆ. ಏಕೆಂದರೆ ಈ ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಕಂಡು ಹಿಡಿದರೂ ಸಹ, ಎಲ್ಲಾ ಜನರನ್ನು ತಲುಪಲು ಸುಮಾರು ಸಮಯ ತೆಗೆದುಕೊಳ್ಳುವುದರಿಂದ, ವಿಶ್ವ ಅರೋಗ್ಯ ಸಂಸ್ಥೆಯು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಪೌಷ್ಟಿಕಾಂಶಗನ್ನು ನೀಡುವ ತರಕಾರಿ ಮತ್ತು ಹಣ್ಣುಗಳ ಸೇವನೆ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ. ನಮ್ಮ ರಾಜ್ಯದಲ್ಲಿ ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದು, ಶೇ.25 ರಿಂದ 30 ರಷ್ಟು ಉತ್ಪಾದನೆಯು ನಾನಾ ಬಗೆಯ ಕಾರಣಗಳಿಂದ ಕೊಳೆತು ಹಾಳಾಗಿ ರೈತರಿಗೆ ಹೆಚ್ಚಿನ ಆರ್ಥಿಕ ನಷ್ಟವುಂಟಾಗುತ್ತಿದೆ. ಈ ನಷ್ಟಕ್ಕೆ ಮುಖ್ಯವಾದ ಕಾರಣಗಳೆಂದರೆ ಹಣ್ಣು ಮತ್ತು ತರಕಾರಿಗಳನ್ನು ಸಂಸ್ಕರಿಸುವ ತಂತ್ರಜ್ಞಾನ ಎಲ್ಲ ಕಡೆ ಲಭ್ಯವಿಲ್ಲದಿರುವುದು, ಫಸಲು ಉತ್ಪಾದನೆಯಾದ ನಂತರ ತಗಲುವ ರೋಗ ಮತ್ತು ಹವಾಗುಣದಲ್ಲಿನ ವೈಪರೀತ್ಯಗಳು ಅವುಗಳ ಕೊಯ್ಲೋತ್ತರ ನಿರ್ವಹಣೆಗೆ ಪ್ರಮುಖ ಕಾರಣಗಳಾಗಿವೆ ಇವುಗಳಲ್ಲದೇ, ಅವೈಜ್ಞಾನಿಕ ನಿರ್ವಹಣೆ, ಸರಿಯಾದ ರೀತಿಯಲ್ಲಿ ಪ್ಯಾಕ್ ಮಾಡದೆ ಇರುವುದು, ಅಸಮರ್ಪಕ ಸಾಗಾಣಿಕೆ, ಶೇಖರಣೆ ಹಾಗೂ ಅಸಮರ್ಪಕ ಮಾರಾಟದ ವಿಧಾನ ಹೀಗೆ ಅನೇಕ ಕಾರಣಗಳಿಂದ ರೈತರಿಗೆ ದೊಡ್ಡ ಗಾತ್ರದ ಹಾನಿಗೆ ಕಾರಣಗಳಾಗಿವೆ. ಆದ್ದರಿಂದ ವೈಜ್ಞಾನಿಕ ರೀತಿಯಲ್ಲಿ ಕೊಯ್ಲು ಮತ್ತು ಕೊಯ್ಲಿನ ನಂತರದ ನಿರ್ವಹಣಾ ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಇಂತಹ ನಷ್ಟಗಳನ್ನು ತಡೆಗಟ್ಟಬಹುದಾಗಿದೆ.
 ಲಕ್ಷಾಂತರ ಗ್ರಾಮೀಣ ಕುಟುಂಬಗಳಿಗೆ ವಿಶಾಲವಾದ ಮಾರುಕಟ್ಟೆ ಆಯ್ಕೆಗಳನ್ನು ಉತ್ತೇಜಿಸುವುದರೊಂದಿಗೆ ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ಮತ್ತು ಅವುಗಳ ಬಳಕೆಯಲ್ಲಿ ರೈತರ ಪಾತ್ರವನ್ನು ಬಲಪಡಿಸುವುದರೊಂದಿಗೆ ಆಹಾರ ಭದ್ರತೆ ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ.

ಪೋಷಕಾಂಶಗಳ ಭದ್ರತೆ:
ಕೋವಿಡ್-19 ಸಾಂಕ್ರಾಮಿಕವು ಮನುಷ್ಯರ ಆರೋಗ್ಯಕ್ಕೆ ಬಿಕ್ಕಟ್ಟಾಗಿ ಪರಿಣಮಿಸಿದೆ. ಇಂತಹ ಸಮಸ್ಯೆಗೆ ಮೂಲ ಕಾರಣ ನಾವು ಸೇವಿಸುವ ಆಹಾರದಲ್ಲಿನ ಪೋಷಕಾಂಶಗಳ ಕೊರತೆ. ಈ ಸಂದರ್ಭದಲ್ಲಿ ನಾವು ಆಹಾರ ಭದ್ರತೆ ಮತ್ತು ಪೌಷ್ಠಿಕತೆಯ ಆಯಾಮಗಳನ್ನು ನಿಭಾಯಿಸುವುದು ಮುಖ್ಯವಾಗಿದೆ. ಆದುದರಿಂದ ನಾವು ಸೇವಿಸುವ ಆಹಾರ ಕ್ರಮವನ್ನು ಆರೋಗ್ಯ ರೀತಿಯಲ್ಲಿ ಇರುವಂತೆ ಮುನ್ನೆಚ್ಚರಿಕೆ ವಹಿಸಬೇಕು. ದೇಹಕ್ಕೆ ಬೇಕಾಗುವಂತಹ ಉತ್ತಮ ಶರ್ಕರಪಿಷ್ಟ, ವಿಟಮಿನ್, ಖನಿಜಾಂಶ ಹಾಗೂ ಹೆಚ್ಚಿನ ಪೆÇೀಷಕಾಂಶ ಇರುವ ಆಹಾರವನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯು 300 ಗ್ರಾಂ ತರಕಾರಿಗಳು ಹಾಗೂ 100 ಗ್ರಾಂನಷ್ಟು ಹಣ್ಣುಗಳನ್ನು ಸೇವಿಸಬೇಕು.

ಹಣ್ಣು ಮತ್ತು ತರಕಾರಿಗಳು ಪೋಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ.
 ಹಣ್ಣು ಮತ್ತು ತರಕಾರಿಗಳು ಖನಿಜಲವಣಗಳ ಮತ್ತು ಜೀವಸತ್ವಗಳ ಭಂಡಾರವೇ ಆಗಿವೆ.
 ತರಕಾರಿಗಳು ನಾರಿನಾಂಶವನ್ನು ಅಧಿಕವಾಗಿ ಹೊಂದಿವೆ. ಮಧುಮೇಹ ಮತ್ತು ರಕ್ತದೊತ್ತಡ ಮುಂತಾದ ಕಾಯಿಲೆಗಳಿಂದ ಬಳಲುವವರು ತರಕಾರಿಗಳನ್ನು ಹೆಚ್ಚು ಸೇವಿಸುವುದು ಅಗತ್ಯ.
 ಜೈವಿಕ ರಾಸಾಯನಿಕ ಕ್ರಿಯೆಗಳಿಗೆ ನೆರವಾಗಬಲ್ಲ ಚೋದಕ ಹಾಗೂ ಕಿಣ್ವಗಳ ಉತ್ಪತ್ತಿ ಮತ್ತು ಚಟುವಟಿಕೆಗಳಿಗೆ ನೆರವಾಗುತ್ತವೆ.
 ತರಕಾರಿಗಳು ಸ್ಥೂಲಕಾಯಿಗಳಿಗೆ ತೂಕ ಇಳಿಸಲು ಸಹಾಯಕಾರಿ.
 ತರಕಾರಿಗಳಲ್ಲಿ ಉತ್ಕರ್ಷಣೆಯನ್ನು ತಡೆಯಬಲ್ಲ “ಆ್ಯಂಟಿ ಆಕ್ಸಿಡೆಂಟ್‍ಗಳು” ಹೇರಳವಾಗಿವೆ. ಹೀಗಾಗಿ ಇವು ಕ್ಯಾನ್ಸರ್ ರೋಗದಿಂದ ರಕ್ಷಣೆ ನೀಡುತ್ತವೆ.
 ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ.

ಪೌಷ್ಠಿಕ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮಲ್ಲಿ ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ. ಅವು ಯಾವುವೆಂದರೆ:
 ಸಿಟ್ರಸ್ ಅಂಶ ಇರುವ ಹಣ್ಣುಗಳನ್ನು ಸೇವಿಸುವುದರಿಂದ ಇವು ವಿಟಮಿನ್ ‘ಸಿ’ ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುತ್ತವೆ. ಅಣಬೆಯ ಸೇವನೆಯಿಂದ ಇದರಲ್ಲಿರುವ ಸಸಾರಜನಕ ಹಾಗೂ ಇತರೆ ಪೆÇೀಷಕಾಂಶಗಳು ಸೋಂಕಾಣು ಮತ್ತು ಬ್ಯಾಕ್ಟೀರಿಯಾದ ವಿರುದ್ದ ಹೋರಾಡಲು ಸಹಾಯ ಮಾಡುತ್ತವೆ.
 ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುವುದರಿಂದ ದೇಹದಲ್ಲಿ ಪೆÇೀಷಕಾಂಶಗಳನ್ನು ದೊರೆಯುವಂತೆ ಸಹಾಯ ಮಾಡುತ್ತದೆ ಅಲ್ಲದೆ ಇದರಲ್ಲಿ ಕ್ಯಾನ್ಸರ್ ವಿರುದ್ದ ಹೋರಾಡುವ ಆ್ಯಂಟಿ ಆಕ್ಸಿಡೆಂಟ್‍ಗಳಿವೆ ಇರುತ್ತದೆ.
 ಮೊಸರಲ್ಲಿ ಪೆÇ್ರೀಬಯೋಟಿಕ್ ಬ್ಯಾಕ್ಟೀರಿಯಾವು ಜಠರದ ಆರೋಗ್ಯವನ್ನು ಹೆಚ್ಚಿಸಿ ಸೋಂಕು ತಗಲದಂತೆ ಕಾಪಾಡುತ್ತದೆ.
 ಶುಂಠಿಯು ಒಣ ಕೆಮ್ಮನ್ನು ತಡೆಯಲು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
 ನಿಂಬೆ ಮತ್ತು ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು ಇದು ಉತ್ಕರ್ಷಣಾ ನಿರೋಧಕ ಮತ್ತು ರೋಗ ನಿರೋಧಕ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ.

ರೈತರ ಆದಾಯ ದ್ವಿಗುಣ:
ರೈತರ ಆದಾಯ ದ್ವಿಗುಣಗೊಳಿಸುವುದು ಭಾರತ ಸರ್ಕಾರದ ಕನಸಿನ ಯೋಜನೆಗಳ ಪೈಕಿ ಪ್ರಮುಖವಾದದ್ದಾಗಿದೆ. ಯೋಜನೆಗೆ ಸಂಬಂಧಿಸಿದ ರೂಪರೇμÉಗಳು ಸುಲಭ ಆದರೆ ಅದನ್ನು ಸಾಧಿಸಲು ಇರುವ ಮಾರ್ಗ ಬಹಳ ಸವಾಲಿನದ್ದಾಗಿದೆ.
ಭಾರತ ಸರ್ಕಾರದ ಆದೇಶದಂತೆ 2022-23ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಂಕಲ್ಪವನ್ನು ಹೊಂದಲಾಗಿದೆ. ಇದಕ್ಕಾಗಿ ಬೆಳೆ ಸುಧಾರಣೆ, ಜಾನುವಾರು ಉತ್ಪಾದಕತೆ, ಸಂಪನ್ಮೂಲ ಬಳಕೆಯಲ್ಲಿ ದಕ್ಷತೆ, ಉತ್ಪಾದನಾ ವೆಚ್ಚದಲ್ಲಿ ಉಳಿತಾಯ, ಬೆಳೆಯ ತೀವ್ರತೆಯನ್ನು ಹೆಚ್ಚಿಸುವುದು, ವಾಣಿಜ್ಯ ಬೆಳೆಗಳ ಕಡೆಗೆ ವೈವಿಧ್ಯಗೊಳಿಸುವುದು, ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸುವುದು ಮತ್ತು ರೈತರ ಬೆಳೆಗಳಿಗೆ ನೈಜ ಬೆಳೆಯನ್ನು ನೀಡುವತ್ತ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ರೈತರ ಆದಾಯ ದ್ವಿಗುಣಗೊಳಿಸುವುದರಲ್ಲಿ ಬಹುದೊಡ್ಡ ಸವಾಲು ಇರುವುದು ಕೊಯ್ಲು ನಂತರದ ಪ್ರಕ್ರಿಯೆ, ಆದ್ದರಿಂದ ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದರತ್ತ ಹೆಚ್ಚಿನ ಗಮನ ಹರಿಸಬೇಕಿದ್ದು, ಕೊಯ್ಲು ನಂತರ-ಒಟ್ಟುಗೂಡಿಸುವಿಕೆ, ಸಂಸ್ಕರಣೆ, ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ರಫ್ತು ವಿಭಾಗಗಳೂ ಕೂಡ ರೈತರ ಆದಾಯವನ್ನು ದ್ವಿಗುಣಗೊಳಿಸುವುದಕ್ಕೆ ಪ್ರಮುಖ ಅಂಶವಾಗಿರಲಿವೆ.
ಹಣ್ಣು-ತರಕಾರಿಗಳ ವಿಭಾಗದಲ್ಲಿ ಶೇ.25-30ರಷ್ಟು ಪೋಲಾಗುತ್ತಿದೆ. ಆದರೆ ಆಹಾರ ಧಾನ್ಯಗಳ ವಿಭಾಗದಲ್ಲಿ ಪೋಲು ಪ್ರಮಾಣ ಶೇ.8-10ರಷ್ಟಿದೆ. ಇದರಿಂದ 95,000 ಕೋಟಿ ರೂಪಾಯಿ ಮೌಲ್ಯದ ಹಣ್ಣುಗಳು, ತರಕಾರಿಗಳು, ಆಹಾರ ಧಾನ್ಯಗಳು ನಷ್ಟವಾಗುತ್ತಿವೆ. ಹಾಲು ಉತ್ಪಾದನೆಯಲ್ಲಿ ಉತ್ಪಾದನೆಯಿಂದ ಗ್ರಾಹಕರವರೆಗೆ ಕೋಲ್ಡ್ ಚೈನ್ ಇರುವುದರಿಂದ ಶೇ.1ರಷ್ಟು ಉತ್ಪನ್ನ ವ್ಯರ್ಥವಾಗುತ್ತದೆ. ಆದರೆ ತರಕಾರಿಗಳು ಹಣ್ಣುಗಳು ಕೊಯ್ಲಿನ ನಂತರ ಬೇಗ ಹಾಳಾಗುತ್ತದೆ. ಸರಿಯಾದ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಕೊರತೆಯ ಕಾರಣದಿಂದಾಗಿ ಈ ವಿಭಾಗದಲ್ಲಿ ನಷ್ಟ ಹೆಚ್ಚಾಗಿದೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ.
“ಉತ್ಪನ್ನಗಳಿಗೆ ಸರ್ಕಾರದಿಂದ ಸರಿಯಾದ ಮಾರುಕಟ್ಟೆ ಸೌಲಭ್ಯಗಳು ಮತ್ತು ಕನಿಷ್ಠ ಬೆಂಬಲ ಬೆಲೆ ದೊರೆತಲ್ಲಿ ರೈತರು ವೈಜ್ಞಾನಿಕವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇದು ಇಲ್ಲದೇ ಹೋದಲ್ಲಿ ಕೃಷಿಯೆಡೆಗಿನ ಆಸಕ್ತಿ ಕಡಿಮೆಯಾಗುತ್ತದೆ.
ಸರ್ಕಾರ ಕೆಲವು ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆ ನೀಡಿ ಖರೀದಿಸುತ್ತದೆ. ಕೆಲವೊಂದು ಉತ್ಪನ್ನಗಳ ಉತ್ಪಾದನೆ, ಪೂರೈಕೆ ಹಾಗೂ ಬೇಡಿಕೆಯ ನಡುವೆ ಅಂತರ ಹೆಚ್ಚಾಗಿದೆ. ಹತಾಶೆಗೊಳಗಾಗುವ ರೈತರು ಬೆಳೆದು ನಿಂತಿರುವ ಕೃಷಿ ಉತ್ಪನ್ನಗಳನ್ನು ನಾಶ ಮಾಡುತ್ತಾರೆ ಹಾಗೂ ಮುಂದಿನ ಹಂತದ ಬೆಳೆಯ ಬಗ್ಗೆ ಅನಾಸಕ್ತಿ ತೋರುತ್ತಾರೆ. ರೈತರ ಆದಾಯ ದ್ವಿಗುಣಗೊಳಿಸಲು ಆಹಾರೋತ್ಪನ್ನಗಳ ಕೊಯ್ಲು ನಂತರದ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವುದು ಬಹುದೊಡ್ಡ ಸವಾಲಿನ ಸಂಗತಿಯಾಗಿದೆ.

ರೈತರು ಈ ಕೆಳಕಂಡ ಅಂಶಗಳನ್ನು ಅನುಸರಿಸಿದ್ದಲ್ಲಿ ಆದಾಯವನ್ನು ದ್ವಿಗುಣಗೊಳಿಸಲು ಸಹಕಾರಿಯಾಗುತ್ತದೆ:
 ವೈಜ್ಞಾನಿಕ ಸಮಗ್ರ ಕೃಷಿ ಪದ್ಧತಿಯನ್ನು ಅವರ ತಾಕುವಿನಲ್ಲಿ ಅಳವಡಿಸುವುದು.
 ಉತ್ತಮ ಬೆಲೆ ಸಿಗುವಂತಹ ಬೆಳೆಗಳನ್ನು ಬೆಳೆಯುವ ಜ್ಞಾನ ಮತ್ತು ಸಹಕಾರವನ್ನು ಪಡೆದುಕೊಳ್ಳುವುದು.
 ಮೂಲಸೌಕರ್ಯಗಳನ್ನು (ಶೇಖರಣೆ, ತಂಪು ಶೇಖರಣಾ ಘಟಕ, ಕೃಷಿ ಯಂತ್ರೋಪಕರಣಗಳು, ಪರಿಕರಗಳು ಇತ್ಯಾದಿ) ಪರಸ್ಪರ ವಿನಿಮಯ ಮಾಡಿಕೊಂಡು ಸದ್ಬಳಕೆ ಮಾಡುವುದು.
 ಖರೀದಿದಾರರೊಂದಿಗೆ ಉತ್ತಮ ಬೆಳೆ ಬೆಲೆಗಾಗಿ ಮಾತುಕತೆ ಮಾಡಿಕೊಳ್ಳುವುದು.
 ಕೃಷಿ ಪರಿಕರಗಳನ್ನು ಖರೀದಿ ಮಾಡುವಾಗ ಮಾರಾಟಗಾರರೊಂದಿಗೆ ಗುಣಮಟ್ಟದ ಪರಿಕರ ಮತ್ತು ಉತ್ತಮ ಬೆಲೆಗಾಗಿ ಮಾತುಕತೆ ಮಾಡಿಕೊಳ್ಳುವುದು.
 ರೈತರ ಉತ್ಪಾದನಾ ಸಂಸ್ಥೆಗಳನ್ನು ಸ್ಥಾಪಿಸಿ, ಇದರ ಮೂಲಕ ಕೃಷಿ ಪರಿಕರಗಳ ಖರೀದಿ ಮತ್ತು ಮಾರಾಟ ಹಾಗೂ ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದು
 ಮಣ್ಣು ಪರೀಕ್ಷೆ ಆಧಾರದ ಮೇಲೆ ಬೆಳೆಗಳಿಗೆ ಗೊಬ್ಬರಗಳನ್ನು ನೀಡುವುದು.
 ಹಸಿರು ಮನೆಗಳಲ್ಲಿ ಹೆಚ್ಚಿನ ಬೆಲೆಯುಳ್ಳ ಹಣ್ಣು ತರಕಾರಿಗಳು ಮತ್ತು ಬೇಸಾಯ ಮಾಡುವುದು
 ಸೂಕ್ಷ್ಮ ನೀರಾವರಿ ಹಾಗೂ ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿಯನ್ನು ಪಡೆಯಬೇಕು.
 ಕೊಯ್ಲಿನ ನಂತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದು.

error: Content is protected !!