ಮುಂಗಾರಿನ ಪ್ರಮುಖ ಬೆಳೆಯಾಗಿರುವ ತೊಗರಿಯು ವಾತಾವರಣದಲ್ಲಿರುವ ಸಾರಜನಕವನ್ನು ಭೂಮಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು. ಇದಕ್ಕೆ ಪರಿಹಾರವಾಗಿ ತೊಗರಿ ಕಟ್ಟಿಗೆ ಮತ್ತು ಬೆಳೆಯುಳಿಕೆಗಳು ಒಂದು ವರದಾನವಾಗಿದೆ. ಪ್ರತಿ ವರ್ಷ ತೊಗರಿಯ ಇಳುವರಿಯ ಜೊತೆಗೆ ಕಟ್ಟಿಗೆಯ ಉತ್ಪಾದನೆಯೂ ಹೆಚ್ಚಾಗುತ್ತಲಿದ್ದು ಶೇ.90 ರಷ್ಟು ಉರುವಲುಗಾಗಿಯೇ ಬಳಸುತ್ತಿರುವುದರಿಂದ ಅದರಲ್ಲಿನ ಉಪಯುಕ್ತ ಸಸ್ಯ ಪೋಷಕಾಂಶಗಳು ಬೆಳೆ ಉತ್ಪಾದನೆಯಲ್ಲಿ ಏನು ಬಳಕೆಯಾಗುತ್ತಿಲ್ಲ. ಕಟ್ಟಿಗೆಯ ಸಮರ್ಥ ಬಳಕೆಯಿಂದ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ ಜೊತೆಗೆ ಲಘು ಪೋಷಕಾಂಶಗಳನ್ನೂ ಮಣ್ಣಿಗೆ ಒದಗಿಸಬಹುದಾಗಿದೆ.

ತೊಗರಿ ಕಟ್ಟಿಗೆಯು ಸರಾಸರಿ ಶೇ.0.84 ಸಾರಜನಕ, 0.04 ರಂಜಕ ಹಾಗೂ ಶೇ. 0.35 ರಷ್ಟು ಪೋಟ್ಯಾಷ್ ಪೋಷಕಾಂಶದ ಜೊತೆಗೆ ಲಘು ಪೋಷಕಾಂಶಗಳನ್ನು ಹೊಂದಿದೆ. ಆದರೆ ಇಂದು ತೊಗರಿ ಕಟ್ಟಿಗೆಯ ಸದ್ಬಳಕೆಯಾಗದೇ ನಿರ್ಲಕ್ಷ್ಯದಿಂದ ಅದರಲ್ಲಿನ ಪೋಷಕಾಂಶಗಳು ವ್ಯರ್ಥವಾಗಿ ಹಾಳಾಗುತ್ತಿವೆ.  ಆದ್ದರಿಂದ ತೊಗರಿ ಕಟ್ಟಿಗೆಯನ್ನು ಸೂಕ್ತವಾಗಿ ಬೆಳೆ ಉತ್ಪಾದನೆಯಲ್ಲಿ ಮರುಬಳಕೆ ಮಾಡಿದರೆ ಬೆಳೆಯ ಇಳುವರಿಯ ಸ್ಥಿರತೆಯೊಂದಿಗೆ ಖರ್ಚಿಲದೇ ಮಣ್ಣಿನ ಫಲವತ್ತತೆಯನ್ನು ಸುಧಾರಿಸಬಹುದು.  ತೊಗರಿ ಕಾಯಿಗಳನ್ನು ರಾಶಿ ಮಾಡಿದ ನಂತರ ಉಳಿದ ಕಟ್ಟಿಗೆ ಮತ್ತು ಬೆಳೆಯ ಉಳಿಕೆಗಳನ್ನು ಮಣ್ಣಿನಲ್ಲಿ ಸೇರಿಸುವುದು. ಯಂತ್ರೋಪಕರಣಗಳ ಸಹಾಯದಿಂದ ಕಟ್ಟಿಗೆಯನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ ಹೊಲದ ಮೇಲೆ ಹೊದಿಕೆಯಂತೆ ಹಾಕಿ ನಂತರ ಮುಂಗಾರಿನಲ್ಲಿ ರಂಟೆ ಹೊಡೆಯುವ ಮೂಲಕವೂ ಮಣ್ಣಿಗೆ ಸೇರಿಸಬಹುದು.  ತೊಗರಿ ಕಟ್ಟಿಗೆಯನ್ನು ಚಿಕ್ಕದಾಗಿ ತುಂಡರಿಸಿ ಅಥವಾ ಪುಡಿ-ಪುಡಿ ಮಾಡಿ ನೇರವಾಗಿ ಮಣ್ಣಿನಲ್ಲಿ ಸೇರಿಸುವುದು ಅಥವಾ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ತಯಾರಿಕೆಯಲ್ಲಿ ಕೂಡ ಕಚ್ಚಾ ಸಾಮಗ್ರಿಯಾಗಿ ಬಳಸಬಹುದು.  ಜೈವಿಕ ಸೂಕ್ಷ್ಮಾಣು ಜೀವಿಗಳಿಂದ ತೊಗರಿ ಕಟ್ಟಿಗೆಯನ್ನು ಕೊಳೆಯಿಸಿ ಉತ್ತಮ ಕಾಂಪೋಸ್ಟ್ ತಯಾರಿಸಿ ಸಮರ್ಥವಾಗಿ ಬಳಕೆ ಮಾಡಬಹುದು. ತೊಗರಿ ಕಟ್ಟಿಗೆಯ ಮರುಬಳಕೆಯಿಂದ ಮಣ್ಣಿನ ಸಾವಯವ ಇಂಗಾಲ ಮತ್ತು ನೀರು ಹಿಡಿದಿಟ್ಟುಕೊಂಡು ಭೂಮಿಯ ತೇವಾಂಶ ಕಾಪಾಡಿಕೊಳ್ಳುವುದರ ಜೊತೆಗೆ ಕಳೆಗಳನ್ನು ಹತೋಟಿ ಮಾಡಬಹುದು. ಈ ಮೂಲಕ ಬೆಳೆಗಳಿಗೆ ಕೊಡಬೇಕಾದ ರಾಸಾಯನಿಕ ಗೊಬ್ಬರಗಳÀ ಪ್ರಮಾಣವನ್ನು ಕಡಿಮೆ ಮಾಡಿ ಅನಗತ್ಯ ಖರ್ಚು ಉಳಿಸುವುದರ ಜೊತೆಗೆ ಇಳುವರಿಯನ್ನೂ ಹೆಚ್ಚಿಸಬಹುದಾಗಿದೆ. ರೈತರು ತೊಗರಿ ಕಟ್ಟಿಗೆ ಮತ್ತು ಬೆಳೆಯ ಉಳಿಕೆಗಳನ್ನು ಸುಡದೇ ಗೊಬ್ಬರವಾಗಿ ಪರಿವರ್ತಿಸಿ ಮರಳಿ ಮಣ್ಣಿಗೆ ಸೇರಿಸಿ ತಮ್ಮ ಫಲವತತ್ತÉ್ತಯನ್ನು ಕಡಿಮೆ ಖರ್ಚಿನಲ್ಲಿ ಹೆಚ್ಚಿಸಿಕೊಳ್ಳಬಹುದು. ಈ ಮೂಲಕ ರೈತರು ವಾತಾವರಣವು ಮಾಲಿನ್ಯವಾಗದಂತೆ ತಡೆಗಟ್ಟಲು ಪರಿಸರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬಹುದು. ತೊಗರಿಯಲ್ಲಿ ಅಧಿಕ ಇಳುವರಿಯನ್ನು ತೆಗೆಯಲು ಮಣ್ಣಿನ ಪೋಷಕಾಂಶಗಳು ಕಡಿಮೆಯಾಗುತ್ತ ಹೋಗುತ್ತ್ತಿವೆ. ಇದರಿಂದಾಗಿ ಉತ್ಪಾದನಾ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ. ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಮುಖ್ಯ ಆದುದ್ದರಿಂದ ರೈತರು ಜಮೀನಿನ ಫಲವತ್ತತೆಯನ್ನು ಹೆಚ್ಚಿಸಲು ಪುನ: ಈ ಪೋಷಕಾಂಶಗಳನ್ನು ಮಣ್ಣಿಗೆ ಸೇರಿಸಬೇಕಾಗಿರುತ್ತದೆ.  

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ: ಡಾ. ಜಹೀರ ಅಹೆಮದ್, ಡಾ. ಶ್ರೀನಿವಾಸ ಬಿ.ವಿ. ಮತ್ತು ಐಸಿಎಅರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮೊಬೈಲ್‌ ನಂ: 98453 00326

error: Content is protected !!