ಶ್ರೀಮತಿ ಅಜೀತ್ ಕೌರ್

ಅವಿಭಜಿತ ಭಾರತದ ಲಾಹೋರಿನಲ್ಲಿರುವ ನವೆಂಬರ್ 16, 1934 ರೆಂದು ಜನನ. ದೇಶ ವಿಬಜನೆಯ ನಂತರ ದೆಹಲಿಯಲ್ಲಿ ನೆಲೆ. ಅರ್ಥಶಾಸ್ತ್ರ ಎಂ.ಎ. ಪದವೀಧರರಾದ ಅಜೀತ್ ಕೌರ್ ಅವರದು ಪಂಜಾಬಿ ಸಾಹಿತ್ಖ ಹಾಗು ಸಾಂಸ್ಕೃತಿಕ ಲೋಕದಲ್ಲಿ ಪ್ರಮುಖವಾದ ಹೆಸರು.

. ಸಾಮಾಜಿಕ ವಾಸ್ರವವಾದಿ ಬರಹಗಾತಿ೯ಯಾಗಿರುವ ಇವರು ಹಲವಾರು ಕಥೆ, ಕಾದೆಂಬರಿಗಳನ್ನು ಪ್ರಕಟಿಸಿದ್ದಾರೆ. . Gulbano, Mehak di maut, Butt Shikan ಮೊದಲಾದ 10 ಕಥಾ ಸಂಕಲನಗಳು Dhup wala shahr, Gauri, Post Mortem ಮೊದಲಾದ ಕಾದೆಂಬರಿಗಳಲ್ಲದೆ , ಅನುವಾದ, ಜೀವನ ಚರಿತ್ರೆ, ಪ್ರವಾಸಿ ಕಥನ ಮೊದಲಾದ ಪ್ರಕಾರಗಳಲ್ಲೂ ಸಾಕಷ್ಟು ಮಹತ್ಪದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಫೌಂಡೇಷನ್‌ ಆಫ್‌ ಸಾಕ್‌ ೯ ರೈಟರ್ಸ್‌ ಅಂಡ್‌ ಲಿಟರೇಚರ್‌ ಸಂಸ್ಥೆಯ ಅಧ್ಯಕ್ಷರಾಗಿ ಅಕಾಡೆಮಿ ಆಫ್‌ ಫೈನ್‌ ಆಟ೯ & ಲಿಟರೇಚರ್ ನ ಮುಖ್ಯಸ್ಥರಾಗಿ, ಇಂಡಿಯನ್‌ ಕೌನ್ಸಿಲ್‌ ಫಾರ್‌ ಪಾವಟಿ೯ ಅಲಿವಿಯೇಷನ್‌ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ , ಪದ್ಮ ಶ್ರೀ ಪುರಸ್ಕಾರ, ಭಾರತೀಯ ಭಾಷಾ ಪರಿಷತ್‌ ಬಹುಮಾನ, ಶಿರೋಮಣಿ ಸಾಹಿತ್ಯಾಕಾರ್‌ ಪ್ರಶಸ್ತಿ, ಬಾಬ ಬಲಿ ಪ್ರಶಸ್ತಿ ಗೌರವವಗಳು ದೊರೆತಿದೆ.

ಗುರು ಬಚನ್‌ ಸಿಂಗ್‌ ಭುಲ್ಲರ್

ಪಂಜಾಬಿನ ಅವಿಭಜಿತ ಭಟಿಂಡ ಜಿಲ್ಲೆ [ಇಂದಿನ ಮಾನ್ಸ ಜಿಲ್ಲೆ] ಫಿಥೋ ಗ್ರಾಮದಲ್ಲಿ ಮಾಚ೯ ೧೮ .೧೯೩೭ ರಂದು ಜನನ. ಇವರ ತಂದೆ ನಿವೃತ್ತ ಸೇನಾಧಿಕಾರಿ ಹಜುರ ಸಿಂಗ್‌. ಸ್ವತ: ಸಾಹಿತಿಯಾಗಿರುವ ಗುಬ೯ಚನ್‌ ಅವರಿಗೆ ಬಾಲ್ಯದಿಂದಲೇ ಸಾಹಿತ್ಯದ ನಂಟು. ಸೋವಿಯತ್‌ ರಷ್ಯಾದ ರಾಯಭಾರಿ ಕಛೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಗುಬ೯ಚನ್‌ ಸಿಂಗ್‌ ಅವರು ಪಂಜಾಬಿ ಕಥಾಸಾಹಿತ್ಯ ಲೋಕದಲ್ಲಿ ಮತ್ತು ಪತ್ರಿಕಾ
ರಂಗದಲ್ಲಿ ಅಚ್ಚಳಿಯದ ಹೆಸರು.

ಸಮಾಜವಾದಿ ಹಿನ್ನಲೆಯ ಕಥೆಗಾರರಾಗಿರುವ ಗುಬ೯ಚನ್ ಸಿಂಗ್‌, ಅವರ Agni-Kalas, Opra Mard, Vakhtan Maare, Janenee Janai ta, Main Gaznavi Nahin ಮೊದಲಾದವುಗಳು ಪ್ರಸಿದ್ದ ಕೃತಿಗಳು.ಪಂಜಾಬಿಯ ಟ್ರಿಬ್ಯೂನ್‌ ಪತ್ರಿಕೆಯ ಸಂಪಾದಕರಾಗಿಯೂ ಕಾಯ೯ ನಿವ೯ಹಿಸಿದ ಶ್ರೀಯುತರು ಸಂಪಾದಕೀಯಕ್ಕೂ ಸಾಹಿತ್ಯದ ಲೇಪನ ಹಚ್ಚಿದ್ದು ಪಂಜಾಬಿನಲ್ಲಿ ಮನೆ ಮಾತಾಗಿದ್ದಾರೆ.ವಿಷೇಷವಾಗಿ ಪ್ರಕಟವಾಗುತ್ತಿದ್ದ ಭಾನುವಾರದ ಸಂಪಾದಕೀಯ ಬರಹಗಳು ಸಾಹಿತ್ಯಕವಾಗಿ ಮುಖ್ಯವಾಗಿದ್ದು Qalam Kataar ಎಂಬ ಸಂಗ್ರಹದಲ್ಲಿ ಪ್ರಕಟವಾಗಿದೆ.

ಶ್ರೀಯುತರಿಗೆ ರಾಜ್ಯ ರಾಷ್ಟ್ರಮಟ್ಟದ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ದೊರೆತಿವೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಪುರಸ್ಕೃತರಾಗಿದಾರೆ. ಕನಾ೯ಟಕದ ಹಿರಿಯ ಸಂಶೋಧಕ ಡಾ. ಎಂ.ಎಂ ಕಲ್ಬುಗಿ೯ಯವರ ಹತ್ಯೆಯನ್ನು ಖಂಡಿಸಿ ಅಕ್ಟೋಬರ್‌ ೧೧ ೨೦೧೫ ರಂದು ಅಕಾಡೆಮಿ ಬಹುಮಾನವನ್ನು ಹಿಂದುರಿಗಿಸಿದ್ದಾರೆ.

error: Content is protected !!