ಕನ್ನಡ ಮತ್ತು ಸಂಸ್ಕೃತ ಅನುವಾದದ ಅನನ್ಯ ಸಾಧಕ ಕೆ.‌ ಕೃಷ್ಣಮೂರ್ತಿ’

ಶಂಕರಘಟ್ಟ, ಅ. 07: ಭಾರತೀಯ ಕಾವ್ಯ ಮೀಮಾಂಸೆಗೆ ಅಪಾರವಾದ ಕೊಡುಗೆಯನ್ನು ನೀಡಿದ ವಿದ್ವಾಂಸರಲ್ಲಿ ಕೆ.‌ ಕೃಷ್ಣಮೂರ್ತಿ ಅವರಿಗೆ ಅಗ್ರಸ್ಥಾನವಿದೆ.  ಅಪಾರವಾದ ಓದು ಮತ್ತು ಪರಿಶ್ರಮದ ಮೂಲಕ ವಿದ್ವತ್ತಿನ‌ ಸ್ಥಾನಕ್ಕೆ ಏರಿದವರು. ಕನ್ನಡ ಮತ್ತು ಸಂಸ್ಕೃತಗಳ ಅನುವಾದದಲ್ಲಿ ಅನನ್ಯ ಸಾಧನೆ ಮಾಡಿದವರು ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಎಸ್. ವೆಂಕಟೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಹಾಗೂ ಕೆ. ಕೃಷ್ಣಮೂರ್ತಿ ಜನ್ಮ ಶತಮಾನೋತ್ಸವ ಸಮಿತಿ ಸಹಯೋಗದೊಂದಿಗೆ ಶುಕ್ರವಾರ ಪ್ರೊ.‌ ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ “ಕೆ. ಕೃಷ್ಣಮೂರ್ತಿ
ಮೀಮಾಂಸಾ ಕೃತಿಗಳ ಸಮೀಕ್ಷೆ” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಕವಿರಾಜಮಾರ್ಗ’ದಂತಹಾ ಕೃತಿಯನ್ನು ಸರಳಗನ್ನಡದಲ್ಲಿ‌ ಅನುವಾದಿಸಿ, ವ್ಯಾಖ್ಯಾನಿಸಿ ಜನಸಾಮಾನ್ಯರಿಗೆ ತಲುಪಿಸಿದ‌ ಕೀರ್ತಿ ಇವರಿಗೆ ಸಲ್ಲಬೇಕು ಎಂದರು.

ಕನ್ನಡಭಾರತಿಯ ನಿರ್ದೇಶಕ ಡಾ. ಶಿವಾನಂದ ಕೆಳಗಿನಮನಿ ಮಾತನಾಡಿ, ಭಾರತದ ಹಿರಿಯ ವಿದ್ವಾಂಸರಲ್ಲಿ ಪಟ್ಟಿಯಲ್ಲಿ ಕೆ.‌ಕೃಷ್ಣಮೂರ್ತಿಯವರ ಹೆಸರು ಶಾಶ್ವತವಾಗಿರುತ್ತದೆ ಎಂದರು. ಡಾ. ಜಿ.‌ ಪ್ರಶಾಂತ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಉಪಸ್ಥಿತರಿದ್ದರು.
ಪುರುಷೋತ್ತಮ ಪ್ರಾರ್ಥಿಸಿ, ನವೀನ್ ಮಂಡಗದ್ದೆ ನಿರೂಪಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ಡಾ.ಹೆಚ್.ನಾಗರಾಜರಾವ್ ಅವರು ಕನ್ನಡ ಕಾವ್ಯ ತತ್ವದ ಬಗ್ಗೆ ಮಾತನಾಡಿದರು.ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಕವಿರಾಜಮಾರ್ಗ ಕೃತಿಯ ಬಗ್ಗೆ ಮಾತನಾಡಿದರು.‌ ಡಾ. ಕೆ. ಲೀಲಾ ಪ್ರಕಾಶ್ ಅವರು ಸೃಜನಶೀಲತೆ ಪಾಂಡಿತ್ಯ, ರುಚಿ ಕೃತಿಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ‌ಹಾಜರಿದ್ದರು

error: Content is protected !!