
ಭಾರತ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳ ಮಾರಾಟಕ್ಕೆ ಮಾರುಕಟ್ಟೆ ನಿರ್ಮಿಸಿಕೊಡುವ ಸಹಾಯ ಮಾಡುತ್ತಿದೆ. ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಕುಂಬಾರಿಕೆ ಕಸುಬನ್ನು ನಡೆಸಿಕೊಂಡು ಬರುತ್ತಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಸಹಕಾರ ಮತ್ತು ಮಾರುಕಟ್ಟೆ ನಿರ್ಮಿಸಿಕೊಡುವ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಸಾಲು ಸಾಲು ದೀಪಗಳಿಂದ ಅಲಂಕರಿಸಿ ಹಣತೆ ಹಚ್ಚಿ ಬೆಳಗುವ ದೀಪಾವಳಿ ಕರೊನಾ ಸಂಕಷ್ಟದ ನಂತರ ಈ ಬಾರಿ ಬದುಕಿಗೆ ಬೆಳಕು ಮೂಡಿಸುತ್ತಿದೆ. ಮಣ್ಣಿನ ಹಣತೆಯಲ್ಲಿ ಇವರು ತಯಾರಿಸುವ ವಿವಿಧ ಕಲಾಕೃತಿಗಳು ನಗರದ ಜನರನ್ನು ಆಕರ್ಷಿಸುತ್ತಿವೆ. ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ಕಲಾಕೃತಿ ರಚಿಸುವ ಕಸುಬುದಾರರಿಗೆ, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಸಹಕಾರ ನೀಡಿ ಬೆನ್ನೆಲುಬಲಾಗಿ ನಿಂತಿರುವುದು ಬದುಕಿಗೆ ಬೆಳಕಾಗುತ್ತಿದೆ.
ಸುನೀತಾ, ಸಂಯೋಜಕಿ, ಹಾರನಹಳ್ಳಿ
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವತಿಯಿಂದ ಮಹಿಳಾ ಸ್ವಸಹಾಯ ಗುಂಪುಗಳಿಗೆ ದೀಪಾವಳಿ ಪ್ರಯುಕ್ತ ಮಣ್ಣಿನಲ್ಲಿ ನಿರ್ಮಿಸಿದ ಹಣತೆ ಮತ್ತು ವಿವಿಧ ಕಲಾಕೃತಿಗಳನ್ನು ಮಾರಾಟ ಮಾಡಲು ಮಳಿಗೆ ಮತ್ತು ಇತರೆ ಸಹಕಾರವನ್ನು ನೀಡಲಾಗುತ್ತಿದೆ. ಇದು ಅವರ ಕಾಯಕಕ್ಕೆ ಪ್ರೋತ್ಸಾಹಿಸಿದೆ ಎಂದು ಹೇಳಿದರು.
ಮಂಗಳಾ, ಮಹಿಳಾ ಕುಶಲಕರ್ನಾವು ಮಣ್ಣಿನ ದೀಪಗಳಲ್ಲಿ ವಿವಿಧ ಕಲಾಕೃತಿಗಳನ್ನು ನಿರ್ಮಾಣ ಮಾಡುತ್ತೇವೆ. ಕರೊನಾದಿಂದ ಸಂಕಷ್ಟ ಎದುರಾಗಿತ್ತು. ದೀಪ ಸಂಜೀವಿನಿ ನಮಗೆ ವರದಾನವಾಗಿದೆ ಎಂದು ತಿಳಿಸಿದರು.
ಜ್ಯೋತಿ, ಕಲಾಕಾರರು ನಮ್ಮ ಪ್ರದೇಶದಲ್ಲಿ ತಲಾತಲಾಂತರಿಂದ ಮಣ್ಣಿನಲ್ಲಿ ಕಲಾಕೃತಿ ಮಾಡುವ ಕಸುಬನ್ನು ಮಾಡಿಕೊಂಡು ಬಂದಿದ್ದೇವೆ. ಜಿಲ್ಲಾ ಪಂಚಾಯಿತಿ ಸರ್ಕಾರದ ವತಿಯಿಂದ ನಮಗೆ ನೀಡಿರುವ ಸಹಕಾರ ಹೆಚ್ಚು ಪೂರಕವಾಗಿದೆ ಎಂದರು.
ಓಂಕಾರಮ್ಮ, ಯಾವುದೇ ಯಂತ್ರದ ಸಹಾಯವಿಲ್ಲದೇ ಕೈಯಲ್ಲಿಯೇ ನಾವು ಕಲಾಕೃತಿಗಳನ್ನು ತಯಾರಿಸುತ್ತೇವೆ. ಸರ್ಕಾರದ ಸಹಕಾರ ದೀಪಾವಳಿಯ ಸಂದರ್ಭದಲ್ಲಿ ನಮ್ಮ ಕಸುಬುದಾರರಿಗೆ ಪುನಶ್ಚೇತನ ನೀಡಿದೆ ಎಂದು ತಿಳಿಸದರು.