ಶಿವಮೊಗ್ಗ, ಸೆಪ್ಟೆಂಬರ್ 15:ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಪ್ರವರ್ಗ-3 ರಡಿ 2(ಎ) ಯಿಂದ (ಎಫ್) ವರೆಗೆ ಬರುವ ಮರಾತ, ಮರಾಠ, ಅರೆಕ್ಷತ್ರಿ, ಅರೆ ಮರಾಠ, ಆರ್ಯಮರಾಠ, ಆರ್ಯ, ಆರ್ಯರು, ಕೊಂಕಣ ಮರಾಠ, ಕ್ಷತ್ರಿಯ ಮರಾತ/ಕ್ಷತ್ರಿ ಮರಾಠ, ಕುಳವಾಡಿ ಜನರ ಶೈಕ್ಷಣಿಕ ಮತ್ತು ಆರ್ಥಿಕಾಭಿವೃದ್ದಿಗಾಗಿ 2022-23 ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜೀಬಾವು-ಜಲ ಭಾಗ್ಯ ಯೋಜನೆ(ಗಂಗಾ ಕಲ್ಯಾಣ ನೀರಾವರಿ ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ ಪಂಪ್‍ಸೆಟ್ ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಮಲೆನಾಡು ಪ್ರದೇಶಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚದಲ್ಲಿ ತೆರೆದ ಬಾವಿಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಪಡೆಯಲು ರೈತರ ವಯಸ್ಸು 18 ರಿಂದ 60 ವರ್ಷದೊಳಗಿದ್ದು ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಟ 1 ಎಕರೆ ಜಮೀನು ಹೊಂದಿರಬೇಕು. ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಹೊಂದಿರಬಾರದು. ವಾರ್ಷಿಕ ವರಮಾನ ರೂ.98,000/- ಮೀರಿರಬಾರದು.
ಅರಿವು ಶೈಕ್ಷಣಿಕ ಸಾಲ ಯೋಜನೆ(ಹೊಸತು)ಯಡಿ ನಿಗಮದಿಂದ 2022-23 ನೇ ಸಾಲಿನಲ್ಲಿ ಸರ್ಕಾರಿ ಕಾಲೇಜು/ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನರಹಿತ, ಖಾಸಗಿ ಕಾಲೇಜುಗಳಲ್ಲಿ ವೃತ್ತಿಪರ/ತಾಂತ್ರಿಕ/ಉನ್ನತ ವ್ಯಾಸಂಗದ ಕೋರ್ಸ್‍ಗಳಲ್ಲಿ ಸಿಇಟಿ ಮೂಲಕ ಆಯ್ಕೆಯಾದ 18 ರಿಂದ 35 ವರ್ಷದೊಳಗಿನ, ವಾರ್ಷಿಕ ವರಮಾನ ರೂ.3.50 ಲಕ್ಷಗಳಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ರಾಜಶ್ರೀ ಶಾಹು ಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿರಹಿತ ಸಾಲ ಯೋಜನೆಯಡಿ 2022-23 ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಇಂಜಿನಿಯರಿಂಗ್ & ಟೆಕ್ನಾಲಜಿ, ಮ್ಯಾನೇಜ್‍ಮೆಂಟ್ & ಕಾಮರ್ಸ್, ಸೈನ್ಸ್ & ಟೆಕ್ನಾಲಜಿ, ಅಗ್ರಿಕಲ್ಚರ್ & ಅಲೈಡ್ ಸೈನ್ಸಸ್/ಟೆಕ್ನಾಲಜಿ, ಮೆಡಿಸಿನ್ ಮತ್ತು ಹ್ಯುಮ್ಯಾನಿಟೀಸ್ & ಸೋಷಿಯಲ್ ಸೈನ್ಸಸ್ ಈ 6 ಕೋರ್ಸ್‍ಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ಒದಗಿಸಲಾಗುವುದು. 18 ರಿಂದ 35 ವರ್ಷದೊಳಗಿನ ವಾರ್ಷಿಕ ವರಮಾನ ರೂ.7.50 ಇರುವವರಿಗೆ ಎರಡು ವರ್ಷಗಳ ಅವಧಿಗೆ ಗರಿಷ್ಟ ರೂ.15.00 ಲಕ್ಷ ಸಾಲ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಮೇಲ್ಕಂಡ ಎಲ್ಲ ಯೋಜನೆಗಳಿಗೆ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾಕೇಂದ್ರಗಳಲ್ಲಿ ಆನ್‍ಲೈ ಮೂಲಕ ಅಕ್ಟೋಬರ್ 21 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ನಿಗಮ, ಭಾಗ್ಯ ನಿಲಯ, 1ನೇ ತಿರುವು, ಗಾಂಧಿನಗರ, ಶಿವಮೊಗ್ಗ, ದೂ.ಸಂ: 08182-229634 ನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

error: Content is protected !!