ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲ್ಲಿ ಇಂದು ಬೆಳಿಗ್ಗೆ ಕರೋನ ಬೂಸ್ಟರ್ ಡೋಸ್ ಉಚಿತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿವಮೊಗ್ಗ ಆರೋಗ್ಯ ಇಲಾಖೆಯ ಆರ್.ಸಿ.ಹೆಚ್. ಅಧಿಕಾರಿಗಳಾದ, ಡಾ. ನಾಗರಾಜ್ ನಾಯ್ಕ, ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ೨೦೧೯ರಲ್ಲಿ ನಮ್ಮ ದೇಶಕ್ಕೆ ಬಂದ ಕರೋನ ವೈರಸ್ ಮಾರಣಾಂತಿಕ ಹಂತ ತಲುಪಿ ಅನೇಕ ಕುಟುಂಬಗಳು ಕಣ್ಣೀರಿನ ಜೋತೆಗೆ ವ್ಯಕ್ತಿಯನ್ನು ನೋಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಧಾನ ಮಂತ್ರಿಗಳ ಆಶಯ ಹಾಗೂ ದೇಶದ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ವ್ಯಾಕ್ಸಿನೇಷನ್ ಮೂಲಕ ಜನರು ನಿಟ್ಟುಸಿರು ಬಿಡುವಂತಾಯಿತು ಎಂದು ನುಡಿದು ಕಡ್ಡಾಯವಾಗಿ ೧೫ ವರ್ಷ ವಯಸ್ಸಿನ ನಂತರದವರು ಹಾಕಿಸುವುದು ಮುಂದಾಗು ಅಘಾತದಿಂದ ಮುಕ್ತರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ವಹಿಸಿ ಮಾತನಾಡಿ ಕರೋನ ವೈರಸ್ ಈಗಾಗಲೆ ೪ ಹಂತಗಳನ್ನು ತಲುಪಿದೆ. ಬೂಸ್ಟರ್ ಡೋಸ್ ತೆಗೆದುಕೊಳ್ಳುವುದರಿಂದ ರೋಗನಿರೋದಕ ಶಕ್ತಿಗೆ ಹೆಚ್ಚಿನ ಸಹಾಯವಾಗುತ್ತದೆ ಶಿವಮೊಗ್ಗ ನಗರದಲ್ಲಿ ಸುಮಾರು ೧೦ ಪಾಸಿಟೀವ್ ಕೇಸ್ಗಳು ಇರುವುದಾಗಿ ತಿಳಿಸಿ ಬೂಸ್ಟರ್ ಡೋಸ್ ತೆಗೆದುಕೊಂಡು ಸದೃಡರಾಗಿರಲು ಸದಸರಲ್ಲಿ ತಿಳಿಸಿದರು. ಈ ಮೇಳದಲ್ಲಿ ಕೈಗಾರಿಕಾ ಸಂಘದ ಸದಸ್ಯರು, ಸಂಯೋಜಿತ ಸಂಘಗಳ ಸದಸ್ಯರು, ಕುಟುಂಬದ ಸದಸ್ಯರುಗಳು, ಸಿಬ್ಭಂದಿ ವರ್ಗದವರು ಹಾಕಿಸಿಕೊಳ್ಳಲು ಮನವಿ ಮಾಡಿದರು. ಇಂತಹ ಉತ್ತಮ ಕಾರ್ಯಕ್ರಮವನ್ನು ಆಯೋಜಿಸಿದ ಗಣೇಶ್ ಎಂ. ಅಂಗಡಿ, ನಿರ್ದೇಶಕರಿಗೆ ವಂದನೆಗಳನ್ನು ತಿಳಿಸಿದರು.
ಡಾ. ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಇಡೀ ದೇಶದಲ್ಲಿ ಪ್ರಧಾನ ಮಂತ್ರಿಗಳಿAದ ಹಿಡಿದು ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳ ಶ್ರಮದಿಂದ ವ್ಯಾಕ್ಸಿನ್ ಮುಖಾಂತರ ದೇಶದ ಎಲ್ಲಾ ಜನರಲ್ಲಿ ಕೊರೋನಗಿಂತ ಮುಂಚೆ ಇದ್ದ ಯತಾಸ್ಥಿತಿಗೆ ಬರುವಂತೆ ಪ್ರಯತ್ನಪಟ್ಟರು ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಖಜಾಂಚಿಯವರಾದ ಮಧುಸೂದನ ಐತಾಳ್, ನಿರ್ದೇಶಕರುಗಳಾದ ಎಂ. ರಾಜು, ಇ. ಪರಮೇಶ್ವರ್, ಪ್ರದೀಪ್ ವಿ. ಎಲಿ, ರಮೇಶ್ ಹೆಗಡೆ, ಮಾಜಿ ಅಧ್ಯಕ್ಷರಾದ ಡಿ.ಎಂ. ಶಂಕರಪ್ಪ, ವಿತರಕರ ಸಂಘದ ಅಧ್ಯಕ್ಷರಾದ ಶಿವರಾಜ್ ಉದುಗಣಿ, ಆರೋಗ್ಯ ಇಲಾಖೆಯ ಡಾ. ಉಮಾ, ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ದಿ ಸಮಿತಿ ಚರ್ಮನ್ ಗಣೇಶ್ ಎಂ. ಅಂಗಡಿಯವರ ನಿರೂಪಣೆ, ಜಂಟಿ ಕಾರ್ಯದರ್ಶಿ ಜಿ. ವಿಜಯಕುಮಾರ್ರವರ ಸ್ವಾಗತ, ಉಪಾಧ್ಯಕ್ಷರಾದ ಬಿ. ಗೋಪಿನಾಥ್ರವರ ವಂದನೆಯೊAದಿಗೆ ಕಾರ್ಯಕ್ರಮ ಮುಕ್ತಾಯವಾಯಿತು,
.