ಮೂಲ ಜನ ಸಮುದಾಯ ಪ್ರದೇಶದಲ್ಲಿ ನಿಭಿಡತೆಯನ್ನು ಕಡಿಮೆಗೊಳಿಸುವುದು ಶಿವಮೊಗ್ಗ ಸ್ಮಾರ್ಟ ಸಿಟಿಯ ಪ್ರಮುಖ ಉದ್ದೇಶ

ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ನಗರಗಳಲ್ಲಿ ಮೂಲ ಸೌಕರ್ಯಗಳಿಗೆ ಒತ್ತು ನೀಡಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಚಾಲಿತ ಸೇವೆಯನ್ನು ಸುಧಾರಿಸುವ ಮೂಲಕ ಭಾರತದಲ್ಲಿ ನೂರು ಸ್ಮಾರ್ಟ್ ಸಿಟಿಯಾಗಿ ನಗರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅಂತಹದರಲ್ಲಿ ಮಲೆನಾಡಿನ ಸೆರಗಿನ ಶಿವಮೊಗ್ಗ ನಗರವು ಒಂದು.


ಈ ಮಹಾ ಸ್ಮಾರ್ಟ ಸಿಟಿ ಯೋಜನೆಯಿಂದ ಶಿವಮೊಗ್ಗ ನಗರಕ್ಕೆ ಜೀವಕಳೆ ನೀಡುವ ಪ್ರಯತ್ನ ಆರಂಭಗೊಂಡಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯು ಕೇಂದ್ರ ಸರ್ಕಾರದ 500 ಕೋಟಿ ರೂ. ವಂತಿಗೆ ಹಾಗೂ ರಾಜ್ಯ ಸರ್ಕಾರದ 500 ಕೋಟಿ ರೂ. ವಂತಿಗೆ ಹೊಂದಿರುತ್ತದೆ. ಯೋಜನೆಯಡಿ 110 ಕೀಮಿ ಒಟ್ಟು ಉದ್ದದ ಸ್ಮಾರ್ಟ್ ಸಿಟಿಯ ರಸ್ತೆಗಳು ನಿರ್ಮಾಣಗೊಳ್ಳುತ್ತಿದ್ದು, ಮುಕ್ತಾಯದ ಹಂತ ತಲುಪುತ್ತಿದೆ. ರಸ್ತೆಯ ಒಳಭಾಗದಲ್ಲಿ ನೀರು ಪೂರೈಕೆ, ವಿದ್ಯುತ್ ತಂತಿ ಕೇಬಲ್ ಅಳವಡಿಕೆ, ಟೆಲಿಫೋನ್ ಕೇಬಲ್ ಅಳವಡಿಕೆ, ಅಂತರ್ಜಾಲ ಕೇಬಲ್ ಅಳವಡಿಕೆ, ಒಳಚರಂಡಿ ಹಾಗು ಇನ್ನತರ ಎಲ್ಲವನ್ನು ರಸ್ತೆಯ ಮೇಲ್ಪದರಗಳಲ್ಲಿ ಏನು ಕಾಣದಂತೆ ನಿಯೋಜಿಸಲಾಗಿದೆ. ಇದರಿಂದ ಯಾವ ಕಾಲದಲ್ಲಿಯು ವಿದ್ಯುತ್ ಸಮಸ್ಯೆ ಆಗದಂತೆ ಯೋಜನೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ನೆಲದ ಅಂತರಾಳದಲ್ಲಿಯೇ ಎಲ್ಲ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.


532.62 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ ಮುನ್ನಡೆದಿದೆ. ಜತೆಯಲ್ಲಿ ವ್ಯವಸ್ಥಿತವಾದ ಪಾದಚಾರಿಗಳ ರಸ್ತೆ, ರಸ್ತೆಯ ಸುರಕ್ಷತೆ, ಭದ್ರತೆ ಎಲ್ಲದಕ್ಕೂ ಆಧುನಿಕ ತಂತ್ರಜ್ಞಾನದ ಲೇಪ ಅಳವಡಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಕುರಿತಂತೆ ಅದರ ವಿಶೇಷತೆಗಳನ್ನು ಜನಸಮುದಾಯಕ್ಕೆ ಪರಿಚಯಿಸುವ ಕೆಲಸವನ್ನು ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳು ನಡೆಸುತ್ತಿದ್ದಾರೆ.

ಚಿದಾನಂದ ವಟಾರೆ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರು ಹಾಗು ವ್ಯವಸ್ಥಾಪಕ ನಿರ್ದೇಶಕರು, ಶಿವಮೊಗ್ಗ ಸ್ಮಾರ್ಟ್ ಸಿಟಿ ನಮ್ಮೊಂದಿಗೆ ಪ್ರತಿಕ್ರಿಯಿಸಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಮುಖಾಂತರ ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಸೇವಾದಾರಿಗಳು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಲಾಗಿದೆ. ಪಾರಾಂಪರಿಕ ನಡಿಗೆ ದಾರಿಗೆ ಒತ್ತು ನೀಡಲಾಗಿದೆ. 110 ಕೀಮಿ ಉದ್ದದ ರಸ್ತೆಗಳನ್ನು ಒಂಬತ್ತು ಪ್ಯಾಕೇಜ್‍ಗಳಾಗಿ ವಿಂಗಡಿಸಿ ಅನುಷ್ಠಾನ ಮಾಡಲಾಗುತ್ತಿದ್ದು, ಮುಕ್ತಾಯ ಹಂತದಲ್ಲಿದೆ.ಇದನ್ನು ಹೊರತು ಪಡಿಸಿಯೂ ಒಳವರ್ತುಲ ರಸ್ತೆಯನ್ನು ಫೂರ್ಣವಾಗಿ ಸಂಪರ್ಕಿಸುವಂತೆ ಉಪಮಾರ್ಗಗಳೂ ಸೇರಿದಂತೆ ಅಚಿತಿಮ ಮೈಲಿಯ ಸಂಪರ್ಕವನ್ನು ಸಹಾ ಗ್ರಹಿಸಿ ಯೋಜನೆ ಉತ್ತಮ ಪ್ರಗತಿಯಲ್ಲಿದೆ ಎಂದು ಹೇಳಿದರು.

ರುದ್ರಾಂಬೆ, ಶಿವಮೊಗ್ಗ ನಗರವಾಸಿ ಸಂತಸ ಹಂಚಿಕೊಂಡು ನಮ್ಮ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ಚರಂಡಿಗಳು ಹಂದಿಗಳು, ಹೆಗ್ಗಣಗಳ ಆವಾಸ್ಥಾನವಾಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಈಗ ಉತ್ತಮ ರಸ್ತೆಗಳು ಆಗಿದ್ದು, ಅತ್ತ್ಯುತ್ತಮ ವ್ಯವಸ್ಥೆಯಿಂದ ಕೂಡಿರುವುದು ಸಂತಸ ತಂದಿದೆ.ಎಂದು ಹೇಳಿದರು.

ರವಿಕುಮಾರ್, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿವಮೊಗ್ಗ ನಮ್ಮೊಂದಿಗೆ ಮಾತನಾಡಿ ಈ ಹಿಂದೆ ರಸ್ತೆ ವ್ಯವಸ್ಥೆ ಬಹಳ ಚಿಕ್ಕದಾಗಿದ್ದು. ಸ್ಮಾರ್ಟ್ ಸಿಟಿ ಯೋಜನೆ ಬಂದ ನಂತರ ಎಲ್ಲ ಬಡಾವಣೆಗಳಲ್ಲಿಯು ಅಗಲವಾದ ಹಾಗು ಉತ್ತಮ ರಸ್ತೆಗಳ ನಿರ್ಮಾಣ ಆಗುತ್ತಿದೆ. ಇದೀಗ ನಮ್ಮ ಬಡಾವಣೆಯಲ್ಲಿ ರಸ್ತೆಗಳ ನಿರ್ಮಾಣ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತಹ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳು ಅಗಲವಾದ ಕಾರಣ ನಾವು ವಾಸ ಮಾಡುವ ಪ್ರದೇಸಗಳಿಗೆ ಹೆಚ್ಚು ಮೆರಗು ಬಂದಿದೆ ಎಂದು ತಿಳಿಸಿದರು
ಉಮಾ, ಗೃಹಿಣಿ, ಶಿವಮೊಗ್ಗ ಸಂತಸ ಹಂಚಿಕೊಂಡು ಸ್ಮಾರ್ಟ್ ಸಿಟಿ ಯೋಜನೆ ಶಿವಮೊಗ್ಗ ನಗರದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ನಗರದ ರಸ್ತೆಗಳು ಹಾಗು ಡ್ರೈನೇಜ್ ವ್ಯವಸ್ಥೆ ಗುಣಮಟ್ಟದಿಂದ ಕೂಡಿದ್ದು ಎಲ್ಲ ಕೆಲಸಗಳು ಉತ್ತಮವಾಗಿ ಸಾಗುತ್ತಿವೆ. ಇದೇ ರೀತಿಯಲ್ಲಿ ಎಲ್ಲ ಕೆಲಸಗಳು ಪೂರ್ಣಗೊಂಡರೆ ಶಿವಮೊಗ್ಗ ಸುಂದರ ನಗರವಾಗಿ ರೂಪುಗೊಳ್ಳುತ್ತದೆ. ಎಂದು ತಿಳಿಸದರು.

ಮಹೇಶ್ ಕಾಮತ್ ಸ್ಥಳೀಯರು ಮಾತನಾಡಿ ಭಾರತ ಸರ್ಕಾರ ಶಿವಮೊಗ್ಗ ನಗರವನ್ನು ಕೂಡ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಸೇರ್ಪಡೆಗೊಳಿಸಿದೆ. ಇಲ್ಲಿ ನಿರ್ಮಾಣವಾಗುತ್ತಿರುವ ಗುಣಮಟ್ಟದ ರಸ್ತೆ, ಪಾದಾಚಾರಿಗಳ ಓಡಾಟ, ಪಾರ್ಕ್ ಎಲ್ಲವು ನಗರವನ್ನು ಸುಂದರಗೊಳಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಎಂದು ತಿಳಿದರು

error: Content is protected !!