ಶಿವಮೊಗ್ಗ, ಏಪ್ರಿಲ್ 10, : ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರಲ್ಲಿ 126568 ಪುರುಷ, 132334 ಮಹಿಳೆ ಮತ್ತು 14 ತೃತೀಯ ಲಿಂಗಿ ಸೇರಿದಂತೆ ಒಟ್ಟು 258916 ಮತದಾರರಿದ್ದಾರೆ. ದಿನಾಂಕ: 13-04-2023 ರಿಂದ ನಾಮಪತ್ರಗಳನ್ನು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಎನ್.ಚಂದ್ರಕುಮಾರ್ ತಿಳಿಸಿದರು.
ಇಂದು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯಲ್ಲಿ ಅವರು ಮಾಹಿತಿ ನೀಡಿ, 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ದಿನಾಂಕ 13-04-2023 (ಗುರುವಾರ)ರಂದು ಹೊರಡಿಸಲಾಗುತ್ತದೆ. ದಿನಾಂಕ 13-04-2023 ರಿಂದ 20-04-2023 ರವರೆಗೆ ನಿಯಮಾನುಸಾರ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು.
ಹೆಚ್ಚುವರಿ ಮತದಾನ ಕೇಂದ್ರಗಳು :113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 286 ಮತದಾನ ಕೇಂದ್ರಗಳಿದ್ದು, 8 ಹೆಚ್ಚುವರಿ ಮತದಾನ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆಯೋಗದಿಂದ ಅನುಮತಿ ದೊರೆತ ನಂತರದಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತದೆ.
ಮತದಾರರ ಪಟ್ಟಿ: ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ: 05-01-2023 ರಂದು ಪ್ರಕಟಿಸಲಾಗಿರುತ್ತದೆ. ಹಾಗೂ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಷ್ಟ್ರದ ಮತ್ತು ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ನಿರ್ದೇಶನುಸಾರ ನೀಡಲಾಗಿದೆ. ದಿನಾಂಕ: 05-01-2023 ರಿಂದ ಈ ತಹಲ್ ವರೆಗೆ ಸೇರ್ಪಡೆಯಾದ ಮತದಾರರ ಪಟ್ಟಿಯ ಪೂರಕ ಪಟ್ಟಿಗಳನ್ನು ಭಾರತ ಚುನಾವಣೆ ಆಯೋಗದ ನಿರ್ದೇಶನುಸಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

ಮತದಾರರಿಗೆ ಗುರುತಿನ ಚೀಟಿ ವಿತರಣೆ: ದಿನಾಂಕ 05-01-2022ರ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರದಲ್ಲಿ ಹೊಸದಾಗಿ ಸೇರ್ಪಡೆಯಾದ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಸುಮಾರು 10,090 ಮತದಾರರ ಗುರುತಿನ ಚೀಟಿಗಳನ್ನು ಸ್ಪೀಡ್ ಪೊಸ್ಟ್ ಮೂಲಕ ಮತದಾರರಿಗೆ ರವಾನಿಸಿದೆ.
ಮತದಾರರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ದಿನಾಂಕ: 11-04-2023 ಅಂತಿಮ ದಿನವಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಮತಗಟ್ಟೆ ಏಜೆಂಟರುಗಳ ಪಟ್ಟಿ: ಭಾರತೀಯ ಜನತಾ ಪಾರ್ಟಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಿದ್ದಾರೆ. ಜನತಾದಳ ಜಾತ್ಯಾತೀತ ಪಕ್ಷದವರು ಮತಗಟ್ಟೆ ಏಜೆಂಟರುಗಳ ಪಟ್ಟಿಯನ್ನು ನೀಡಬೇಕಾಗಿದೆ.
ಮಾದರಿ ನೀತಿ ಸಂಹಿತೆ: ಭಾರತ ಚುನಾವಣಾ ಆಯೋಗ ನವದೆಹಲಿ ಇವರ ದಿನಾಂಕ: 29-03-2023 ರ ಪತ್ರಿಕಾ ಪ್ರಕಟಣೆಯಂತೆ ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿರುತ್ತದೆ ಹಾಗೂ ದಿನಾಂಕ: 13-05-202 ರ ವರೆಗೆ ಜಾರಿಯಲ್ಲಿರುತ್ತದೆ. ಕೆ.ವಿ ನಾಗರಾಜ್ ರವರು 110-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮಾದರಿನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿರುತ್ತಾರೆ ಮೊ. 944804743 10.
ಅಂಚೆ ಮತಪತ್ರ ವಿತರಣೆ: 80 ವರ್ಷ ವಯೋಮಾನ ಮೀರಿದವರು, ವಿಕಲಚೇತನರು ಮತ್ತು ಕೋಡ್ 19 ಬಾಧಿತ ಮತದಾರರಿಗೆ ಅಂಚೆ ಮೂಲಕ ಮತದಾನ ಮಾಡಲು ಭಾರತ ಚುನಾವಣಾ ಆಯೋಗವು ಅವಕಾಶವನ್ನು ಕಲ್ಪಿಸಿದೆ. ಸದರಿ ವ್ಯಕ್ತಿಗಳು ಮತದಾನ ಮಾಡುವ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವೀಕ್ಷಿಸಲು ಅವಕಾಶವಿದೆ.
ವಿದ್ಯುನ್ಮಾನ ಮತ ಯಂತ್ರಗಳು: 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾಧಿಕಾರಿಗಳು ಬ್ಯಾಲೆಟ್ ಯುನಿಟ್-339, ಕಂಟ್ರೋಲ್ ಯುನಿಟ್-339, ವಿವಿಪ್ಯಾಟ್-067 ಸರಬರಾಜು ಮಾಡಿದ್ದು ಸುರಕ್ಷಿತೆಗಾಗಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಭದ್ರತಾ ಕೊಠಡಿಯನ್ನು ನಿರ್ಮಿಸಿ ಭದ್ರತಾ ಕೊಠಡಿಯಲ್ಲಿ ಇರಿಸಿ ಪೆÇಲೀಸ್ ವಶಕ್ಕೆ ನೀಡಲಾಗಿದೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮತ್ತೂರ್ ರಸ್ತೆ, ಶಿವಮೊಗ್ಗ ಇಲ್ಲಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 09-05-2022 ರಂದು ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ದಿನಾಂಕ: 10- 05-2022 ರಂದು ನಿರ್ವಹಿಸಲಾಗುತ್ತದೆ. (ಮುಕ್ತಾಯವಾಗುವವರೆಗೆ) ಹಾಗೂ ನಂತರದಲ್ಲಿ ಜಿಲ್ಲಾ ಭದ್ರತಾ ಕೊಠಡಿಗೆ ರವಾನಿಸಲಾಗುತ್ತದೆ.
ಸಹಾಯವಾಣಿ: ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತ ಸಹಾಯವಾಣಿಯು 24*7 ಕಾರ್ಯನಿರ್ವಹಿಸುತ್ತಿದೆ, ಟೋಲ್‍ಫ್ರೀ ದೂರವಾಣಿ ಸಂಖ್ಯೆ: 1800-4257677 ಗೆ ಸಾರ್ವಜನಿಕರು, ಮತದಾರರು ಚುನಾವಣೆಗೆ ಸಂಬಂಧಿಸಿದ ಮಾದರಿ ನೀತಿ ಸಂಹಿತೆಯ ಅಥವಾ ಯಾವುದೇ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್‍ನ್ನು ವಿತರಿಸುತ್ತಾರೆ.
ಡಿವೈಎಸ್‍ಪಿ ಬಾಲರಾಜ್ ಮಾತನಾಡಿ, ನಾಮಪತ್ರ ಸಲ್ಲಿಕೆ ಆರಂಭ ದಿನಾಂಕದಿಂದ ಅಂತಿಮ ದಿನದವರೆಗೆ ಪಾಲಿಕೆ ಹಿಂದಿನ ಗೇಟ್‍ನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗುವುದು, ಪಾಲಿಕೆಯ ಇನ್ನೊಂದು ಗೇಟ್‍ನಿಂದ ಪ್ರವೇಶಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್ ಇದ್ದರು.

error: Content is protected !!