ಮನೆ ಮನೆ ಮಾಹಿತಿ ಅಭಿಯಾನ
ಮಾರಕ ಏಡ್ಸ್ ರೋಗದ ಬಗ್ಗೆ ಶಿವಮೊಗ್ಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ದಿನಗಳ ಕಾಲ ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ರಾಜೇಶ್ ಸುರಗಿಹಳ್ಳಿ ಜಿಲ್ಲಾ ಆರೋಗ್ಯ ಅಧಿಕಾರಿ ಶಿವಮೊಗ್ಗ ಪ್ರತಿಕ್ರಿಯಿಸಿ ಜಿಲ್ಲಾದ್ಯಂತ ಜಾಗೃತಿ ಮೂಡಿಸುವ ಅಭಿಯಾನವನ್ನು ಆಯೋಜಿಸಿದ್ದು ಜನಸಾಮಾನ್ಯರಿಗೆ ಹೆಚ್‍ಐವಿ ಏಡ್ಸ್ ನಿಯಂತ್ರಣ, ಕಳಂಕ ಮತ್ತು ತಾರತಮ್ಯ, ಸಾಮಾಜಿಕ ಸೌಲತ್ತುಗಳು ಹಾಗೂ ಹೆಚ್‍ಐವಿ ಏಡ್ಸ್ ಕಾಯ್ದೆ-2017 ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಇದರಿಂದ ಇತ್ತೀಚಿನ ವರ್ಷಗಳಲ್ಲಿ ಹೆಚ್‍ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಹೆಚ್‍ಐವಿ ಸೋಂಕನ್ನು ಸೊನ್ನೆಗೆ ತರುವ ಸಲುವಾಗಿ ಜಾನಪದ ಕಲೆಗಳ ಮೂಲಕ ಕಲಾವಿದರು ಜನರಲ್ಲಿ ಮಾರಕ ಏಡ್ಸ್ ರೋಗ ದಿಂದ ದೂರ ಇರುವುದು ಹೇಗೆ ಎನ್ನುವುದನ್ನು ತಮ್ಮ ಕಲೆಯ ಮೂಲಕ ಅನಾವರಣ ಗೊಳಿಸುತ್ತಿದ್ದಾರೆ
ಭೂಮೇಶ್ ಜಾನಪದ ಕಲಾವಿದ ಮಾತನಾಡಿ ಜಿಲ್ಲೆಯಾದ್ಯಂತ ನಾವು ವೀರಗಾಸೆ ಮೂಲಕ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಜನರಿಗೆ ಕಲೆಯ ಮೂಲಕ ಅರಿವು ಮೂಡಿಸುತ್ತಿದೆ ಎಂದು ತಿಳಿಸಿದರು.
ಬಸ್ ನಿಲ್ದಾಣ ರೈಲ್ವೆ ನಿಲ್ದಾಣ ಮುಂತಾದ ಕಡೆಗಳಲ್ಲಿ ಜಾನಪದ ಕಲಾವಿದರು ತಮ್ಮ ಕಲೆಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದ್ದರು