ಶೀವಮೊಗ್ಗ, ಮೇ.8 : ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯು ಜೂನ್ 21 ರಿಂದ ಜೂನ್ 28ರವರೆಗೆ ನಡೆಯಲಿದ್ದು, ಪೂರಕ ಪರೀಕ್ಷೆ ಕಟ್ಟಲು ಮೇ 10 ಕೊನೆಯ ದಿನಾಂಕ. ದಂಡ ಶುಲ್ಕ ರೂ.200/-ರೊಂದಿಗೆ ಪರೀಕ್ಷೆ ಕಟ್ಟಲು ಮೇ 15 ಕೊನೆಯ ದಿನಾಂಕವಾಗಿದೆ. ಅನುತ್ತೀರ್ಣರಾಗಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರು ಸಹ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಮೇ 2 ರಿಂದ 13ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ಮರು ಮೌಲ್ಯಮಾಪನಕ್ಕೆ ಮೇ 6 ರಿಂದ 17ರವರೆಗೆ ಅವಕಾಶವಿದೆ. ಒಂದು ವಿಷಯದ ಛಾಯಾ ಪ್ರತಿಗೆ 405/-ರೂ ಶುಲ್ಕ ನಿಗಧಿಪಡಿಸಲಾಗಿದೆ. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಒಂದು ವಿಷಯಕ್ಕೆ 805/-ರೂಗಳ ಶುಲ್ಕ ನಿಗಧಿಪಡಿಸಲಾಗಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುವುದು ಹಾಗೂ ಅರ್ಜಿದಾರರ ಮೊಬೈಲ್‍ಗೆ ಕಳುಹಿಸಲಾಗುವುದು. ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳು www.kseeb.kar.nic.in ಈ ವೆಬ್ಸೈಟ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಂಡಿರದೆ ಇದ್ದಲ್ಲಿ ಹತ್ತು ದಿನಗಳ ಒಳಗಾಗಿ ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಫಲಿತಾಂಶ ತಡೆಹಿಡಿಯಲಾದ ವಿದ್ಯಾರ್ಥಿಗಳ ಹಿಂದಿನ ಫಲಿತಾಂಶ ಪಟ್ಟಿಯನ್ನು ಹತ್ತು ದಿನಗಳ ಒಳಗಾಗಿ ದೃಡಪಡಿಸಿ ಸಲ್ಲಿಸಲು ಸೂಚಿಸಲಾಗಿದೆ. ಇದರೊಂದಿಗೆ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಮಾಧ್ಯಮ, ತಂದೆ ತಾಯಿಯ ಹೆಸರು ಇನ್ನಿತರೆ ಬದಲಾವಣೆಗಳಿದ್ದಲ್ಲಿ ಮಂಡಳಿಗೆ ಪತ್ರ ಬರೆದು ಸರಿ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!