ಎರೆ ಗೊಬ್ಬರದ ತೊಟ್ಟಿ

ಪ್ರತಿಯೊಬ್ಬ ರೈತ ಸಹಜ ಮತ್ತು ಸೂಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವದು ಇಂದಿನ ಅವಶ್ಯಕತೆಯಾಗಿರುತ್ತದೆ. ಹಾಗೂ ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೆ ಚಿಕ್ಕ ಉತ್ತರ “ಎರೆಹುಳು ಕೃಷಿ”. ಹಲವಾರು ಸಂಶೋಧನೆಗಳಿಂದ ಗೊತ್ತುಪಡಿಸಿದ ಸಂಗತಿ ಏನೆಂದರೆ, ಸಾಗುವಳಿಗೆ ಯೋಗ್ಯವಾದ ಮಣ್ಣಿನ 3 ಸೆಂ.ಮೀ. ಮೇಲ್ಪದರು ತಯಾರಾಗಲು ಒಂದು ಸಾವಿರ ವರ್ಷಗಳು ಬೇಕು. ಆದರೆ ಈ ಪರೋಪಕಾರಿ ಜೈವಿಕ ನೇಗಿಲ (ಎರೆಹುಳು) ದಿಂದ ಕಲ್ಲು ಉಸುಕಿನ ಹೊಲವನ್ನು ಹುಲ್ಲು ಗದ್ದೆಯಾಗಿ ಪರಿವರ್ತಿಸಲು ಕೇವಲ ಹತ್ತು ವರ್ಷಗಳು ಸಾಕು.

ಎರೆ ಹುಳಗಳು


ಎರೆಹುಳುವಿನ ಚಟುವಟಿಕೆಗಳು : ಎರೆಹುಳುವಿನ ಮುಖ್ಯ ವಟುವಟಿಕೆಗಳು ಅಂದರೆ ಭೂಮಿಯನ್ನು ಉಳುಮೆ ಮಾಡುವುದು ಮತ್ತು ಹಿಕ್ಕೆಗಳನ್ನು ಹಾಕುವುದು. ಭೂಮಿಯನ್ನು ಸಾಮಾನ್ಯ ಉಳುಮೆ ಮಾಡುವುದರಿಂದ 30 ಸೆಂ.ಮೀ. ವರೆಗೆ ಮಾಡಬಹುದು. ಆದರೆ ಎರೆಹುಳುಗಳು 3 ಮೀಟರ್ ವರೆಗೆ ಉಳುಮೆಯನ್ನು ಬೆಳೆಗೆ ಯಾವುದೇ ದುಷ್ಪರಿಣಾಮವಿಲ್ಲದೆ ಮಾಡುತ್ತವೆ. ಬೆಳೆಗಳ ಉಳುವಿಕೆಯನ್ನು ಸಾವಯವ ವಸ್ತುಗಳನ್ನು ಮತ್ತು ಹೆಂಡಿಯನ್ನು ಮಣ್ಣಿನಲ್ಲಿ ಬೆರೆಸುತ್ತವೆ. ಆದ್ದರಿಂದ ಭುಮಿಯಲ್ಲಿ ವಿವಿಧ ಪದರಗಳಲ್ಲಿ ಪೋಷಕಾಂಶಗಳನ್ನು ಮಿಶ್ರಣ ಮಾಡುವುದಲ್ಲದೆ ಪೋಷಕಾಂಶಗಳನ್ನು ಬೆಳೆಗಳ ಬೇರಿನ ಹತ್ತಿರ ತಂದು ಅವುಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎರೆಹುಳುಗಳು ಭೂಮಿಯನ್ನು ಉಳುಮೆ ಮಾಡುತ್ತಾ ಹೋಗುವಾಗ ಸಾವಯ ವ ಪದಾರ್ಥಗಳನ್ನು ತಿನ್ನುತ್ತಾ ಸಾಗುವ ಸಮಯದಲ್ಲಿ ಅದರ ಭೂಮಿಯಲ್ಲಿ ಅಲ್ಪ ಪ್ರಮಾಣದ ಆದ್ರತೆ ಮತ್ತು ಯೂರಿಯಾವನ್ನು ಅದರ ಮೂತ್ರದ ಮೂಲಕ ಸೇರಿಸುತ್ತಾ ಹೊಗುತ್ತದೆ. ಎರೆಹುಳು ಪೊಷಕಾಂಶಗಳನ್ನು ವಿಭಜಿಸಿ ಭೂಮಿಗೆ ಒದಗಿಸುವ ಮುಖಾಂತರ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಎರೆಹುಳು ಭೂಮಿಯಲ್ಲಿ ರಂಧ್ರಗಳನ್ನು ಮಾಡುವುದರಿಂದ ಭೂಮಿಯಲ್ಲಿ ಗಾಳಿಯಾಡಿ ಹೆಚ್ಚಿನ ಆಮ್ಲಜನಕವನ್ನು ಒದಗಿಸುವುದರಿಂದ ಅನೇಕ ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಅನುಕೂವಾಗುತ್ತದೆ. ಎರೆಹುಳುಗಳ ಹೊಟ್ಟೆಯಲ್ಲಿ ಇರುವ ಉಪಯುಕ್ತ ಸೂಕ್ಷ್ಮಾಣುಗಳು ಹಿಕ್ಕೆಯ ಜೊತೆಗೆ ಹೊರ ಬರುತ್ತವೆ.
ಎರೆಹುಳುಗಳನ್ನು ಕೃಷಿಯಲ್ಲಿ ಬಳಸುವ ವಿಧಾನಗಳು :

ಎರೆ ಗೊಬ್ಬರ
  1. ಎರೆಗೊಬ್ಬರದ ನೇರ ಬಳಕೆ: ಎರೆಹುಳುಗಳಿಂದ ತಯಾರಿಸಿದ ಗೊಬ್ಬರವನ್ನು ಬೆಳೆಗಳಿಗೆ ಸುಮಾರು ಒಂದು ಟನ್ ಪ್ರತಿ ಎಕರೆಗೆ ಬಳಸಬಹುದು.
  2. ಇನ್‍ಸಿಟು (ಸ್ಥಾನಿಕ) ಎರೆ ಕೃಷಿ : ಹೊಲಗಳಲ್ಲಿ, ತೋಟಗಳಲ್ಲಿ, ಬೆಳೆಗಳಲ್ಲಿಯೆ ಎರೆಹುಳುಗಳನ್ನು ಬಿಟ್ಟು ಎರೆಕೃಷಿ ಮಾಡಬಹುದು. ಇದಕ್ಕೆ ಇನ್‍ಸಿಟು (ಸ್ಥಾನಿಕ) ಎರೆ ಕೃಷಿ ಎನ್ನುತ್ತಾರೆ. ಈ ಪದ್ಧತಿಯು ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾವು ಮತ್ತು ಇನ್ನಿತರ ಹನಿ ನೀರಾವರಿ ಅಳವಡಿಸುವ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಸಾಕಷ್ಟು ಕೃಷಿ ತ್ಯಾಜ್ಯ ವಸ್ತುಗಳನ್ನು ಹಾಕಿ ಮೇಲೆ ಹುಲ್ಲು ಹಾಸಿಗೆ ಹೊದಿಸಿ ಸುಮಾರು 30,000-50,000 ಎರೆಹುಳುಗಳನ್ನು ಪ್ರತಿ ಎಕರೆ ಪ್ರದೇಶಕ್ಕೆ ಗಿಡಗಳ ಸಾಲುಗಳ ಮಧ್ಯ ಅಥವಾ ಗಿಡಗಳ ಬುಡಕ್ಕೆ ಬಿಡಬೇಕು. ಈ ಪದ್ಧತಿ ಬಳಸಿ ಶೇ. 50 ರಷ್ಟು ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬಹುದಲ್ಲದೆ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
  3. ಎರೆತೊಳೆ (ವಮೀ ವಾಶ್) ಬಳಕೆ :ಎರೆಹುಳುಗಳನ್ನು ನೀರಿನಲ್ಲಿ ನೆನೆಸಿ ಬಂದ ದ್ರಾವಣಕ್ಕೆ ಎರೆತೊಳೆ ಅಥವಾ ವರ್ಮಿ ವಾಶ್ ಎನ್ನುತಾರೆ. ಈ ಎರೆತೊಳೆ ವಿವಿಧ ಪೋಷಕಾಂಶಗಳನ್ನು ಮತ್ತು ಬೆಳೆ ವರ್ಧಕಗಳನ್ನು ಹೊಂದಿರುವುದರಿಂದ ಇದನ್ನು ಬೆಳೆಗಳಿಗೆ ಸಿಂಪರಣೆ ಅಥವಾ ಮುಡಗಳಿಗೆ ಸುರಿಯುವುದರಿಂದ ಬೆಳೆಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಈ ದ್ರಾವಣವನ್ನು ಬದನೆ, ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮ್ಯಾಟೊ ಬೆಳೆಗಳ ಮೇಲೆ ಸಿಂಪರಣೆ ಮಾಡಿದಾಗ ಈ ತರಕಾರಿಗಳ ಗುಣಮಟ್ಟ ಮತ್ತು ಇಳುವರಿಯಲ್ಲಿ ಹೆಚ್ಚಾದದ್ದು ಕಂಡು ಬಂದಿದೆ. ಎರೆಹುಳು ಗೊಬ್ಬರದ ಮಹತ್ವ : ಎರೆಹುಳು ಸಾವಯವ ವಸ್ತುಗಳಾದ ಕೃಷಿ ತ್ಯಾಜ್ಯ ವಸ್ತುಗಳನ್ನು ತಿಂದು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನೊಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಎರೆಗೊಬ್ಬರವನ್ನು ಸುಮಾರು ಎಕರೆಗೆ 1 ಟನ್‍ನಂತೆ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು.ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿ ಹೊಂದಿ ಹುಳುವಿನ ಹಿಕ್ಕೆಯೊಡನೆ ಹೊರ ಬರುತ್ತವೆ.ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ಪ್ರೋಟೊಜೊವಾ, ಆಕ್ಟಿನೋಮೈಸಿಟ್ಸ್ ಹಾಗೂ ಶಿಲೀಂದ್ರಗಳು ಹುಳುವಿನ ಹಿಕ್ಕೆಯೊಡನೆ ಕಾಣುವ ಸೂಕ್ಷಾಣು ಜೀವಿಗಳಾಗಿರುತ್ತವೆ. ಈ ಸೂಕ್ಷಾಣು ಜೀವಿಗಳು ತಮ್ಮ ಪ್ರತಿಕ್ರಿಯೆಯಿಂದ ಅ:ಓ (ಕಾರ್ಬನ್ : ನೈಟ್ರೋಜನ್) ಮತ್ತು ಅ:P (ಕಾರ್ಬನ್ : ಪಾಸ್ಪರಸ್) ಸಂಬಂಧಗಳನ್ನು ನಿಗದಿತ ಪ್ರಮಾಣದಲ್ಲಿ ಇರಲು ಶ್ರಮಿಸುತ್ತವೆ. ಚಿತ್ರ ಕೃಪೆ: ಸುಹಾಸ್‌ ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ : ಜಹೀರ್ ಅಹಮ್ಮದ್, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ. ಮೊಬೈಲ್‌ ಸಂಖ್ಯೆ: 98453 00326
error: Content is protected !!