ಟೆಲಿಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗ, ಜವಾಹರಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ವಿಶೇಷವಾಗಿ ಮಹಿಳೆಯರಿಗೆ, ಗೃಹಿಣಿಯರು ಹಾಗು ವಿದ್ಯಾರ್ಥಿನಿಯರಿಗೆ ಒಂದು ದಿನದ “ಉನ್ನತ ಶಿಕ್ಷಣದಲ್ಲಿ ಮಹಿಳಾ ಸಶಕ್ತೀಕರಣ” ಕಾರ್ಯಾಗಾರವನ್ನು ದಿನಾಂಕ: 29.04.2019 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಉಪನ್ಯಾಸ, ಸಮೂಹ ಚರ್ಚೆ ಮುಂತಾದ ಚಟುವಟಿಕೆಗಳನ್ನು ಆಯೋಜಿಸಿದ್ದು, ಈ ಚಟುವಟಿಕೆಗಳು ಮಹಿಳೆಯರು ಸ್ವತಂತ್ರವಾಗಿ ಆಲೋಚಿಸಲು ಪ್ರೇರೆಪಿಸುತ್ತವೆ. ಈ ಮೂಲಕ ಮಹಿಳೆಯರು ತಮ್ಮ ಗುರಿ ಸಾಧಿಸಲು ಪೂರಕವಾಗುವಂತೆ ಈ ಕಾರ್ಯಾಗಾರದ ರೂಪುರೇಷೆಗಳನ್ನು ತಯಾರಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ಈ ಕೆಳಕಂಡವರನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವು 60 ಜನರಿಗೆ ಮಾತ್ರ ಸೀಮಿತವಾಗಿದ್ದು ಮೊದಲು ನೋಂದಾಯಿಸಿದವರಿಗೆ ಆದ್ಯತೆ.
ಶ್ರೀಮತಿ. ಭುವನಾ ಖರೆ, ಸಹಾಯಕ ಪ್ರಾಧ್ಯಾಪಕರು, ಟಿಸಿ ವಿಭಾಗ, ಮೊ: 9972178277
ಶ್ರೀಮತಿ. ರಶ್ಮಿ ಎಮ್. ಹೆಚ್., ಸಹಾಯಕ ಪ್ರಾಧ್ಯಾಪಕರು, ಟಿಸಿ ವಿಭಾಗ, ಮೊ: 9663375302