News Next

ಶಿವಮೊಗ್ಗ : ಡಿಸೆಂಬರ್ 06 : ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಉಗ್ರಾಣಗಳಲ್ಲಿ ರೈತರು ಉತ್ಪಾದಿಸಿ ಸಂಗ್ರಹಿಸಿಡುವ ಕೃಷಿ ಉತ್ಪನ್ನಗಳಿಗೆ ರೈತರು ಪಾವತಿಸುವ ಸಂಗ್ರಹಣಾ ಶುಲ್ಕದಲ್ಲಿ ಶೆ.25ರಷ್ಟು ಹಾಗೂ ಪರಿಶಿಷ್ಟರು ಜಾತಿ/ಪಂಗಡದ ರೈತರಿಗೆ ಶೇ.50ರಷ್ಟು ಸಹಾಯಧನವನ್ನು ಸರ್ಕಾರವು ಮಂಜೂರು ಮಾಡಲು ಉದ್ದೇಶಿಸಿದ್ದು, ಅರ್ಹ ರೈತರಿಗೆ ಸಹಾಯಧನಕ್ಕಾಗಿ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ.
ಸಾಮಾನ್ಯ ರೈತರಿಗೆ ಸರ್ಕಾರದಿಂದ ಶೇ.25, ರಾಜ್ಯ ಉಗ್ರಾಣ ನಿಗಮದಿಂದ ಶೇ.20 ಸೇರಿ ಒಟ್ಟು ಶೆ.45ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರದಿಂದ ಶೇ.50ರಷ್ಟು ಉಗ್ರಾಣ ನಿಗಮದಿಂದ ಶೇ.25 ಸೇರಿ ಒಟ್ಟು 75ರಷ್ಟು ಸಂಗ್ರಹಣಾ ಶುಲ್ಕದಲ್ಲಿ ಸಹಾಯಧನ ನೀಡಲಾಗುವುದು.
ಈ ಯೋಜನೆಯು 2021ರ ಏಪ್ರಿಲ್ 01ರ ನಂತರದ ಅವಧಿಯಲ್ಲಿ ರೈತರು ಸಂಗ್ರಹಿಸುವ ಕೃಷಿ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದೆ. ರೈತರು ಸಂಗ್ರಹಿಸಿದ ಕೃಷಿ ಉತ್ಪನ್ನಗಳಿಗೆ ಗರಿಷ್ಟ 09ತಿಂಗಳ ಅವಧಿಗೆ ಅಥವಾ ರೈತರು ತಮ್ಮ ದಾಸ್ತಾನು ಬಿಡುಗಡೆ ಪಡೆಯುವ ಅವಧಿಯವರೆಗೆ ಇದರಲ್ಲಿ ಯಾವುದು ಮೊದಲು ಆ ಅವಧಿಗೆ ಸಂಗ್ರಹಣಾ ಶುಲ್ಕ ವಿನಾಯಿತಿ ಅನ್ವಂiÀiವಾಗುತ್ತದೆ. 09ತಿಂಗಳು ಸಂಗ್ರಹಣೆ ಮುಗಿದ ದಾಸ್ತಾನಿಗೆ ಸರ್ಕಾರದ ಈ ಸೌಲಭ್ಯ ಅನ್ವಯವಾಗುವುದಿಲ್ಲ. ಈ ಯೋಜನೆಯಡಿ ಮೊದಲು ಸಂಗ್ರಹಣೆ ಮಾಡಿದ ರೈತರಿಗೆ ಆದ್ಯತೆ ಮೇರೆಗೆ ಸಂಗ್ರಹಣಾ ಶುಲಕ ವಿನಾಯಿತಿ ನೀಡಲಾಗುವುದು. ರೈತರ ಪಹಣಿಯಲ್ಲಿ ಭೂವಿಸ್ತೀರ್ಣ, ನಮೂದಿಸಿರುವ ಬೆಳೆ ಮತ್ತು ಕೃಷಿ ಮತ್ತು ಇಲಾಖೆ, ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯದಿಂದ ಲಭ್ಯವಾಗುವ ಪ್ರತಿ ಎಕರೆಗೆ ನಿಗಧಿಪಡಿಸಿದ ಇಳುವರಿಯನ್ನಾಧರಿಸಿ, ಸಂಗ್ರಹಿಸಿದ ಕೃಷಿ ಉತ್ಪನ್ನಗಳಿಗೆ ಗರಿಷ್ಟ 5ಎಕರೆಗೆ ಮೀರದಂತೆ ಸಂಗ್ರಹಣಾ ಶುಲ್ಕ ಸಹಾಯಧನವನ್ನು ರೈತರಿಗೆ ನೀಡಲಾಗುವುದು.
ಆಸಕ್ತರು ತಮ್ಮ ಪ್ರಸ್ತಾವನೆಯೊಂದಿಗೆ ಫಲಾನುಭವಿ ರೈತರ ಆಧಾರ್ ಪ್ರತಿ, ಫಲಾನುಭವಿ ರೈತರ ಬೆಳೆ ನಮೂದಾಗಿರುವ ಪಹಣಿ, ಇಲ್ಲವಾದರೆ ಬೆಳೆ ದೃಢೀಕರಣ ಪತ್ರ, ರೈತರ ಈಖUIಖಿ Iಆ ಸಂಖ್ಯೆ, ಪರಿಶಿಷ್ಟ ಜಾತಿ, ಪಂಗಡದ ರೈತರ ಜಾತಿ ಪ್ರಮಾಣಪತ್ರ ಹಾಗೂ ಫಲಾನುಭವಿ ರೈತರ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕು.
ಮಾಹಿತಿಗಾಗಿ ಶಿವಮೊಗ್ಗ ಪ್ರಾದೇಶಿಕ ವ್ಯವಸ್ಥಾಪಕರು-ಮೊ.7760966953, ಉಗ್ರಾಣ ವ್ಯವಸ್ಥಾಪಕರು-ಮೊ.9972701077, ಸಾಗರ-ಮೊ.7760966956, ಭದ್ರಾವತಿ-ಮೊ.77609958, ಮಾಚೇನಹಳ್ಳಿ-ಮೊ.7760966958, ಶಿಕಾರಿಪುರ- ಮೊ.77609957 ಇವರನ್ನು ಸಂಪರ್ಕಿಸಬಹುದಾಗಿದೆ.

error: Content is protected !!