News Next

ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿನ ರೈಲ್ವೆ ಮೇಲ್ಸೇತುವೆಯ ಮೇಲೆ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ಶಿವಮೊಗ್ಗ, ಜನವರಿ-04: ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ -25ರ ಕಿ.ಮೀ. 191.25ರಲ್ಲಿ ಮೇಲ್ಸೇತುವೆ ಕಾಮಗಾರಿ ಪ್ರಾರಂಭಿಸಿರುವುದರಿಂದ ಕೆಲಸ ನಡೆಯುವ ಸಂದರ್ಭದಲ್ಲಿ ಸೇತುವೆ ಮೇಲೆ ಲಘು ವಾಹನಗಳು ಮಾತ್ರ ಸಂಚರಿಸಲು ಅನುಕೂಲವಾಗುವಂತೆ ಹಾಗೂ ಮೇಲ್ಸೇತುವೆಯ ಎರಡು ಬದಿಯಲ್ಲಿ ಬ್ಯಾರಿಕೇಡಿಂಗ್ ಅಳವಡಿಸಲು ಹಾಗೂ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ, ಲಘು ವಾಹನಗಳ ಸಂಚಾರಕ್ಕೆ ಅವಕಾಸ ಮಾಡಿಕೊಡಲು 30 ದಿನಗಳ ಅವಧಿಗೆ ಸವಳಂಗ-ಹೊನ್ನಾಳಿ (ರಾ.ಹೆ.57) ರಸ್ತೆಯ ಮೂಲಕ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.

ಗ್ರಾ.ಪಂ. ಚುನಾವಣೆ ಪ್ರಯುಕ್ತ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಯಲ್ಲಿ ಠೇವಣಿಯಿಡಲು ಸೂಚನೆ
ಶಿವಮೊಗ್ಗ, ಮಾರ್ಚ್ 12 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಚುರ್ಚುಗುಂಡಿ ಮತ್ತು ತರಲಘಟ್ಟ, ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಮತ್ತು ವೀರಾಪುರ, ಶಿವಮೊಗ್ಗ ತಾಲೂಕಿನ ಹೊಸಹಳ್ಳಿ, ಸಾಗರ ತಾಲೂಕಿನ ಗೌತಮಪುರ ಗ್ರಾ.ಪಂ ಚುನಾವಣೆ ಹಾಗೂ ಶಿಕಾರಿಪುರ ಪುರಸಭೆ ವಾರ್ಡ್ ನಂ.: 5,9,20 ಚುನಾವಣೆಯ ಹಿನ್ನಲೆಯಲ್ಲಿ ಸಂಬಂಧಪಟ್ಟ ಗ್ರಾ.ಪಂ. ಹಾಗೂ ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ಸಂಬಂಧಪಟ್ಟ ಗ್ರಾ.ಪಂ. ಹಾಗೂ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮಲ್ಲಿರುವ ಶಸ್ತ್ರ/ಆಯುಧಗಳನ್ನು ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.ಉಪಚುನಾವಣೆಯು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯಬೇಕಾಗಿರುವುದರಿಂದ ಜಿಲ್ಲಾ ಆಡಳಿತವು ಕೈಗೊಂಡಿ ಈ ಕ್ರಮಕ್ಕೆ ಸಾರ್ವಜನಿಕರು ಸಹಕರಿಸುವಂತೆ ಹಾಗೂ ಸರ್ಕಾರಿ ಕರ್ತವ್ಯದಲ್ಲಿ ನಿರತರಾದ ರಕ್ಷಣಾ ಸಿಬ್ಬಂಧಿಗಳಿಗೆ ಎಂ.ಪಿ.ಎಂ/ವಿ.ಐ.ಎಸ್.ಎಲ್. ಮತ್ತು ರಾಷ್ಟ್ರೀಕೃತ ಬ್ಯಾಂಕ್ ಇತ್ಯಾದಿಗಳಲ್ಲಿ ಭದ್ರತಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಅಧಿಕೃತ ಪರವಾನಿಗೆಯಲ್ಲಿ ಹೊಂದಿರುವ ಆಯುಧಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿರುತ್ತಾರೆ.

ಸ್ಥಾವರಗಳನ್ನು ಕ್ರಮಬದ್ದಗೊಳಿಸುವಂತೆ ಸಾರ್ವಜನಿಕರಿಗೆ ಸೂಚನೆ
ಶಿವಮೊಗ್ಗ, ಮಾರ್ಚ್ 12: ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಉಪವಿಭಾಗ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಯಾವುದೇ ಸ್ಥಾವರಗಳ ಗ್ರಾಹಕರುಗಳು ಅನಧಿಕೃತವಾಗಿ ವಿದ್ಯುತ್‍ನ್ನು ಬಳಕೆ ಮಾಡುತ್ತಿದ್ದಲ್ಲಿ ಕೂಡಲೇ ಸಂಬಂಧಿಸಿದ ಮೆಸ್ಕಾಂ ಕಛೇರಿಗಳಿಗೆ ಅರ್ಜಿ ಸಲ್ಲಿಸಿ, ಸ್ಥಾವರಗಳನ್ನು ಕ್ರಮಬದ್ದಗೊಳಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಸೂಚಿಸಿದೆ.

ಪಂಪ್‍ಸೆಟ್ ಸ್ಥಾವರಗಳ ಗ್ರಾಹಕರು ದಾಖಲೆಗಳನ್ನು ಒದಗಿಸುವಂತೆ ಸೂಚನೆ:

ಶಿವಮೊಗ್ಗ, ಮಾರ್ಚ್ 12 : ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಉಪವಿಭಾಗದ ವ್ಯಾಪ್ತಿಯಲ್ಲಿ ಎಲ್.ಟಿ-1 ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಎಲ್.ಟಿ-4 10 ಹೆಚ್.ಪಿ ಗಿಂತ ಕಡಿಮೆ ಇರುವ ನೀರಾವರಿ ಪಂಪ್‍ಸೆಟ್ ಸ್ಥಾವರಗಳ ಗ್ರಾಹಕರುಗಳು ತಮ್ಮ ಆಧಾರ್ ಸಂಖ್ಯೆ, ಆರ್.ಡಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಹತ್ತಿರದ ಮೇಸ್ಕಾಂ ಕಛೇರಿಗೆ ಇದುವರೆವಿಗೆ ಸಲ್ಲಿಸದಿದ್ದಲ್ಲಿ ಕೂಡಲೇ 07 ದಿನಗಳ ಒಳಗಾಗಿ ಹೊಳೆಹೊನ್ನೂರು ಉಪವಿಭಾಗ ಕಛೇರಿಗೆ ಇಲ್ಲವೇ ಹತ್ತಿರದ ಶಾಖಾ ಕಛೇರಿಗೆ ನೀಡಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಮೆಸ್ಕಾಂನ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ
ಶಿವಮೊಗ್ಗ, ಮಾರ್ಚ್ 12 ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂ.ಜಿ.ಎಫ್-2ರಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ:14.03.2021ರಂದು ಬೆಳಗ್ಗೆ 10:00 ಗಂಟೆಯಿಂದ ಸಂಜೆ 06:00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆಕುವೆಂಪುರಸ್ತೆ, ದುರ್ಗಿಗುಡಿ, ಮಿಷóನ್ ಕಾಂಪೌಂಡ್, ಜ್ಯೂವೆಲ್ ರಾಕ್ ರಸ್ತೆ, ಜೆ.ಪಿ.ಎನ್ ರಸ್ತೆ, ದುರ್ಗಿಗುಡಿ ಮುಖ್ಯರಸ್ತೆ, ಗೋಪಿ ಸರ್ಕಲ್, ಸವಾರ್‍ಲೈನ್‍ರಸ್ತೆ, ಎಲ್‍ಐಸಿ ಬಿಲ್ಡಿಂಗ್, ಆಭರಣ, ಸಿಮ್ಸ್ ಮೆಡಿಕಲ್ ಕಾಲೇಜ್ ಮತ್ತು ಹಾಸ್ಟೆಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ನಗರ ಉಪವಿಭಾಗ-3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ
ಶಿವಮೊಗ್ಗ, ಮಾರ್ಚ್- 12 : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 14/03/2021 ರ ಭಾನುವಾರದಂದು 2020-21ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ಆರ್.ಎಂ.ಎಲ್.ನಗರ ಭಾರತೀಯ ಸಭಾ ಭವನದ ಹತ್ತಿರ, ಅಶೋಕನಗರ ಸುವರ್ಣ ಸಾಂಸ್ಕøತಿಕ ಭವನ ಗಣಪತಿ ದೇವಸ್ಥಾನದ ಹತ್ತಿರ, ವಿದ್ಯಾನಗರ ಡಬಲ್ ಟ್ಯಾಂಕ್ ಹತ್ತಿರ ಹಾಗೂ ಬೊಮ್ಮನಕಟ್ಟೆ ಮುಖ್ಯರಸ್ತೆ ಅಪೂರ್ವ ಪದವಿ ಪೂರ್ವ ಕಾಲೇಜ್ ಹತ್ತಿರ” ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.

ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ
ಶಿವಮೊಗ್ಗ, ಮಾರ್ಚ್ 12 : ಶಿವಮೊಗ್ಗ ಜಿಲ್ಲೆಯ ನಗರ ಉಪ ವಿಬಾಗ ವ್ಯಾಪ್ತಿ-2ರ ವ್ಯಾಪ್ತಿಯಲ್ಲಿನ ಘಟಕ-06ರ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11ಕೆವಿ ನಿರ್ವಾಹಣೆ ಕಾಮಗಾರಿ ಇರುವ ಕಾರಣ ದಿ:14/03/2021ರ ಭಾನುವಾರದಂದು ಬೆಳಗ್ಗೆ 9.00ಯಿಂದ ಸಂಜೆ 6.00ರ ವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಪೇಪರ್ ಪ್ಯಾಕೇಜ್, ಪೀಯರ್ ಲೈಟ್, ಕಲ್ಲೂರುಮಂಡ್ಲಿ ಕೈಗಾರಿಕಾ ಪ್ರದೇಶ, ಗೋಪಿಶೆಟ್ಟಿಕೊಪ್ಪ, ಇಲಿಯಾಜ್ ನಗರ 1 ರಿಂದ 13ನೇ ತಿರುವು, ಚಾಲಕ್ಯ ನಗರ, ಕೆ.ಹೆಚ್.ಬಿ ಕಾಲೋನಿ, ಸಿದ್ದೇಶ್ವರ ಸರ್ಕಲ್, ಮೇಲಿನ ಮತ್ತು ಕೆಳಗಿನ ತುಂಗಾನಗರ, ಎನ್.ಟಿ ರಸ್ತೆ, ಬಿ.ಹೆಚ್. ರಸ್ತೆ, ಓಟಿ ರಸ್ತೆ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗೂಡೂರು, ವಾದಿಹುದ ಸುಳೇಬೈಲು ಸುತ್ತ ಮುತ್ತಲಿನ ಪ್ರದೇಶ, ದುರ್ಗಿಗುಡಿ ಸುತ್ತಮುತ್ತ, ಜೆ.ಸಿ ನಗರ, ಬಿ.ಹೆಚ್ ರಸ್ತೆ, ಮಲ್ಲಿಕಾರ್ಜುನ ಬಡಾವಣೆ, ಬುದ್ದ ನಗರ, ಅಮೀರ್‍ಅಹ್ಮದ್ ಸರ್ಕಲ್, ಆರ್.ಎಮ್.ಎಲ್ ನಗರ 1 ಮತ್ತು 2ನೇ ಹಂತ, ಭಾರತಿಕಾಲೋನಿ, ದುರ್ಗಿಗುಡಿ, ಸವಾರ್ ಲೈನ್ ರಸ್ತೆ, ಪಂಚವಟಿ ಕಾಲೋನಿ, ಮಂಜುನಾಥ ಬಡಾವಣೆ, ಖಾಜಿ ನಗರ, ಟಿಪ್ಪು ನಗರ, ಗಾರ್ಡನ್ ಏರಿಯಾ, ನೆಹರು ರಸ್ತೆ, ಮಿಳಘಟ್ಟ, ಆನಂದ ರಾವ್ ಬಡಾವಣೆ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಗಾಂಧಿ ಬಜಾರ್, ಕುಂಬಾರ ಗುಂಡಿ, ಬಿ.ಬಿ ರಸ್ತೆ, ಕೆ.ಆರ್ ಪುರಂ, ಸೀಗೆಹಟ್ಟಿ, ಶಿವಶಂಕರ್ ರೈಸ್ ಮಿಲ್ ಮುರಾದ್ ನಗರ, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಇಮಾಮ್ ಬಡಾ, ಟಿ.ಎಸ್.ಆರ್ ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್ ನಗರ, ಲಾಲ್ ಬಂದರ್ ಕೇರಿ, ಎಫ್-6 ಕಲ್ಲೂರು ಮಂಡ್ಲಿ ಫೀಡರ್, ಎಫ್-5 ಗಾಜನೂರು ರೂರಲ್, ಎಫ್-8 ರಾಮಿನ ಕೊಪ್ಪ ಗ್ರಾಮಾಂತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂನ ನಗರ ಉಪವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರ್-ಪಹಣೆ ಜೋಡಣೆ ಆಂದೋಲನ
ಶಿವಮೊಗ್ಗ, ಮಾರ್ಚ್ 12 : ತಾಲ್ಲೂಕಿನ ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ಕಂದಾಯ ಇಲಾಖೆ/ ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆ/ ಪಶು ಇಲಾಖೆ/ ರೇಷ್ಮೆ ಇಲಾಖೆ ಮತ್ತು ಇತರೆ ಇಲಾಖೆಗಳಿಂದ ವಿವಿಧ ಸರ್ಕಾರಿ ಸೌಲಭ್ಯಗಳಾದ ಪಿಎಂಕಿಸಾನ್, ಕಿಸಾನ್ ಸಮ್ಮಾನ್, ಬೆಳೆ ವಿಮೆ, ಬೆಳೆ ಸಮೀಕ್ಷೆ, ಬೆಳೆ ಸಾಲ, ಬೆಳೆ ಹಾನಿ ಪರಿಹಾರ, ವಿವಿಧ ಯೋಜನೆಗಳಡಿ ಸಬ್ಸಿಡಿ ಹಾಗೂ ಕನಿಷ್ಠ ಬೆಂಬಲ ಯೋಜನೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುವಾಗುವಂತೆ ಆಧಾರ್-ಪಹಣಿ ಜೋಡಣೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆಗೆ ನಿಗಧಿಯಾದ ಒಟ್ಟಾರೆ 68801 ಸರ್ವೆ ನಂಬರ್‍ಗಳಲ್ಲಿ ಈವರೆಗೆ 39439 ಸರ್ವೆ ನಂಬರ್‍ಗಳಿಗೆ ಆಧಾರ್ ಜೋಡಣೆಯಾಗಿದೆ. ಉಳಿದ 29362 ಸರ್ವೆ ನಂಬರ್‍ಗಳಿಗೆ ಆಧಾರ್ ಜೋಡಣೆ ಬಾಕಿಯಿದೆ. ಈIಆ (ಈಚಿಡಿmeಡಿ Iಜeಟಿಣiಜಿiಛಿಚಿಣioಟಿ) ನೋಂದಣಿ ಮಾಡದೇ ಇರುವ ರೈತರು ತಮ್ಮ ಜಮೀನುಗಳಿಗೆ ಸಂಬಂಧಿಸಿದ ಪಹಣಿ ಪ್ರತಿ, ಮಾಲೀಕರ ಹೆಸರು, ವಿಳಾಸ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಪ್ಪಿಗೆ ಪತ್ರ, ಬ್ಯಾಂಕ್ ಖಾತೆಯ ವಿವರದ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ (ಎಸ್.ಸಿ ಮತ್ತು ಎಸ್.ಟಿ ರೈತರಿಗೆ ಮಾತ್ರ) ದಾಖಲಾತಿಗಳನ್ನು ಸಲ್ಲಿಸಿ ಈIಆ ಸಂಖ್ಯೆ ಪಡೆದುಕೊಳ್ಳಬೇಕು ಮತ್ತು ಎಲ್ಲಾ ಸರ್ವೆ ನಂಬರ್‍ಗಳನ್ನು ಈಖUIಖಿS ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಲು ರೈತರು ಹತ್ತಿರದ ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳನ್ನು ಸಂಪರ್ಕಿಸುವಂತೆ ತಹಶೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!