ಶಿವಮೊಗ್ಗ : ಅಕ್ಟೋಬರ್ 25 : ಇಂದಿನಿಂದ ಜಿಲ್ಲೆಯ ಆಯ್ದ ಗ್ರಾಮಪಂಚಾಯಿತಿಗಳ ಗ್ರಾಮಗುಚ್ಚಗಳಲ್ಲಿ ಕೃತಕ ಗರ್ಭಧಾರಣೆಯ ಮೂಲಕ ರಾಸುಗಳ ತಳಿ ಉನ್ನತೀಕರಣ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಶು ವೈದ್ಯಕೀಯ ಇಲಾಖಾಧಿಕಾರಿಗಳ ಸಭೆಯಲ್ಲಿ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಈ ಯೋಜನೆಯಡಿ ಜಿಲ್ಲೆಯಲ್ಲಿ 100ಗ್ರಾಮಗುಚ್ಚಗಳನ್ನು ರಚಿಸಲಾಗಿದ್ದು, ಪ್ರತಿ ಗ್ರಾಮಗುಚ್ಚಗಳಲ್ಲಿ ತಳಿ ಸಂವರ್ಧನೆಗೆ ಯೋಗ್ಯವಾದ ಸುಮಾರು 200ರಾಸುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದವರು ನುಡಿದರು.
ಈ ಕಾರ್ಯಕ್ರಮದಡಿಯಲ್ಲಿ ಉತ್ಕøಷ್ಟ ಗುಣಮಟ್ಟದ ತಳಿಯ ವೀರ್ಯವನ್ನು ಬಳಸಿ, ಉಚಿತವಾಗಿ ಕೃತಕ ಗರ್ಭಧಾರಣಾ ಸೌಲಭ್ಯವನ್ನು ರೈತರ ಮನೆ ಬಾಗಿಲಿಗೆ ನೀಡಲಾಗುವುದು. ಪ್ರತಿ ಕೃತಕ ಗರ್ಭಧಾರಣೆಗೆ ರೂ. 50/- ಹಾಗೂ ಪ್ರತಿ ಜನನವಾದ ಕರುವಿಗೆ ರೂ.100/-ರಂತೆ ಪ್ರೋತ್ಸಾಹಧನವನ್ನು ಕೃತಕ ಗರ್ಭಧಾರಣಾ ಕಾರ್ಯಕರ್ತರು ಅಥವಾ ಪಶುವೈದ್ಯಾಧಿಕಾರಿಗಳಿಗೆ ಇಲಾಖೆ ವತಿಯಿಂದ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದವರು ನುಡಿದರು.
ಈ ಯೋಜನೆಯ ವ್ಯವಸ್ಥಿತ ಅನುಷ್ಠಾನದಿಂದಾಗಿ ಉತ್ಕøಷ್ಟ ತಳಿಯ ಕರುಗಳು ಜನನವಾಗಲಿದೆ. ಅಲ್ಲದೆ ಗಣನೀಯ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿ ರೈತರ ಆದಾಯ ವೃದ್ಧಿಯಾಗಲಿದೆ ಎಂದ ಅವರು, ಹೆಚ್ಚಿನ ಸಂಖ್ಯೆಯ ರೈತರು ತಮ್ಮ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ|| ಸದಾಶಿವ ಅವರು ಮಾತನಾಡಿ, ವಿದೇಶಿ ತಳಿ ಗುಣ ಹೆಚ್ಚಾದಂತೆ ರಾಸುಗಳ ರೋಗ ನಿರೋಧಕ ಶಕ್ತಿ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಸಾಮಥ್ರ್ಯ ಕಡಿಮೆಯಾಗುವ ಸಾಧ್ಯತೆಗಳಿರುವುದರಿಂದ ಹವಾಮಾನಕ್ಕೆ ಅನುಗುಣವಾಗಿ ತಳಿಯ ಆಯ್ಕೆ ಮಾಡಲು ರೈತರಿಗೆ ಅವಕಾಶವಿದೆ. ಆಯಾ ಗುಚ್ಚಗ್ರಾಮಗಳಲ್ಲಿ ಲಭ್ಯವಿರುವ ಅನಿರ್ಧಿಷ್ಟ ತಳಿಯ ಸ್ಥಳೀಯ ರಾಸುಗಳ ಸಂವರ್ಧನೆಗೆ ದೇಶೀಯ ತಳಿಗಳಾದ ಸಾಹಿವಾಲ್, ಗೀರ್ ಹಾಗೂ ಥಾರ್‍ಪಾರ್ಕರ್ ವೀರ್ಯನಳಿಕೆಯನ್ನು ಬಳಸಲಾಗುವುದು ಎಂದರು.
ಮಿಶ್ರತಳಿ ಹಸುಗಳು ದಿನಕ್ಕೆ 10ಲೀ. ಹಾಲು ಕರೆಯುವ ರಾಸುಗಳಿಗೆ ಮಧ್ಯಮ ಸಾಮರ್ಥ್ಯದ ವಿದೇಶಿ ತಳಿಗಳಾದ ಹೆಚ್.ಎಫ್.(ದಿನಕ್ಕೆ 20ಲೀ. ಹಾಲು ಕರೆಯುವ ಸಾಮರ್ಥ್ಯ) ಹಾಗೂ ಜರ್ಸಿ(ದಿನಕ್ಕೆ 15ಲೀ. ಹಾಲು ಕರೆಯುವ ಸಾಮಥ್ರ್ಯ) ವೀರ್ಯನಳಿಕೆಯನ್ನು ಬಳಸಲಾಗುವುದು. ರೈತರು ತಮ್ಮ ರಾಸುಗಳಿಗೆ ಯಾವ ವೀರ್ಯನಳಿಕೆಯನ್ನು ಹಾಕಿಸಬೇಕೆಂಬ ಬಗ್ಗೆ ಸ್ಥಳೀಯ ಪಶು ವೈದ್ಯಾಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು.
ಶಿವಮೊಗ್ಗ ತಾಲೂಕಿನ 47ಗ್ರಾಮಗಳಲ್ಲಿ 17ಗುಚ್ಚಗಳು, ಶಿಕಾರಿಪುರ ತಾಲೂಕಿನ 76ಗ್ರಾಮಗಳಲ್ಲಿ 17ಗುಚ್ಚಗಳು, ಭದ್ರಾವತಿ ತಾಲೂಕಿನ 52ಗ್ರಾಮಗಳಲ್ಲಿ 17 ಗ್ರಾಮಗುಚ್ಚಗಳು, ತೀರ್ಥಹಳ್ಳಿ ತಾಲೂಕಿನ 45ಗ್ರಾಮಗಳಲ್ಲಿ 13 ಗ್ರಾಮಗುಚ್ಚಗಳು, ಸೊರಬ ತಾಲೂಕಿನ 88ಗ್ರಾಮಗಳಲ್ಲಿ 13 ಗ್ರಾಮಗುಚ್ಚಗಳು, ಸಾಗರ ತಾಲೂಕಿನ 62ಗ್ರಾಮಗಳಲ್ಲಿ 11 ಗ್ರಾಮಗುಚ್ಚಗಳು ಹಾಗೂ ಹೊಸನಗರ ತಾಲೂಕಿನ 49ಗ್ರಾಮಗಳಲ್ಲಿ 09 ಗ್ರಾಮಗುಚ್ಚಗಳು ಸೇರಿದಂತೆ ಜಿಲ್ಲೆಯಾದ್ಯಂತ 419ಗ್ರಾಮಗಳಲ್ಲಿ ಒಟ್ಟು 100ಗ್ರಾಮಗುಚ್ಚಗಳನ್ನು ರಚಿಸಲಾಗಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಪಶು ವೈದ್ಯಕೀಯ ವiಹಾವಿದ್ಯಾಲಯದ ಡೀನ್ ಡಾ.ಪ್ರಕಾಶ್ ನಡೂರ, ಪಾಲಿಕ್ಲಿನಿಕ್‍ನ ಉಪನಿರ್ದೇಶಕ ಡಾ.ಇಂದ್ರಾನಾಯಕ್, ಪಶುವೈದ್ಯಾಧಿಕಾರಿಗಳಾದ ಡಾ.ಕಲ್ಲಪ್ಪ, ಡಾ.ನಾಗರಾಜ್, ಕೃಷಿ ವಿಜ್ಞಾನ ಕೇಂದ್ರದ ಡಾ.ಅಶೋಕ, ಕೆ.ಎಂ.ಎಫ್.ನ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.

error: Content is protected !!