ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ
ಶಿವಮೊಗ್ಗ ಜಿಲ್ಲಾ ಶಾಖೆ
ಶಿವಮೊಗ್ಗ, ಆ. 05ಃ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಿಟಿ ಕ್ಲಬ್ ಆವರಣದಲ್ಲಿ ನೂತನವಾಗಿ ರೂಪಿಸಲಾದ ಮೀಡಿಯಾ ಹೌಸ್ (ಪತ್ರಿಕಾಗೋಷ್ಟಿಗಳು, ಸಂವಾದ ಹಾಗೂ ಕಿರು ಕಾರ್ಯಕ್ರಮಗಳ ವೇದಿಕೆ) ಆ.07ರ ಭಾನುವಾರ ಬೆಳಿಗ್ಗೆ 9.30ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ. ವಿ. ಶಿವಕುಮಾರ್ ಹೇಳಿದರು.
ನಗರದ ಮೀಡಿಯಾ ಹೌಸ್‍ನಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ನೂತನವಾಗಿ ಆಧುನಿಕ ವ್ಯವಸ್ಥೆಯೊಂದಿಗೆ ರೂಪಿಸಲಾದ ಮೀಡಿಯಾ ಹೌಸ್‍ನ್ನು ಮಾಜಿ ಸಚಿವರು, ಶಿವಮೊಗ್ಗ ಕ್ಷೇತ್ರದ ಶಾಸಕರೂ ಆದ ಕೆ. ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ. ವೈ. ರಾಘವೇಂದ್ರ ದೀಪ ಪ್ರಜ್ವಲನಗೊಳಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಪಾಲ್ಗೊಳಲಿದ್ದಾರೆ ಎಂದರು.
ತಮ್ಮ ಅಧ್ಯಕ್ಷತೆಯ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿಯಾದ ಸೋಮಶೇಖರ ಕರಗೋಡುರವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ ಎಂದ ಅವರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಎಂ. ಶ್ರೀಕಾಂತ್, ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಮನೋಹರ ಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಹೆಚ್. ಆರ್. ಬಸವರಾಜಪ್ಪ, ಸಿಟಿ ಕ್ಲಬ್‍ನ ಕಾರ್ಯದರ್ಶಿ ಡಿ. ಜಿ. ಜಗತ್ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್, ವಿಶೇಷ ಆಹ್ವಾನಿತರಾದ ಜೆ. ಪದ್ಮನಾಭ್ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾದ ಭಂಡಿಗಡಿ ನಂಜುಂಡಪ್ಪ ಉಪಸ್ಥಿತರಿರಲಿದ್ದಾರೆ ಎಂದರು.
ಅಭಿಮಾನಿಗಳು, ಸಾರ್ವಜನಿಕ, ಸಾಮಾಜಿಕ, ಸಾಂಸ್ಕøತಿಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಮಿತಿಯ ನಿರ್ದೇಶಕ ಎನ್. ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ವೈದ್ಯ, ಆರ್.ಎಸ್. ಹಾಲಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿಗಳಾದ ಕೆ. ಆರ್. ಸೋಮನಾಥ್ ಉಪಸ್ಥಿತರಿದ್ದರು.
ಬಾಕ್ಸ್
ಈ ಮೀಡಿಯಾ ಹೌಸ್ ಮೂಲಕ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸುದ್ದಿಗಳನ್ನು ನೇರವಾಗಿ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳಿಗೆ ತಲುಪಿಸಲಾಗುವುದು. ಹಾಗೆಯೇ ಪತ್ರಿಕಾ ಗೋಷ್ಟಿಗಳು, ಸಂವಾದಗಳ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವ ಕಿರು ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುವುದು.
ಸಾರ್ವಜನಿಕರು, ಸಾಮಾಜಿಕ, ಸಾಂಸ್ಕøತಿಕ ಸಂಘ ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.
ಮೀಡಿಯಾ ಹೌಸ್‍ನಲ್ಲಿ ಪತ್ರಿಕಾಗೋಷ್ಟಿಗಳು ಹಾಗೂ ಕಾರ್ಯಕ್ರಮಗಳಿಗಾಗಿ ವಿ. ಟಿ. ಅರುಣ್ (91416 30025), ಕೆ. ಆರ್. ಸೋಮನಾಥ್ (94486 28133), ನಾಗರಾಜ ಶೆಣೈ (94493 40316) ವೈದ್ಯ (98444 56505)ರವರನ್ನು ಸಂಪರ್ಕಿಸಬಹುದು.