ಸಿರಿಧಾನ್ಯಗಳೆಂದರೆ ರಾಗಿ, ನವಣೆ, ಸಜ್ಜೆ, ಊದಲು, ಬರಗು, ಕೊರಲೆ ಮುಂತಾದವುಗಳು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಬಹಳ ಪ್ರಮಾಣದಲ್ಲಿ ಬೆಳೆಯುತ್ತಾರೆ. ಈ ಬೆಳೆಗಳು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಬಹುದು. ನಮ್ಮ ಪೂರ್ವಿಕರ ಆಹಾರವಾಗಿದ್ದು ಇದರಿಂದ ಸಾಕಸ್ಟು ಆರೋಗ್ಯಕರ ಲಾಭಗಳಿವೆ. ಇವು ಮಾನವನಿಗೆ ಮಾತ್ರ ಆಹಾರ ಭದ್ರತೆ ಒದಗಿಸುವದಲ್ಲದೆ, ಪ್ರಾಣಿಗಳಿಗೂ ಸಹ ಉತ್ತಮ ಆಹಾರವಾಗಿವೆ.
ಮುಂಬರುವ ದಿನಗಳಲ್ಲಿ ಜನರಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಕ್ಯಾನ್ಸರ್ ಅಂತಹ ರೋಗ ರುಜನೆಗಳು ದಿನದಿಂದ ದಿನಕ್ಕೆ ಹೆಚ್ಚುತನೆ ಇವೆ. ಅಲ್ಲದೆ, ಈಗಿನ ಪೀಳಿಗೆಗೆ ಜೀವನ ಶೈಲಿಯಿಂದಾಗುವ ಪೌಷ್ಟಿಕ ಅಸಮತೋಲನವನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ತಾಯಿದೆ, ಇದಕ್ಕೆ ಮುಖ್ಯ ಕಾರಣವೇನೆದರೆ ನಾವು ಸೇವಿಸುವ ಆಹಾರದಲ್ಲಿ ನಾರಿನಂಶ ಕಡಿಮೆ ಇರುವುದರಿಂದ. ಆದ್ದರಿಂದ ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚಿನ ಪ್ರಮಾಣದಲ್ಲಿ ಇರುವದರಿಂದ ಇದನ್ನು ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಸಾಕಸ್ಟು ಪ್ರಮಾಣದಲ್ಲಿ ಬಳಸುವದರಿಂದ ಅಪೌಷ್ಟಿಕತೆಯನ್ನು ತಡೆಯುವದಕ್ಕೆ ಸಹಾಯವಾಗುತ್ತದೆ. ಈ ಮೂಲಕ ನಿಮ್ಮ ಆರೋಗ್ಯ ಭಾಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಆಹಾರದಲ್ಲಿ ಸಿರಿ ಧಾನ್ಯಗಳ ಮಹತ್ವ
ದಿನನಿತ್ಯ ಬಳಸುವ ಅಕ್ಕಿ ಮತ್ತು ಗೋಧಿಗೆ ಹೋಲಿಸಿದಾಗ ಸಿರಿಧಾನ್ಯಗಳು ಹೆಚ್ಚು ಪ್ರೋಟೀನ್, ಕೊಬ್ಬು, ಸುಣ್ಣ, ನಾರು, ಖನಿಜ ಮತ್ತು ರಂಜಕ ಹೊಂದಿದೆ. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಶೇ. 1 ರಿಂದ 9 ಹೊಂದಿದ್ದು, ದೇಹದಲ್ಲಿರುವ ಕೊಲೆಸ್ಟೀರಲ್, ಟ್ರೈಗ್ಲಿಸಾರಾಯ್ಡ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯಕಾರವಾಗಿದೆ. ಹೃದಯ ರೋಗ ಹಾಗೂ ಹೆಚ್ಚಿನ ತೂಕ ಸಮಸ್ಯೆ ನಿವಾರಿಸುತ್ತದೆ. ಆದ್ದರಿಂದ ನವಣೆಯ ಉತ್ಪನ್ನಗಳು ಸಕ್ಕರೆ ರೋಗಿಗಳಿಗೆ ಅವಶ್ಯ. ರಾಗಿಯಲ್ಲಿ ಕೂಡ ಹೆಚ್ಚಿನ ಸುಣ್ಣದಂಶ ಮತ್ತು ರಂಜಕ ಹೊಂದಿರುವದರಿಂದ ಎಲಬು ಹಾಗೂ ಹಲ್ಲು ಗಟ್ಟಿಯಾಗಿರಲು ಅವಶ್ಯ. ಹೀಗಾಗಿ ರಾಗಿ ಕೂಡ ಚಿಕ್ಕ ಮಕ್ಕಳ ಆಹಾರದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಅದೇ ರೀತಿ ಸಜ್ಜೆ ಮತ್ತು ಸಾವೆಯಲ್ಲಿ ಹೆಚ್ಚಿನ ಕಬ್ಬಿಣ ಅಂಶ ಹೊಂದಿರುವದರಿಂದ ರಕ್ತ ಹೀನತೆ ತಡೆಗಟ್ಟುತ್ತದೆ.

“ರಾಗಿ ತಿಂದವ ನಿರೋಗಿ” ಏಕೆಂದರೆ ರಾಗಿ ಯಲ್ಲಿ ಕಡಿಮೆ ಕೊಬ್ಬಿನ ಅಂಶವಿದೆ ಪ್ರತಿ 100 ಗ್ರಾಂ ನಲ್ಲಿ 1.3 ಗ್ರಾಂ ಮಾತ್ರ, ಹೀಗಾಗಿ ಹೆಚ್ಚು ತೂಕವನ್ನು ಹೊಂದಿದವರಿಗೆ ರಾಗಿಯೂ ಉತ್ತಮ. ಅದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಸುಣ್ಣದಂಶ ಹೊಂದಿದ್ದು ಹಲ್ಲು ಹಾಗೂ ಎಲಬುಗಳು ಗಟ್ಟಿಯಾಗಲು ಅವಶ್ಯ. ರಾಗಿಯಲ್ಲಿ ಪ್ರತಿ 100 ಗ್ರಾಂ ಗೆ 344 ಮೀ.ಗ್ರಾಂ ಸುಣ್ಣದಂಶ ಇರುತದ್ದೆ.
ಸಿರಿಧಾನ್ಯಗಳ ಸಂಸ್ಕರಣೆ
ಈ ಪ್ರಸ್ತುತ ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಸುವ ದ್ರಷ್ಟಿಯಿಂದ ಸಮರ್ಪಕ ಕೊಯ್ಲೋತ್ತರ ಸಂಸ್ಕರಣೆ ಪದ್ಧತಿಗಳು ಹೆಚ್ಚಿನ ಸಹಾಯಕ್ಕೆ ಬರುತ್ತವೆ. ಈಗ ಬೆಳೆಯಲಾಗುತ್ತಿರುವ ಆಹಾರ ಧಾನ್ಯಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಾಥಮಿಕ ರೂಪದಲ್ಲಿ ಮಾರಾಟಮಡಲಾಗುತ್ತಿದೆ. ಇದರಿಂದ ರೈತರು ಕೂಡ ಸರಿಯಾದ ಲಾಭವನ್ನು ಪಡೆಯುತಿಲ್ಲ, ಪ್ರತಿವರ್ಷ ಭಾರತದಲ್ಲಿ ಸುಮಾರು 230 ಬಿಲಿಯನ್ ಮೌಲ್ಯದ ಆಹಾರ ಧಾನ್ಯಗಳು ಹಾಳಾಗುತ್ತಿವೆ. ಇದಕ್ಕೆ ಮುಖ್ಯ ಕಾರಣವೆನೆಂದರೆ, ಹೊಲಗಳಲ್ಲಿ ಸಂಗ್ರಹಣೆ, ನಿರ್ವಹಣೆ ಪದ್ಧತಿಗಳು ಹಾಗೂ ಇನ್ನಿತರೆ ಮೂಲಭೂತ ವ್ಯವಸ್ಥೆಗಳಾದ
ವಿದ್ಯುತ್, ಸಾಗಾಣಿಕೆ, ತಂಪು ಸಂಗ್ರಹಣೆ,ಸ್ಥಳೀಯ ಕೊಯ್ಲು ನಂತರದ ಜ್ಞಾನ ಬಳಕೆ ಇಲ್ಲದಿರುವುದು.ಬೇರೆ ಧಾನ್ಯಗಳಿಗೆ ಹೋಲಿಸಿದಾಗ ಸಿರಿಧಾನ್ಯಗಳ ಸಂಗ್ರಹಣಾ ಸಾಮರ್ಥ್ಯವು ಹೆಚ್ಚಿರುತ್ತದೆ. ಅಕ್ಕಿ ಹಾಗೂ ಗೋಧಿಗೆ ಬಳಸಲಾಗುವ ಮಷಿನ್ ಗಳನ್ನು ಸಿರಿಧಾನ್ಯಗಳಿಗೂ ಉಪಯೋಗಿಸುತ್ತಿದ್ದು, ಹೊರ ಕವಚ ಇನ್ನೂ ಉಳಿದಿರುವ ಧಾನ್ಯಗಳನ್ನು ಕುಟ್ಟಿ ಬೇರ್ಪಡಿಸಲಾಗುತ್ತದೆ. ಸಂಸ್ಕರಣಾ ಪದ್ಧತಿ ಹೆಚ್ಚಿನ ಸಮಯ ಹಾಗೂ ಶ್ರಮದಾಯಕವಾಗಿರುವದರಿಂದ ಸಿರಿಧಾನ್ಯಗಳಾದ ಸಾವೆ ಮತ್ತು ನವಣೆಯ ಉಪಯೋಗ ಕಡಿಮೆಯಾಗಿದೆ. ಇಂದಿನ ದಿನಗಳಲ್ಲಿ ಮಾಲ್ಟ್ ತಯ್ಯರಿಕೆಯಲ್ಲಿ ಸಿರಿ ಧಾನ್ಯಗಳ ಬಳಕೆಯನ್ನು ಕೈಗಾರಿಕೆ ಪ್ರಮಾಣದಲ್ಲಿ ಬಳಸಲಾಗಿದೆ.

ಸಿರಿಧಾನ್ಯಗಳ ಮೌಲ್ಯವರ್ಧನೆ
ಇಂದಿನ ಜಗತ್ತು ಬಹಳ ಮುಂದುವರೇದುದ್ದರಿಂದ ಬಹಳಷ್ಟು ಜನರು ತಯ್ಯಾರಿಸಿದ ಆಹಾರ ಪಧಾರ್ಥಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡುತ್ತಿದರೆ. ಈ ನಿಟ್ಟಿನಲ್ಲಿ ಸಿರಿಧಾನ್ಯಗಳ ಉತ್ಪನ್ನಗಳು ಕೂಡ ಬಹಳ ಪ್ರಸಿಧ ವಾಗಿವೆ. ಸಿರಿ ಧಾನ್ಯಗಳಿಂದ ಬಹಳಷ್ಟು ಮೌಲ್ಯವರ್ಧಿತ ಆಹಾರಗಳನ್ನು ತಯ್ಯಾರಿಸಬಹುದು ಅವುಗಳೆಂದರೆ ರಾಗಿ ಇಡ್ಲಿ, ರಾಗಿ ದೋಸಾ, ರಾಗಿ ಮಾಲ್ಟ್, ರಾಗಿ ಬಿಸ್ಕೆಟ್, ಅದೇ ರೀತಿ ಬೇರೆ ಸಿರಿ ಧಾನ್ಯಗಳಿಂದ ಅಂದರೆ ನವಣೆ, ಸಾವೆ, ಬರಗು ಇತ್ಯಾದಿ ಗಳಿಂದ ಮೌಲ್ಯವರ್ಧಿತ ಊತ್ಪನ್ನಗಳನ್ನೂ ತಯ್ಯರಿಸಬಹುದೂ. ಸಾಂಪ್ರದಾಯಿಕ ಆಹಾರಗಳಾದ ಹೋಳಿಗೆ, ಅನ್ನ, ಉಪ್ಪಿಟ್ಟು, ಬಿಸಿಬೇಳೆಬತ್, ದೋಸೆ ಮತ್ತು ಇಡ್ಲಿಗಳನ್ನು ತಯಾರಿಸಬಹುದು. ರೊಟ್ಟಿ, ಚಪಾತಿ, ಚಕ್ಕುಲಿ ಹಾಗೂ ಉಂಡೆ ತಯಾರಿಕೆಯಲ್ಲೂ ಸಹ ಇವುಗಳನ್ನು ಬೆರೆಸಬಹುದು. ಅದೇ ರೀತಿ ಹಲವಾರು ಸಂಸ್ಕರಣಾ ವಿಧಾನಗಳಿಂದ ಅಂದರೆ ಪಾಲಿಶ್ ಮಾಡುವುದು, ಹಿಟ್ಟು ಮಾಡುವುದು, ಮೊಳಕೆ ಕಟ್ಟುವುದು, ಅರಳು ಮಾಡುವುದು ಮತ್ತು ಹುರಿಯುವದರಿಂದ ಉತ್ತಮವಾದ ಆಹಾರವನ್ನು ಪಡೆಯಬಹುದು. ಸಿರಿಧಾನ್ಯಗಳಿಂದ ಮಾಲ್ಟಳನ್ನು ಮಾಡಿ ಅವುಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಈ ಮೌಲ್ಯವರ್ಧಿತ ಊತ್ಪನ್ನಗಳಿಂದ ಆರೋಗ್ಯಕ್ಕೆ ಬಹಳ ಊಪಯೋಗಗಳಿವೆ. ಸಾವೆ ಮತ್ತು ನವಣೆಯಲ್ಲಿ ಶೇ. 8 ರಷ್ಟು ನಾರಿನಂಶ ಇದೆ. ಹೀಗಾಗಿ ಹೆಚ್ಚು ತೂಕ ಇರುವವರಿಗೆ ಹಾಗೂ ಸಕ್ಕರೆ ರೋಗಿಗಳಿಗೆ ಇವ್ಗಳು ಸೂಕ್ತವಾದ ಆಹಾರವಾಗಿವೆ.ನಮ್ಮ ಪೂರ್ವಿಕರ ಕಾಲದಿಂದಲೂ ಸಿರಿಧಾನ್ಯಗಳು ಗ್ರಾಮೀಣ ಭಾರತದ ಆಹಾರ ಪದ್ಧತಿಯ ಅವಿಭಾಜ್ಯ ಅಂಗವಾಗಿವೆ. ಅಕ್ಕಿ ಮತ್ತು ಗೋಧಿಗೆ ಹೋಲಿಸಿದಾಗ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕತೆಯನ್ನು ಹೊಂದಿದ್ದರು ಜನಪ್ರಿಯತೆಯನ್ನು ಹೊಂದಿಲ್ಲ. ಪ್ರಸ್ತುತ ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಕಾರಣ ಅವುಗಳಲ್ಲಿರುವ ಪೌಷ್ಟಿಕಾಂಶದ ಮಹತ್ವದ ಅರಿವು ಜನರಲ್ಲಿ ಮೂಡತೊಡಗಿದೆ.

ಹೆಚ್ಚಿನ ಮಾಹಿಗಾಗಿ ಸಂಪಕಿ೯ಸಿ: 
Dr Raju G Teggelli
Senior Scientist and  Head
Krishi Vigyan Kendra (KVK), Kalaburagi-I,
Cell-9480696315
email-kvkglb.in@gmail.com
Web:kvkgulbarga.com
error: Content is protected !!