ಸಿಬ್ಬಂದಿಗಳ ಮೇಲೆ ದೌರ್ಜನ್ಯ ಖಂಡಿಸಿ ಮನವಿ ಪತ್ರ ಸಮರ್ಪಣೆ.
ಸಮುದಾಯ ಆರೋಗ್ಯ ಕೇಂದ್ರ ಹೊಳೆಹೊನ್ನೂರು ದಂತವೈದ್ಯ ಅಧಿಕಾರಿಗಳಾದ ಮೋಹನ್ ಅವರ ಮೇಲೆ ಆರೋಪಿಸಲಾಗಿರುವ ಸುಳ್ಳು ಆಪಾದನೆಯನ್ನು ಖಂಡಿಸಿ ಹಾಗೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಿಬ್ಬಂದಿಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಐ ಪಿ ಶಾಂತರಾಜ್ ರವರ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಬೃಹತ್ ಸಂಖ್ಯೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಮನವಿ ಪತ್ರವನ್ನು ಶಿವಮೊಗ್ಗ ಜಿಲ್ಲೆಯ ನೋಡಲ್ ಅಧಿಕಾರಿಗಳಾದ ಡಾಕ್ಟರ್ ಸೆಲ್ವಕುಮಾರ್ ಐ ಎ ಎಸ್ ಹಾಗು ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ನಾಗೇಂದ್ರ ಎಫ್ ಹೊನ್ನಳ್ಳಿ ರವರಿಗೆ ನೀಡಲಾಯಿತು ಈ ಸಂದರ್ಭದಲ್ಲಿ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಸಿದ್ದನಗೌಡ.ಪಿ , ವೈದ್ಯಕೀಯ ಸಂಘದ ಕಾರ್ಯದರ್ಶಿಗಳಾದ ಡಾಕ್ಟರ್ ನಾಗರಾಜ್ ನಾಯಕ್ ಹಾಗು ನೌಕರರ ಸಂಘದ ನಿರ್ದೇಶಕರಾದ ವೈ ಜೆ ಶಶಿಕುಮಾರ್, ಪ್ರಭಾಕರ,ಅಶೋಕ್, ಲಕ್ಷ್ಮಣ್ ಮತ್ತು ತಾಲೂಕ ಅಧ್ಯಕ್ಷರುಗಳು, ವಿವಿಧ ವೃತ್ತಿ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.