ಶಿವಮೊಗ್ಗ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿಯಲ್ಲಿರುವ ಸದಸ್ಯರ ಹೆಸರು ನವೀಕರಣ ಆಗಿರದ ಕಾರಣ ಹಾಗೂ ಅರ್ಹ ಪಡಿತರ ಚೀಟಿದಾರರನ್ನು ಗುರುತಿಸುವ ಸಲುವಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಲ್ಲಿ ಆಧಾರ್ ದೃಢೀಕರಣ (ಬಯೋಮೆಟ್ರಿಕ್) ಮಾಡಿಸುವಂತೆ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಪಡಿತರ ಚೀಟಿದಾರರು ದೃಢೀಕರಣ ಮಾಡಿಸುವ ಸಮಯದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿ ನೀಡ ತಕ್ಕದ್ದು. ವಯೋವೃದ್ಧರು, ಕುಷ್ಟರೋಗಿಗಳು, ಬೆರಳುಗಳಿಲ್ಲದ ಅಂಗವಿಕಲರು ಹಾಗೂ ಎಂಡೋ ಸಲ್ಫಾನ್ ಪೀಡಿತರನ್ನು ದೃಢೀಕರಣಗೊಳಿಸುವುದು ಸಾಧ್ಯವಾಗದಿರುವ ಕಾರಣ ಅವರುಗಳಿಗೆ ವಿನಾಯ್ತಿ ನೀಡಲಾಗಿದೆ. ದೃಢೀಕರಣಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಜೂನ್ ಆರಂಭದಿಂದ ಜುಲೈ ಮುಕ್ತಾಯದ ವರೆಗೂ ಆಧಾರ್ ದೃಢೀಕರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು ನಂತರ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

error: Content is protected !!