ಅಟಾರಿ ಬೆಂಗಳೂರು ನಿರ್ದೇಶಕರಾದ ಡಾ. ವಿ. ವೆಂಕಟ್‍ಸುಬ್ರಮಣ್ಯಯನ್ ಭಾಗವಹಿಸಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹೂ ತೋಟವನ್ನು ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ವೈವಿಧ್ಯಮಯ ಹೂ ತೋಟಗಳು, ಪೌಷ್ಟಿಕ ಕೈ ತೋಟಗಳು ಹಾಗೂ ರೈತರಿಗೆ ಆಧಾಯ ತರಬಲ್ಲ ಬೆಳೆ ಯೋಜನೆಯಗಳನ್ನು ರೂಪಿಸಲು ಸಲಹೆ ನೀಡಿದರು. ಸೆಪ್ಟೆಂಬರ್ 2 ರಂದು ವಿಶ್ವ ತೆಂಗು ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು, ಜಗತ್ತಿನಲ್ಲಿ ತೆಂಗಿಗೆ ವಿಶೇಷ ಸ್ಥಾನಮಾನವಿದೆ. ಏಷ್ಯ ಖಂಡವು ವೈವಿಧ್ಯಮಯವಾದ ತೆಂಗು ತಳಿಯನ್ನು ಹೊಂದಿದ್ದು. ಕರ್ನಾಟಕದ ಕರಾವಳಿ, ಮಲೆನಾಡು, ಬಯಲುಸೀಮೆ, ಮೈದಾನ ಪ್ರದೇಶಗಳಲ್ಲಿ ಸ್ಥಳೀಯ ಹವಾಗುಣಕ್ಕೆ ತಳಿಗಳನ್ನು ಬೆಳೆಸಲಾಗುತ್ತಿದೆ. ಉತ್ತಮ ಆರೋಗ್ಯಕ್ಕೆ ಗ್ಲೋಕೋಸ್ ವಿಟಾಮಿನ್ ಖನಿಜಾಂಶವುಳ್ಳ ಎಳೆನೀರು ತಳಿಗಳು ಈಗ ಕರ್ನಾಟಕ ಮತ್ತು ಕೆರಳ ಭಾಗದಲ್ಲಿ ಲಭ್ಯವಿದ್ದು, ಯೋಗ್ಯ ತಳಿಗಳನ್ನು ರೈತರು ಬೆಳೆಸಬಹುದಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಗೆ, ದೈನಂದಿನ ಅಡುಗೆ ಪಧಾರ್ಥಗಳಲ್ಲಿ ಹಾಗೂ ಬೇಕರಿ ಉತ್ಪನ್ನಗಳಲ್ಲಿ ತೆಂಗಿನ ಬಳಕೆಯು ಯೇತೆಚ್ಚವಾಗಿ ಬಳಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿ, ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ)ರಾದ ಡಾ. ಸುರೇಶ ಪಾಟೀಲ್, ವಲಯ ಸಂಶೋಧನಾ ಕೇಂದ್ರ ನಿರ್ದೇಶಕರಾದ ಡಾ. ಎಂ.ಎಂ. ಧನೋಜಿ ಹಾಗೂ ಆವರಣದ ಕೃಷಿ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!