ಶಿವಮೊಗ್ಗ:ರಾಜ್ಯದಆರ್ಥಿಕ ಪರಿಸ್ಥಿತಿ ಸದೃಢಗೊಳಿಸುವ ದಿಕ್ಸೂಚಿ ಬಜೆಟ್ ಮಂಡನೆಯಾಗಿದೆಎಂದು ವಿಧಾನ ಪರಿಷತ್ ಸದಸ್ಯಡಿ.ಎಸ್.ಅರುಣ್ ಹೇಳಿದರು.
ವಿಧಾನ ಪರಿಷತ್‍ಅಧಿವೇಶನದಲ್ಲಿ ಬಜೆಟ್‍ಕುರಿತು ಮಾತನಾಡಿ, ಇಡೀರಾಜ್ಯವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ಮಂಡಿಸುವ ಬಜೆಟ್ ಮೇಲೆ ಅಪಾರ ನೀರಿಕ್ಷೆಇಟ್ಟುಕೊಂಡಿತ್ತು. ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ಪ್ರವಾಸೋದ್ಯಮ ಹೀಗೆ ಎಲ್ಲ ವಲಯಗಳಿಗೂ ವಿಶೇಷ ಗಮನ ವಹಿಸಿ ಬಜೆಟ್ ಮಂಡಿಸಿರುವುದು ಅಭಿನಂದನಾರ್ಹಎಂದು ತಿಳಿಸಿದರು.
2022-23ನೇ ಸಾಲಿನ ಬಜೆಟ್‍ಗಾತ್ರ 2,65,720ಕೋಟಿರೂ. ಆಗಿದ್ದು, ಕಳೆದ ವರ್ಷದ ಬಜೆಟ್‍ಗಿಂತ 19,513 ಕೋಟಿರೂ.ಜಾಸ್ತಿಆಗಿದೆ. ಕೃಷಿ, ನೀರಾವರಿ ಹಾಗೂ ಅಭಿವೃದ್ಧಿ ಚಿಂತನೆಗಳಿಂದ ಕೂಡಿದ ಬಜೆಟ್‍ಇದಾಗಿದ್ದು, ಜಲಾಶಯಗಳ ಕುರಿತಾದ ಯೋಜನೆಗಳಿಗೆ ಅನುದಾನಒದಗಿಸುವ ಮೂಲಕ ರಾಜ್ಯದ ನೀರಾವರಿಯೋಜನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆಎಂದರು.
ಎರಡು ವರ್ಷದಿಂದಕೋವಿಡ್ ಮಹಾಮಾರಿಯಿಂದಆರ್ಥಿಕತೆಕುಂಠಿತವಾಗಿತ್ತು.ಭಾರತ ಹಾಗೂ ವಿಶ್ವದಆರ್ಥಿಕತೆಯೇ ತತ್ತರಿಸಿದೆ.ಇಂತಹಕಠಿಣ ಪರಿಸ್ಥಿತಿಯಲ್ಲೂ ಆರ್ಥಿಕತೆ ಸದೃಢಗೊಳಿಸುವ ನಿಟ್ಟಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಬಜೆಟ್ ಮಂಡಿಸಲಾಗಿದೆಎಂದು ಹೇಳಿದರು.
ಜನಸಾಮಾನ್ಯರ ಮೇಲೆ ಹೆಚ್ಚಿನತೆರಿಗೆಯನ್ನು ಹಾಕದೇ ಹೊಸ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್ ಮಂಡಿಸಿದ್ದು, ಗ್ರಾಮಾಂತರ ಭಾಗದಜನರಿಗೆ, ರೈತರು ಹಾಗೂ ಲಕ್ಷಾಂತರಜನರಿಗೆಉಪಯೋಗಆಗುತ್ತಿದ್ದ ಯಶಸ್ವಿನಿ ಯೋಜನೆಯನ್ನು ಪುನಃ ತರುತ್ತಿರುವುದುಅತ್ಯಂತಉಪಯುಕ್ತವಾಗಲಿದೆ. ಪರಿಸರ ಸಂರಕ್ಷಣೆಗೆಆದ್ಯತೆ ನೀಡಲಾಗಿದೆಎಂದು ಹೇಳಿದರು.
ನೇಕಾರ ಸಮ್ಮಾನ್‍ಯೋಜನೆಯಡಿ ನೋಂದಾಯಿತರೈತರಿಗೆ ಕೈಮಗ್ಗ, ನೇಕಾರರ ವಾರ್ಷಿಕ ನೆರವು 5 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.ನೇಕಾರರುರಾಜ್ಯ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆಯುವ ಸಾಲದ ಮೇಲೆ ಶೇ.8ರಷ್ಟು ಬಡ್ಡಿ ಸಹಾಯಧನದ ಸೌಲಭ್ಯತುಂಬಾಉತ್ತಮವಾಗಿದೆಎಂದು ತಿಳಿಸಿದರು.
ರಾಜ್ಯ ಹೆದ್ದಾರಿಅಭಿವೃದ್ಧಿಯೋಜನೆ ಹಂತ 4ರ ಘಟ್ಟ 2ರಡಿ 2,275 ಕೀಮಿ ರಾಜ್ಯ ಹೆದ್ದಾರಿಅಭಿವೃದ್ಧಿ ಮಾಡಲುಒತ್ತು ನೀಡಲಾಗಿದೆ. ರಸ್ತೆ ಮತ್ತುರೈಲು ಮಾರ್ಗಅಭಿವೃದ್ಧಿಯಿಂದರಾಜ್ಯದಅಭಿವೃದ್ಧಿ ಪ್ರಗತಿಯಲ್ಲಿ ಮಹತ್ತರ ಸಾಧನೆ ಮಾಡುವುದು ನಿಶ್ಚಿತವಾಗಲಿದೆ.ರಾಷ್ಟ್ರೀಯ ಹೆದ್ದಾರಿಅಕ್ಕಪಕ್ಕದಲ್ಲಿರುವ ನದಿಗಳ ಹೂಳೆತ್ತುವಿಕೆ ಮತ್ತು ಹೊಸ ಕೆರೆ ನಿರ್ಮಿಸಲುರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಭಾಗಿತ್ವದಲ್ಲಿ ಹೊಸ ಯೋಜನೆ ಬಜೆಟ್‍ನಲ್ಲಿದೆಎಂದರು.
ಗ್ರಾಮೀಣ ಭಾಗದಲ್ಲಿಜಲಜೀವನ್ ಮಿಷನ್‍ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ನಳ ಸಂಪರ್ಕಒದಗಿಸುವಯೋಜನೆ ಅನುಷ್ಠಾನಗೊಳ್ಳಲಿದೆ.ರಾಜ್ಯ ಸರ್ಕಾರದಅನುದಾನದಲ್ಲಿಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ಕಾಮಗಾರಿಗಾಗಿಒತ್ತು ನೀಡಲಾಗಿದೆ. ಮಳೆಗಾಲದಲ್ಲಿ ಹಾನಿಯಾಗಿರುವ ರಸ್ತೆಗಳ ಸುಧಾರಣೆಗೂಅನುದಾನಕೊಟ್ಟಿರುವುದುಗಮನಾರ್ಹಎಂದು ಹೇಳಿದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಉದ್ಯೋಗ, ಮಹಿಳಾ ಸಬಲೀಕರಣಕ್ಕೆಆದ್ಯತೆಕೊಡಲಾಗಿದೆ.ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ದಿಸೆಯಲ್ಲಿಕ್ರಮ ವಹಿಸಲಾಗಿದೆ.ರೈತರಆದ್ಯತೆ ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಗಿದೆ. ರೈತಶಕ್ತಿ ನೂತನಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ, ಬಡ್ಡಿರೀಯಾಯಿತಿಯೋಜನೆಯಡಿ 33 ಲಕ್ಷರೈತರಿಗೆ ಸಾಲ ವಿತರಣೆ, ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ ವಹಿಸಲಾಗಿದೆಎಂದು ತಿಳಿಸಿದರು.
ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಲು ಹಾಗೂ ಮೂಲಸೌಕರ್ಯಗಳನ್ನು ಹೆಚ್ಚಿಸಲುಉನ್ನತೀಕರಣಕ್ಕೆಒತ್ತು ನೀಡಲಾಗಿದೆ.ಒಟ್ಟಾರೆಯಾಗಿಅಭಿವೃದ್ಧಿ ಯೋಜನೆಗಳ ಜತೆಯಲ್ಲಿಉತ್ತಮ ಬಜೆಟ್ ಮಂಡನೆಯಾಗಿದೆ.ಉತ್ತರಕರ್ನಾಟಕ, ಕರಾವಳಿ, ಮಲೆನಾಡು, ಬೆಂಗಳೂರು, ಮೈಸೂರು ಸೇರಿದಂತೆಎಲ್ಲ ಭಾಗಗಳಿಗೂ ಆದ್ಯತೆ ನೀಡಲಾಗಿದೆ.ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಾಗಿದೆ ಎಂದರು.
2009-14ರ ಅವಧಿಯಲ್ಲಿ ಕರ್ನಾಟಕದ ತೆರಿಗೆ ಹಂಚಿಕೆಯು 54,396 ಕೋಟಿ ರೂ. ಇದ್ದು, 2014-19ರ ಅವಧಿಯಲ್ಲಿ 1.35 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ. ಕೇಂದ್ರದ ಅನುದಾನ ಹಂಚಿಕೆಯು 2009-14ರಲ್ಲಿ 39,919 ಕೋಟಿ ರೂ. ಇದ್ದು, 2014-19ರಲ್ಲಿ 91,374 ಕೋಟಿ ರೂ.ಗೆ ಏರಿಕೆಯಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಅವಧಿಗಿಂತ ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲೇ ಹೆಚ್ಚಿನ ಹಣವನ್ನು ಕೇಂದ್ರದಲ್ಲಿ ನೇತೃತ್ವ ವಹಿಸಿರುವ ಬಿಜೆಪಿ ಸರ್ಕಾರ ನೀಡಿದೆ. ಕೇಂದ್ರ ನೇತೃತ್ವದ ಬಿಜೆಪಿ ಸರ್ಕಾರವು ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಬೆಂಬಲ ನೀಡುತ್ತ ಬರುತ್ತಿದೆ ಎಂದು ತಿಳಿಸಿದರು.
