ದೇಶದಾದ್ಯಂತ ಇಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಮಲೆನಾಡಿನ ಸೆರಗಿನ ಶಿವಮೊಗ್ಗ ಸಮೀಪ ಅಬ್ಬಲಗೆರೆ ಈಶ್ವರವನದಲ್ಲಿ ವಿನೂತನ ರೀತಿಯಲ್ಲಿ ಶಿವರಾತ್ರಿ ಆಚರಿಸಲಾಗುತ್ತಿದೆ. 2 ಎಕರೆ ಜಾಗದಲ್ಲಿ ಈಶ್ವರ ವನ ನಿಮಿ೯ಸಿರುವ ಕೃಷಿಕರು ಈಶ್ವರನನ್ನು ಆರಾಧಿಸುವ ಪತ್ರೆ ಪುಷ್ಪ ಹಾಗು ಮರಗಳನ್ನು ಬೆಳೆಸಿದ್ದಾರೆ . ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ 120 ಕ್ಕೂ ಹೆಚ್ಚು ಪ್ರಭೇದಗಳ ನೂರಾರು ವೃಕ್ಷಗಳು ಇಲ್ಲಿ ಬೆಳೆದು ನಿಂತಿವೆ. ಪ್ರತಿ ವೃಕ್ಷಕ್ಕೂ ಶಿವನ ಆರಾಧನೆಗೂ ಇರುವ ಸಂಬಂಧದ ನಾಮ ಫಲಕಗಳನ್ನು ಮರಗಳಿಗೆ ಅಳವಡಿಸಲಾಗಿದೆ.

ಮಹಾ ಶಿವರಾತ್ರಿಯ ಈ ಸಂಧಭ೯ದಲ್ಲಿ ಶಿವ ಪ್ರಕೃತಿಯ ಪ್ರತಿ ರೂಪ ವೃಕ್ಷ ಪತಿ ಪಶು ಪತಿ ಎಂದೆಲ್ಲಾ ಕರೆಯಲಾಗುತ್ತದೆ ಎನ್ನುವ ಮಹತ್ವವನ್ನು ಜನತೆಗೆ ಪರಿಚಯಿಸಿ ಪ್ರಕೃತಿಕ ಕಾಡಿನ ಮಧ್ಯೆ ಸ್ಥಾಪಿಸಿರುವ ಈಶ್ವರ ವನದ ಶಿವಲಿಂಗಕ್ಕೆ ಎಲ್ಲರಿಗೂ ಮುಕ್ತವಾಗಿ ಅಭಿಷೇಕ ಮಾಡುವ ಅವಕಾಶ ನೀಡಲಾಗಿದೆ. ಶಿವಮೊಗ್ಗದಲ್ಲಿ ವಿನೂತವಾಗಿ ಪ್ರಕೃತಿ ಪ್ರೀತಿಯೊಂದಿಗೆ ಶಿವಸ್ಥುತಿಯ ಮೂಲಕ ಆಚರಣೆ ನಡೆಸಲಾಗುತ್ತದೆ.

ಡಾ// ಶ್ರೀನಿವಾಸ ಮೂತಿ೯ ಪ್ರಕೃತಿ ಆರಾಧಕ ಮಾಧ್ಯದೊಂದಿಗೆ ಮಾತನಾಡಿ ಸಹಜ ಕಾಡು ಅವನತಿಯ ಅಂಚಿನಲ್ಲಿದೆ ಕಾಡು ನಿಮಿ೯ಸುವ ಪರಿಸ್ತತಿ ಎದುರಾಗಿದೆ. ಪಕೃತಿ ದೇವರು ಮತ್ತು ಮಾನವ ಈ ಸಂಬಂಧವನ್ನು ಪರಿಚಯಿಸುವ ವಿಶಿಷ್ಟವಾದ ಶಿವರಾತ್ರಿ ಆಚರಣೆ ಅಬ್ಬಲಗೆರೆಯ ಈಶ್ವರ ವನದಲ್ಲಿ ಕೃಷಿಕ ನಾಗೇಶ ಆಯೋಜಿಸಿ ಯುವಜನರಿಗೆ ಮಾದರಿಯಾಗಿದ್ದಾರೆ.

ಪವಿತ್ರ ಶಿಕ್ಷಕಿ ಮಾಧಯಮದೊಂದಿಗೆ ಮಾತನಾಡಿ ಇಂದಿನ ಯುವ ಪೀಳಿಗೆಗೆ ಸಂಸ್ಕೃತಿ ಮತ್ತು ಸಂಸ್ಕಾರದ ಮಹತ್ವವನ್ನು ಪರಿಚಯಿಸಬೇಕಾದ ಅವಶ್ಯಕತೆ ಇದೆ. ಈಶ್ವರ ವನದ ಮಹಾಶಿವರಾತ್ರಿ ದೇವರು ಮತ್ತು ಪ್ರಕೃತಿಯ ಮಹತ್ವವನ್ನು ಅನಾವರಣ ಗೊಳಿಸಿದೆ.

ನಾಗೇಶ್‌ ಈಶ್ವರ ವನದ ಮುಖ್ಯಸ್ಥರು ಅಬ್ಬಲಗೆರೆ ಮಾಧಯದೊಂದೊಗೆ ಮಾತನಾಡಿ ಶಿವರಾತ್ರಿಯನ್ನು ಪ್ರಕೃತಿಯ ಮಧ್ಯೆ ಆಚರಿಸಲಾಗುತ್ತಿದೆ. ತಲತಲಾಂತರದಿದ ನಮ್ಮಜನರು ಶಿವಪೂಜೆಗೆ ಬಳಸುತ್ತಿದ್ದ ವೃಕ್ಷ ಪತ್ರೆ ಎಲ್ಲವನ್ನೂ ಇಲ್ಲಿ ಬೆಳೆಸಾಲಾಗಿದೆ, ಅವುಗಳನ್ನು ಜನತೆಗೆ ಪರಿಚಯಿಸಿ ತಾವೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಪರಿಸರದ ಜಾನವನ್ನು ತಿಳಿದುಕೊಳ್ಳುವೂದರ ಮೂಲಕ ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ.

error: Content is protected !!