ಶಿವಮೊಗ್ಗ ಡಿಸೆಂಬರ್ 22 : ಶಿವಮೊಗ್ಗ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮನೆ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ಯಾವುದೇ ಖಾಸಗಿ ಸಂಸ್ಥೆ, ಎನ್ಜಿಓ ಅಥವಾ ಯಾವುದೇ ವ್ಯಕ್ತಿಯನ್ನು ನಿಯೋಜಿಸಲಾಗಿಲ್ಲ. ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಇದಕ್ಕೆಂದು ನಿಯೋಜಸಲಾದ ಸರ್ಕಾರಿ ಅಧಿಕಾರಿ/ಸಿಬ್ಬಂದಿಗಳಿಂದ ಮಾತ್ರ ಸಂಗ್ರಹಿಸಲಾಗುತ್ತಿದೆ.
ಯಾವುದೇ ವ್ಯಕ್ತಿ/ಎನ್ಜಿಓ/ಖಾಸಗಿ ಸಂಸ್ಥೆ/ಕಂಪನಿ/ ಟ್ರಸ್ಟ್ ಗಳು ಸಾರ್ವಜನಿಕರಿಂದ ಅವರ ಖಾಸಗಿ ಅಥವಾ ಯಾವುದೇ ರೀತಿಯ ದತ್ತಾಂಶಗಳನ್ನು ಯಾವುದೇ ರೀತಿಯಲ್ಲಿ ಸಂಗ್ರಹಿಸುವುದರಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅವರ ವಿರುದ್ದ ಸಕ್ಷಮ ಶಾಸನದ ಪ್ರಕಾರ ಮತ್ತು ಅವಶ್ಯವಿದ್ದಲ್ಲಿ ಐಪಿಸಿ ಸೆಕ್ಷನ್ 188 ರಡಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು.
ಈ ರೀತಿಯ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಟೋಲ್ಫ್ರೀ ಸಂಖ್ಯೆ 1950 ಮೂಲಕ ಜಿಲ್ಲಾಡಳಿತಕ್ಕೆ ದೂರು ನೀಡಬಹುದು. ಸಾರ್ವಜನಿಕರು ಶಾಸನಬದ್ದ ನಮೂನೆಗಳು ಮತ್ತು ಭಾರತೀಯ ಚುನಾವಣಾ ಆಯೋಗದ ಅರ್ಜಿಗಳಲ್ಲಿ ಮಾತ್ರ ಜಿಲ್ಲಾಡಳಿತದಿಂದ ನಿಯೋಜಿತರಾದ ಅಧಿಕಾರಿಗಳಿಗೆ, ಅಧಿಕೃತ ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದ್ದಾರೆ.
