ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಶಿವಮೊಗ್ಗ ಆವರಣದ, ಸೂಕ್ಷ್ಮಜೀವಿಶಾಸ್ತ್ರ ವಿಭಾಗದಲ್ಲಿ ದಿನಾಂಕ: 18.01.2023 ರಿಂದ 19.01.2023 ರವರೆಗೆ ಎರಡು ದಿನಗಳ “ಅಣಬೆ ಕೃಷಿ ತಾಂತ್ರಿಕತೆಯ” ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು, ತರಬೇತಿ ಶುಲ್ಕ ಪ್ರತಿ ದಿನ ರೂ.150/- ರಂತೆ 2 ದಿನಗಳಿಗೆ ಒಟ್ಟು ರೂ.300/- ಗಳನ್ನು ಪಾವತಿಸಿ, ದಿನಾಂಕ 17.01.2023ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.
ಸೂಚನೆ:

  1. ಮೊದಲು ನೊಂದಾಯಿಸಿದವರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್‍ಕಾರ್ಡ್‍ನ್ನು ತರಬೇಕು.
  3. ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶ.
  4. ಕಡ್ಡಾಯವಾಗಿ ಮಾಸ್ಕ ಧರಿಸಬೇಕು

ಸಂಪರ್ಕಿಸುವ ವಿಳಾಸ:
ಡಾ. ಶಿವಲೀಲಾ ಪಾಟೀಲ.
ಕೃಷಿ ಮಹಾವಿದ್ಯಾಲಯ, ನವಿಲೆ, ಶಿವಮೊಗ್ಗ
ಮೊಬೈಲ್ :7411680410

error: Content is protected !!