ಅಡಿಕೆ ಸಿಪ್ಪೆಯಿಂದ ಸುಧಾರಿತ ಮಿಶ್ರಗೊಬ್ಬರ ತಯಾರಿಕೆ

ವಿಷೇಷವಾಗಿ ಮಲೆನಾಡು ಹಾಗು ತೀರ ಪ್ರದೇಶದ ಅಡಿಕೆ ಬೆಳೆಗೆ ಈ ಸುಧಾರಿತ ಮಿಶ್ರಗೊಬ್ಬರದ ಬಳಕೆ ತುಂಬಾ ಅವಶ್ಯಕ, ಹಾಗು ಅನಿವಾಯ೯ವೂ ಕೂಡ ಹೌದು. ಸುಧಾರಿತ ಸಾವಯವ ಮಿಶ್ರಗೊಬ್ಬರ ಬಹು ಬೇಡಿಕೆ ಹಾಗು ದುಬಾರಿಯಾಗಿದೆ. ರೈತರು ಇತ್ತೀಚಿನ ದಿನಗಳಲ್ಲಿ ರಾಸಾಯಿನಿಕ ಗೊಬ್ಬರಗಳ ಕಡೆ ಹೋಗುತ್ತಿದ್ದು, ಮಣ್ಣಿನ ಗುಣ ಮಟ್ಟ ಹಾಗು ರಚನೆ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯ೯ ಹಾಗು ಲಘು ಪೋಷಕಾಂಶಗಳ ಸರಬರಾಜಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ.
ಮಲೆನಾಡು ಹಾಗು ತೀರ ಪ್ರದೇಶದ ರೈತರು ತಮ್ಮಲ್ಲಿ ಲಭ್ಯವಿರುವ ತ್ಯಾಜ್ಯವಸ್ತುಗಳನ್ನು ಬಳಸಿಕೊಂಡು ಸುಧಾರಿತ ಮಿಶ್ರಗೊಬ್ಬರ ತಯಾರಿಕೆ ಮಾಡಿಕೊಳ್ಳುವುದು ಸೂಕ್ತ.
ಮಲೆನಾಡು ಹಾಗು ತೀರ ಪ್ರದೇಶದ ರೈತರು ತಮ್ಮ ತೋಟದಲ್ಲಿ ಬೆಳೆದಿರುವ ಹಸಿ ಹಾಗು ಚಾಲಿ ಅಡಿಕೆಯನ್ನು ಒಣ ಅಡಿಕೆಯಿಂದ ಬೇಪ೯ಡಿಸಿದಾಗ ಅಧಿಕ ಪ್ರಮಾಣದ ಅಡಿಕೆ ಸಿಪ್ಪೆಯು ದೊರೆಯುತ್ತದೆ. ತಾಂತ್ರಿಕ ಮಾಹಿತಿಯ ಪ್ರಕಾರ ಪ್ರತೀ ಹೆಕ್ಟೇರಗೆ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಸಿಪ್ಪೆ ಲಭ್ಯವಿರುತ್ತದೆ. ಈ ತ್ಯಾಜ್ಯವನ್ನು ಹಾಗು ಅದರ ಮಹತ್ವವನ್ನು ಅರಿಯದೇ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದ್ದು ನಂತರ ಅದನ್ನು ಬೆಂಕಿಗಾಹುತಿ ಮಾಡಲಾಗುಗುತ್ತಿದೆ. ಆದ್ದರಿಂದ ತಮ್ಮಲ್ಲಿ ಸಿಗುವ ಅಡಿಕೆ ಸಿಪ್ಪೆಯನ್ನು ಉಪಯೋಗಿಸಿಕೊಂಡು ಸರಿಯಾದ ರೀತಿಯಲ್ಲಿ ಕ್ರಮ ಬಧ್ದವಾಗಿ ಮಿಶ್ರಗೊಬ್ಬರವನ್ನು ಮಾಡಿಕೊಂಡು ತನ್ನ ಕೃಷಿ ಭೂಮಿಗೆ ಹಾಕುವುದರಿಂದ ಉತ್ತಮ ಪ್ರಯೋಜನವನ್ನು ಕಾಣಬಹುದು. ಸರಿ ಸುಮಾರು ೫೦ರಿಂದ ೬೦ ದಿನಗಳು ಒಳಗಾಗಿ ಅಡಿಕೆ ಸಿಪ್ಪೆಯನ್ನು ಉಪಯೋಗಿಸಿ ಮಿಶ್ರಗೊಬ್ಬರವನ್ನು ತಯಾರಿಸಬಹುದಾಗಿದೆ.


ಮಿಶ್ರಗೊಬ್ಬರ ತಯಾರಿಕೆ:
ಒಂದು ಎಕರೆ ಪ್ರದೇಶದ ಅಡಿಕೆ ತೋಟದಿಂದ ಬರುವ ಹಸಿ,ಚಾಲಿ ಅಡಿಕೆ, ಒಣ ಅಡಿಕೆಯ ಸಿಪ್ಪೆಯು ಗೊಬ್ಬರ ತಯಾರಿಕೆಗೆ ಸಾಕಾಗುತ್ತದೆ. ರೈತರು ಗೊಬ್ಬರ ತಯಾರಿಕೆಗೆ ಸಿಮೆಂಟ್ನಿಂದ ಅಥವಾ ಮಣ್ಣಿನಿಂದ ತಯಾರಿಸಿದ ಇಟ್ಟಿಗೆಯಿಂದ ತೊಟ್ಟಿಯನ್ನು ಅವರ ಅನುಕೂಲಕ್ಕೆ ಮಾಡಿಕೊಂಡು ತೊಟ್ಟಿಯಲ್ಲಿ ಗಾಳಿಯಾಡುವುದಕ್ಕೆ ಸ್ಥಳವಾಕಾವನ್ನು ಸುತ್ತಲೂ ಬಿಟ್ಟುಕೊಂಡು ಸುಮಾರು ೧೦ಕ್ಕೂ ಹೆಚ್ಚು ವಷ೯ಕಾಲ ಈ ತೊಟ್ಟಿಯಿಂದ ಗೊಬ್ಬರವನ್ನು ಪಡೆಯಬಹುದಾಗಿದೆ.
ಗೊಬ್ಬರದ ತಯಾರಿಕೆಗಾಗಿ ಒಣಗಿದ ಅಡಿಕೆ ಸಿಪ್ಪೆಯನ್ನು ಮಾತ್ರ ಉಪಯೋಗಿಸಬೇಕು. ತೊಟ್ಟಿಯ ತಳ ಭಾಗದಲ್ಲಿ ತೆಳುವಾಗಿ ಎಲೆಯನ್ನು ಹರಡಿ,ನಂತರ ಕೆಂಪು ಮಣ್ಣನ್ನು ಹರಡಿ ತೊಟಿಯಲ್ಲಿ ೧/೩ಭಾಗ ಅಡಿಕೆ ಸಿಪ್ಪಯನ್ನು ತುಂಬಬೇಕು.ನಂತರ ೧ ಕೆ.ಜಿ ಸೂಕ್ಷ್ಮಾಣು ಜೀವಿ ಗೊಬ್ಬರ ಮಿಶ್ರಣ,೧ಕೆ.ಜಿ ಯೂರಿಯಾ ಹಾಗು ಸೆಗಣಿ ಬಗ್ಗಡ ಸಿಂಪಡಿಸಬೇಕು.ನಂತರ ೨ ಬಾರಿ ಅಡಿಕೆ ಸಿಪ್ಪಯನ್ನು ಹಾಕಿ ತೊಟ್ಟಿಯ ಮೇಲ್ಬಾಗದಲ್ಲಿ ಹಾಕಿ ,ಬಿಸಿಲು ಬೀಳದಂತೆ ಚಪ್ಪರವನ್ನು ಹಾಕಿ ಸೂಯನ ಬಿಸಿಲು ಭಾಗಶ: ಬೀಳದಂತೆ ಮಾಡಬೇಕು.ಹಾಗು ತೊಟ್ಟಿಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು ಪ್ರತೀ ತಿಂಗಳು ತೊಟ್ಟಿಯಲ್ಲಿರುವ ಅಡಿಕೆ ಸಿಪ್ಪೆಯನ್ನು ತಿರುಗಿಸಬೇಕು. ೩ ತಿಂಗಳ ನಂತರ ಗೊಬ್ಬರದ ಗುಂಡಿಗೆ ಪ್ರತಿ ಗುಂಡಿಗೆ ೫ರಿಂದ ೬ಕೆ.ಜಿ ಎರೆಹುಳವನ್ನು ಬಿಡಬೇಕು. ಪ್ರತೀವಾರ ಸೆಗಣಿ ಬಗ್ಗಡವನ್ನು ಹಾಕಿ ತೇವಾಂಶವನ್ನು ಕಾಪಾಡುತ್ತಿರಬೇಕು.
ಈ ರೀತಿಯ ಎಲ್ಲಾ ಪ್ರಕ್ರಿಯೆಗಳನ್ನು ಮಾಡಿದ ೬ತಿಂಗಳಲ್ಲಿ ಉತ್ಕೃಷ್ಟವಾದ ಗೊಬ್ಬರ ತಯಾರಾಗುತ್ತದೆ. ಹಾಗು ಬಳಸಲು ಯೋಗ್ಯ.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ

Dr. B.R. GURUMURTHY
Professor of Crop Physiology
ZAHRS, UAHS, 
SHIMOGA – 577 225

Mobile : +91-805048333

error: Content is protected !!