News Next

ಜಿಲ್ಲಾ ತೋಟಗಾರಿಕೆ ಇಲಾಖೆಯು ರೈತರಿಗೆ ಅಡಿಕೆ ಬೆಳೆಯಲ್ಲಿ ಕೈಗೊಳ್ಳಬೇಕಾಗುವ ಮುನ್ನೆಚ್ಚರಿಕೆ ಹಾಗೂ ಚಟುವಟಿಕೆಗಳ ಮಾಹಿತಿಯನ್ನು ನೀಡಿದೆ.
ತೋಟಗಳಲ್ಲಿ ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಬಸಿಗಾಲುವೆಗಳು ಇಲ್ಲದೆ ಇರುವ ತೋಟಗಳಲ್ಲಿ ರೈತರು ಅಗತ್ಯವಾಗಿ ಬಸಿಗಾಲುವೆಗಳನ್ನು ನಿರ್ಮಿಸುವುದು ಸೂಕ್ತ. ಫಸಲು ಕೊಡುವ ಪ್ರತಿ ಅಡಿಕೆ ಮರಕ್ಕೆ ಪ್ರತಿ ವರ್ಷ ಬೇಕಾಗುವ ಗೊಬ್ಬರದ ಪ್ರಮಾಣ : 100 ಗ್ರಾಂ ಸಾರಜನಕ: 40 ಗ್ರಾಂ ರಂಜಕ: 140 ಗ್ರಾಂ ಪೊಟ್ಯಾಶ್ ನೀಡಬೇಕಾಗುತ್ತದೆ, ಕಾಂಪ್ಲೆಕ್ಸ್ ಗೊಬ್ಬರ ಆಗಿದ್ದಲ್ಲಿ 266 ಗ್ರಾಂ 15:15:15 ಗೊಬ್ಬರ ನೀಡಬೇಕು, 126 ಗ್ರಾಂ ಯೂರಿಯಾ ಮತ್ತು 166 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಬೇಕಾಗುತ್ತದೆ.
ವರ್ಷದಲ್ಲಿ ಸಮ ಪ್ರಮಾಣದಲ್ಲಿ ಎರಡು ಸಲ ನೀಡಬೇಕಾಗುತ್ತದೆ. ಮೇ-ಜೂನ್ ತಿಂಗಳನಲ್ಲಿ ಪ್ರತೀ ಗಿಡಕ್ಕೆ 133 ಗ್ರಾಂ 15:15:15 ಗೊಬ್ಬರ ನೀಡಬೇಕು ಅಂದರೆ 62 ಗ್ರಾಂ ಯೂರಿಯಾ ಮತ್ತು 83 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ನೀಡಬೇಕಾಗುತ್ತದೆ. ಮುಂದುವರೆದು ಇದೇ ಪ್ರಮಾಣದ ಗೂಬ್ಬರವನ್ನು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ನೀಡಬೇಕು. ಇದರ ಜೊತೆಗೆ ಪ್ರತಿ ಮರಕ್ಕೆ ಕನಿಷ್ಠ 12 ಕೆ.ಜಿ ಕೊಟ್ಟಿಗೆ/ ಸಾವಯವ ಗೊಬ್ಬರವನ್ನು ಕೊಡಬೇಕು.
ತಯಾರಿಸುವ ವಿಧಾನ: ಒಂದು ಕಿ.ಗ್ರಾಂ. ಮೈಲುತುತ್ತನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕಿ.ಗ್ರಾಂ. ಸುಣ್ಣದ ಹರಳನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಮೈಲುತುತ್ತ ಹಾಗೂ ಸುಣ್ಣದ ತಿಳಿ ನೀರನ್ನು 80 ಲೀಟರ್ ನೀರು ಇರುವ ಪಾತ್ರೆಗೆ ಜೊತೆಯಾಗಿ ಸುರಿದು ಮಿಶ್ರಣ ಮಾಡಬೇಕು. ತಯಾರಿಸಿದ ದ್ರಾವಣ ಸಮತೋಲನವಾಗಿರುವುದನ್ನು (ಓeuಣಡಿಚಿಟ ಠಿಊ) ನೀಲಿ ಲಿಟ್ಮಸ್ (ಃಟue ಟiಣmus) ಕಾಗದ (ಠಿಊ ಠಿಚಿಠಿeಡಿ ) ಬಳಸಿ ಖಾತ್ರಿ ಮಾಡಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. (ತಾಮ್ರದ ಅಂಶವಿದ್ದಲ್ಲಿ ಃಟue ಟiಣmus ಪೇಪರ್ ದ್ರಾವಣದಲ್ಲಿ ಅದ್ದಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ) ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು. ದ್ರಾವಣವನ್ನು ಅಡಿಕೆ ಸುಳಿ ಹಾಗೂ ಕಾಯಿಗಳ ಗೊಂಚಲಿನ ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ಸಿಂಪರಣೆ ಮಾಡಬೇಕು.

ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕಾದ ಸಮಯ: ಬೋರ್ಡೋದ್ರಾವಣದ ಮೊದಲನೇ ಸಿಂಪರಣೆಯನ್ನು ಮುಂಗಾರು ಪ್ರಾರಂಭದಲ್ಲಿ ಒಂದೆರೆಡು ಮಳೆ ಬಿದ್ದ ಕೂಡಲೇ ಸಿಂಪಡಿಸಬೇಕು.(ಮೇ-ಜೂನ್ ತಿಂಗಳುಗಳು) ಎರಡನೇ ಸಿಂಪರಣೆ: ಮೊದಲ ಸಿಂಪರಣೆಯ ನಂತರ 35 ರಿಂದ 40 ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪರಣೆ ಕೈಗೊಳ್ಳಬೇಕು. ಮೂರನೇ ಸಿಂಪರಣೆ: ಮುಂದೆ ಅಗತ್ಯವಿದ್ದಲ್ಲಿ ಮೂರನೇ ಸಿಂಪರಣೆಯನ್ನು ಎರಡನೇ ಸಿಂಪರಣೆಯಾದ 35 ರಿಂದ 40 ದಿನಗಳಲ್ಲಿ ಕೈಗೊಳ್ಳಬೇಕು ಎಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
error: Content is protected !!