ಬೆಂಗಳೂರು, ಆಗಸ್ಟ್ 17
ರಾಜ್ಯ ಅಡಕೆ ಬೆಳೆಗಾರರ ಸಂಘದ ನಿಯೋಗ ಇಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಇಂದು, ನವದೆಹಲಿಯಲ್ಲಿ, ಇಂದು ಕೇಂದ್ರ ಸರ್ಕಾರದ ಅರ್ಥ, ಕೃಷಿ, ಮತ್ತು ವಾಣಿಜ್ಯ ಖಾತೆಯ ಸಚಿವರನ್ನು, ಭೇಟಿ ಮಾಡಿ ಅಡಕೆ ಬೆಳೆಗಾರ ಹಿತ ರಕ್ಷಣೆಗೆ ಅಮಾದಾಗುವ ಅಡಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಬೇಕೆಂದು ಒತ್ತಾಯಿಸಿತು.
ಅಡಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚ ಹೆಚ್ಚು ಮಾಡಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ, ನವದೆಹಲಿಗೆ ಬಂದಿದ್ದೇವೆ, ಎಂದು ಸಚಿವರು ಹೇಳಿದರು.
ಅಡಕೆ ಮೇಲಿನ ಜಿ ಎಸ್ ಟಿ ದರದ ಬಗ್ಗೆಯೂ ಕೇಂದ್ರ ಸಚಿವರ ಬಳಿ ಚರ್ಚಿಸಿ, ಮನವಿ ಸಲ್ಲಿಸಲಾಗುವುದು, ಎಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಜೀವರಾಜ್, ಬಿಜೆಪಿ ಶಾಸಕ ಶ್ರೀ ಹರತಾಳು ಹಾಲಪ್ಪ ಹಾಗೂ ಇನ್ನಿತರ ಗಣ್ಯರೂ ನಿಯೋಗದಲ್ಲಿದ್ದರು.